ಬೆಂಗಳೂರು: ಅ,5 – ಬಿಗ್ ಬಾಸ್ 11 ಸೀಸನ್ ನಲ್ಲಿ ಲಾಯರ್ ಜಗದೀಶ್ ಎಂದು ಪ್ರಚಾರ ಪಡೆಯುತ್ತ ಮನೆಯಲ್ಲಿ ಅಲ್ಲೋಲ ಕಲ್ಲೋಲ ನಡೆಸಿದ್ದ ಜಗದೀಶ್ ವಿರುದ್ಧ ಸೀಸನ್ 9 ರ ಸ್ಪರ್ಧಿ ಪ್ರಶಾಂತ್ ಸಂಬರಗಿರವರು ಇವರು ವಕೀಲರೇ ಅಲ್ಲ ಸುಳ್ಳು ಮಾಹಿತಿಯನ್ನು ನೀಡಿ ಲಾಯರ್ ಪದವಿಯನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ದೆಹಲಿಯ ಅಡ್ವೋಕೇಟ್ ಬಾರ್ ಕೌನ್ಸಿಲ್ ನೀಡಿದ್ದ ಲೈಸೆನ್ಸ್ ಜಗದೀಶ್ ಬಗ್ಗೆ ನೀಡಿರುವ ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇವರು ಫೇಕ್ PUC ಮಾರ್ಕ್ಸ್ ಕಾರ್ಡ್ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಮಾಡಿ, ದೆಹಲಿಯ ಬಾರ್ ಕೌನ್ಸಿಲ್ ನಲ್ಲಿ ವಕೀಲ ವೃತ್ತಿಗೆ ಅನುಮತಿ ಪಡೆದಿದ್ದರು. ನಂತರದಲ್ಲಿ ಇವರು ನೀಡಿರುವ ಮಾರ್ಕ್ಸ್ ಕಾರ್ಡ್ ನಕಲಿ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲಿಕೆ ಸನ್ನದು (ಅಡ್ವೋಕೇಟ್ ಬಾರ್ ಕೌನ್ಸಿಲ್ ನೀಡಿದ್ದ ಲೈಸೆನ್ಸ್) ಅನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿತ್ತು.
ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಅದನ್ನು ಪದವಿ ಕಾಲೇಜಿಗೆ ಕೊಟ್ಟು ಡಿಗ್ರಿ ಮಾಡಿದ್ದಾರೆ. ನಂತರ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿದ್ದಾರೆ. ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ಎಲ್‌ಎಲ್‌ಬಿ ಮೇಲೆ ಬಾರ್ ಕೌನ್ಸಿಲ್‌ನಿಂದ ವಕೀಲಿಕೆ ಸನ್ನದು ಪಡೆದಿದ್ದಾರೆ. ಇವರದ್ದು ನಕಲಿ ಸರ್ಟಿಫಿಕೇಟ್ ಎಂದು ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿಗೆ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ನಂತರದಲ್ಲಿ ಅಂದ್ರ ಪ್ರದೇಶದ ಕಾರ್ನುಲ್ ಅಲ್ಲಿಯೂ ಇವರ ವಕೀಲಿಕೆ ಸನ್ನದು ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಇದೆ ವಿಷಯವಾಗಿ ಬೆಂಗಳೂರು ವಕೀಲರ ಸಂಘ ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿರುವ ಕಲರ್ಸ್ ಕನ್ನಡ ಚಾನಲ್ ಗೆ ನೋಟಿಸ್ ನೀಡಿದ್ದು ಬೆಂಗಳೂರು ವಕೀಲರ ಸಂಘ ಏಷ್ಯಾದಲ್ಲಿಯೇ ಉತ್ತಮ ಸಂಘವಾಗಿದ್ದು ಅದಕ್ಕೆ ಮಸಿ ಬಳಿಯುವುದನ್ನು ಸಹಿಸಲಾಗುವುದಿಲ್ಲ. ನಕಲಿ ಮಾಹಿತಿ ನೀಡಿ ಪದವಿ ಪಡೆದ ಜಗದೀಶ್ ರವರನ್ನು ವಕೀಲರು ಎಂದು ತೋರಿಸುತ್ತಿರುವುದು ಸಂಘಕ್ಕೆ ಮತ್ತು ಸದಸ್ಯರಿಗೆ ನೋವುಂಟು ಮಾಡಿದ್ದೂ ಇದರ ವಿರುದ್ಧ ಸಂಘದ ಸದಸ್ಯರು ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ.
ಕೆ.ನ್ ಜಗದೀಶ್ ರವರಿಗೆ 5 ತಿಂಗಳ ಹಿಂದೆಯೇ ‘ಕರ್ನಾಟಕ ರಾಜ್ಯ ವಕೀಲರ ಪರಿಷತ್ತು’ ಕರ್ನಾಟಕದಲ್ಲಿ ಕಾನೂನು ವೃತ್ತಿ ನಡೆಸದಂತೆ ಆದೇಶ ಹೊರಡಿಸಿರುತ್ತದೆ. ‘ದೆಹಲಿ ಬಾರ್ ಕೌನ್ಸಿಲ್’ ರವರು ಸಹ ನೋಂದಣಿ ಸಮಯದಲ್ಲಿ ಇವರು ನೀಡಿರುವ ದಾಖಲಾತಿಯನ್ನು ಪರಿಶೀಲಿಸಿ ನಕಲಿ ಎಂದು ದೃಢ ಪಟ್ಟಾಗ ನೋಂದಣಿಯನ್ನು ರದ್ದುಗೊಳಿಸಿ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ನೀಡಿದೆ. ಇದನ್ನು ತಮ್ಮ ವಾಹಿನಿಯ ಮುಖ್ಯಸ್ಥರು ಪರಿಗಣಿಸಿ ಸುಳ್ಳು ಮಾಹಿತಿ ನೀಡುವುದನ್ನು ತಡೆಯಬೇಕು ಪುನಃ ಇದೆ ತಪ್ಪು ನಡೆದಲ್ಲಿ ವಾಹಿನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಲರ್ಸ್ ಕನ್ನಡ ಚಾನಲ್ ಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಮತ್ತು ಪ್ರದಾನ ಕಾರ್ಯದರ್ಶಿ ಟಿ.ಜಿ ರವಿ ನೋಟಿಸ್ ನೀಡಿದ್ದಾರೆ
ಈ ಫೇಕ್ ವಕೀಲ್ ಜಗದೀಶ್ ವಿರುದ್ಧ ಸುಮಾರು 20 ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳು ಬಾಕಿ ಉಳಿದಿರುವುದನ್ನು ಉಲ್ಲೇಖಿಸಬಹುದು.