ಬೆಂಗಳೂರು, ಮಾ.14- ಪ್ರೀತ್ಸೆ,ಪ್ರೀತ್ಸೆ ಅಂತಾ ದುಂಬಾಲು ಬಿದ್ದ ಪೊಲೀಸಪ್ಪ ಪ್ರೀತಿಗೆ ಒಪ್ಪದ ಯುವತಿಯ ಪೋಟೋ ಹಿಡಿದು ಬ್ಲಾಕ್ ಮೇಲ್ ಮಾಡಲು ಹೋಗಿ ಜೈಲುಪಾಲಾಗಿದ್ದಾನೆ.
ಮಹಿಳಾ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಜೊತೆಗಿರುವ ಫೋಟೋಗಳನ್ನು ಹಿಡಿದು, ಪ್ರೀತಿಸುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿ ಪಿಎಸ್ಐ (ಸಹದ್ಯೋಗಿ)ಯನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಂಜಯ್ ಕುಮಾರ್ ಬಂಧಿತ ಆರೋಪಿ.ರಾಜ್ಯ ಕೈಗಾರಿಕಾ ಭದ್ರತಾಪಡೆಯಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದ ಸಂಜಯ್ ತರಬೇತಿ ವೇಳೆ ಪರಿಚಯವಾಗಿದ್ದ ಸಹದ್ಯೋಗಿ ಮಹಿಳೆ ಬಳಿ ಪ್ರೇಮ ನಿವೇದನೆ ಮಾಡಿದ್ದರು.ಆದರೆ,ಆಕೆ ಅದನ್ನು ನಿರಾಕರಿಸಿದ್ದರು.
ಆದರೂ ಬಿಡದೇ ಆಕೆಯ ಹಿಂದೆ ಸುತ್ತುತ್ತಾ ಭವಿಷ್ಯದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯಲು ಹಣಕಾಸಿನ ಅಗತ್ಯವಿದೆ ಎಂದು ಹೇಳಿ 2020ರಲ್ಲಿ 5.50 ಲಕ್ಷ ರೂ. ಹಣವನ್ನೂ ಪಡೆದುಕೊಂಡಿದ್ದ ಓದುವ ನೆಪದಲ್ಲಿ ಹತ್ತಿರವಾಗಿ ಆಕೆಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದೇ ಫೋಟೋಗಳನ್ನಿಡಿದು ಪ್ರೀತಿಸುವಂತೆ ಸಂಜಯ್ ಕುಮಾರ್ ದುಂಬಾಲು ಬಿದ್ದಿದ್ದರು ಎಂದು ದೂರು ದಾಖಲಾಗಿತ್ತು.
ಪ್ರೀತಿಯನ್ನು ನಿರಾಕರಿಸಿದರೂ ಚಾಕುವಿನಿಂದ ಕೈ ಕೊಯ್ದುಕೊಳ್ಳುವುದಾಗಿ ಬೆದರಿಸಿ ನನ್ನನ್ನು ಕರೆಸಿಕೊಳ್ಳುತ್ತಿದ್ದು ಮದ್ಯಪಾನ, ಆನ್‌ಲೈನ್ ಬೆಟ್ಟಿಂಗ್ ಚಟ ಹೊಂದಿರುವುದು ಗಮನಕ್ಕೆ ಬಂದು ನಾನು ಸುಮ್ಮನಿದ್ದೆ. ಸಂಜಯ್ ಬಳಿ ಮಾತನಾಡದಿದ್ದಾಗ ಅವರು ನನ್ನ ಕರ್ತವ್ಯದ ಸ್ಥಳದಲ್ಲಿ ಸಿಬ್ಬಂದಿಗೆ ಕರೆಮಾಡುತ್ತಿದ್ದರು. ನನ್ನ ಬ್ಯಾಚ್‌ನವರಿಗೆ ಕರೆಮಾಡಿ ನನ್ನ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ.
ನನ್ನ ಮನೆಯ ಸುತ್ತ ಚಾಕು ಹಿಡಿದು ತಿರುಗಾಡಿ ಜೀವ ಬೆದರಿಕೆ ಹಾಕಿದ್ದಾರೆ. ಕೆಲಸದ ಸ್ಥಳಕ್ಕೆ ಬಂದು ಥಳಿಸಿ ನನಗೆ ತೊಂದರೆ ಕೊಟ್ಟಿದ್ದಾರೆ. ನನ್ನ ಗೌರವ ಮತ್ತು ಘನತೆಗೆ ಚ್ಯುತಿ ತಂದಿದ್ದಾರೆ. ನೀವು ನನ್ನನ್ನು ತಿರಸ್ಕರಿಸಿದರೆ ಅಪಹರಿಸಿಕೊಂಡು ಹೋಗಿ ತಾಳಿ ಕಟ್ಟುವುದಾಗಿ ಹೇಳಿ ಬೆದರಿಕೆ ಒಡ್ಡಿದ್ದಾರೆ. ಮಾ.11ರಂದು ಸಂಜಯ್ ನನ್ನ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದಾರೆ’ ಎಂದು ಮಹಿಳಾ ಪಿಎಸ್‌ಐ ಆರೋಪಿಸಿದ್ದಾರೆ.ಈ ದೂರನ್ನು ದಾಖಲಿಸಿಕೊಂಡ ಚಂದ್ರಾ ಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸಿ ಸಂಜಯ್ ಅವರನ್ನು ಬಂಧಿಸಿದ್ದಾರೆ.
1 ಟಿಪ್ಪಣಿ
Reliable HVAC Repair Services https://serviceorangecounty.com stay comfortable year-round with our professional HVAC repair services. Our experienced team is dedicated to diagnosing and resolving heating, cooling, and ventilation issues quickly and effectively.