ಗದಗ: ಕಲುಷಿತ ಬಿಸಿಯೂಟ ಸೇವನೆಯಿಂದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡದಲ್ಲಿ ನಡೆದಿದೆ.
ಇಲ್ಲಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.
ಸರಿಯಾಗಿ ಬೇಯಿಸದ ಅನ್ನ ಮತ್ತು ಹುಳು ಮಿಶ್ರಿತ ಬಿಸಿಯೂಟ ಸೇವನೆಯಿಂದ ಘಟನೆ ನಡೆದಿದೆ ಎನ್ನುವುದು ಮಕ್ಕಳ ಆರೋಪ. ಬಿಸಿ ಊಟ ಸೇವಿಸಿದ ಬಳಿಕ ವಾಂತಿ, ಬೇಧಿಯಿಂದ ಮಕ್ಕಳು ಬಳಲುತ್ತಿದ್ದಾರೆ.
ಘಟನೆಯಿಂದ ಅಸ್ವಸ್ಥಗೊಂಡ ಮಕ್ಕಳನ್ನು ಪಾಲಕರು ಬೈಕ್ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಸ್ವಸ್ಥ ವಿದ್ಯಾರ್ಥಿಗಳನ್ನು ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.