ಅಮೆರಿಕಾದ ಅಧ್ಯಕ್ಷ ಬೈಡೆನ್ ಅವರು ಅಮೆರಿಕಾದ ವಾಯುಪಡೆ ತರಬೇತಿ ಸಂಸ್ಥೆಯಲ್ಲಿ ತೇರ್ಗಡೆಯಾದ ಕೆಡೆಟ್ ಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಭಾಷಣ ಮಾಡಿದ ನಂತರ ಕೆಡೆಟ್ ಗಳ ಕೈಕುಲುಕಿ ಹಿಂದಕ್ಕೆ ಹೋಗುತ್ತಿದ್ದಾಗ ವೇದಿಕೆಯ ಮೇಲೆ ಮುಗ್ಗರಿಸಿಬಿದ್ದು ಕೆಲಕಾಲ ಆತಂಕ ನಿರ್ಮಾಣವಾಗಿತ್ತು. ಅಮೆರಿಕಾದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ತಾವೇ ಸ್ಪರ್ಧಿಸುವುದಾಗಿ ಸಾರಿರುವ ಜೋ ಬೈಡೆನ್ ಹೀಗೆ ಅನೇಕ ಬಾರಿ ಮುಗ್ಗರಿಸುವುದು ಬೀಳುವುದು ಬುದ್ಧಿಯ ಮೇಲೆ ಹಿಡಿತವಿಲ್ಲದಂತೆ ಮಾತನಾಡುವುದು ಎಲ್ಲವೂ ನಡೆದಿದೆ. ಇವೆಲ್ಲವನ್ನೂ ನೋಡಿ ಅಮೆರಿಕನ್ನರು ಬೈಡನ್ ಅವರು ಇನ್ನೊಂದು ಬಾರಿ ಅಧ್ಯಕ್ಷರಾಗಲು ಸೂಕ್ತರೇ ಎಂದು ಯೋಚಿಸತೊಡಗಿದ್ದಾರೆ. ವೇದಿಕೆಯ ಮೇಲೆ ಇದ್ದ ಒಂದು ಸಣ್ಣ ಕಪ್ಪು ಬಣ್ಣದ ಮರಳು ಚೀಲವನ್ನು ನೋಡದೆ ಹೆಜ್ಜೆ ಹಾಕಿ ಬೈಡನ್ ಅವರು ಬೀಳುವಂತೆ ಆಯಿತು ಎಂದು ವರದಿಯಾಗಿದೆ. ಆಗ ತಕ್ಷಣ ಸ್ಪಂದಿಸಿದ ಏರ್ ಫೋರ್ಸ್ ಅಧಿಕಾರಿಗಳ ಸಮಯ ಪ್ರಜ್ಞೆಯ ಕಾರಣದಿಂದಾಗಿ ಅಮೆರಿಕದ ಅಧ್ಯಕ್ಷರು ಹೆಚ್ಚು ಘಾಸಿಗೊಳ್ಳದೆ ಬಚಾವಾದರು ಎನ್ನಲಾಗಿದೆ
ವೇದಿಕೆಯ ಮೇಲೆ ಮುಗ್ಗರಿಸಿ ಬಿದ್ದ ಅಮೇರಿಕಾ ಅಧ್ಯಕ್ಷ
Previous Articleಬೆಸ್ಕಾಂ ಅಧಿಕಾರಿಗಳ ಮೈಚಳಿ ಬಿಡಿಸಿದ ಕೆ.ಜೆ. ಜಾರ್ಜ್ | KJ George
Next Article ಹತ್ಯೆ ಪ್ರಕರಣ ಬೇಧಿಸಿದ ಕಿಂಗ್ ಕೊಹ್ಲಿ
5 ಪ್ರತಿಕ್ರಿಯೆಗಳು
срочный ремонт стиральных машин https://centr-remonta-stiralnyh-mashin.ru/ .
индийский пасьянс онлайн бесплатно на ближайшее будущее индийский пасьянс онлайн бесплатно на ближайшее будущее .
автоматические карнизы http://www.provorota.su .
капельница от запоя вызов капельница от запоя вызов .
дешевые семена почтой semenaplus74.ru .