Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2023
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಟಿಕೆಟ್ ವಂಚನೆಯಲ್ಲಿ ಬಿಜೆಪಿ, ಸಂಘ ಪರಿವಾರ ಮುಖಂಡರು..? | Chaitra Kundapura
    Trending

    ಟಿಕೆಟ್ ವಂಚನೆಯಲ್ಲಿ ಬಿಜೆಪಿ, ಸಂಘ ಪರಿವಾರ ಮುಖಂಡರು..? | Chaitra Kundapura

    vartha chakraBy vartha chakraಸೆಪ್ಟೆಂಬರ್ 14, 2023ಯಾವುದೇ ಟಿಪ್ಪಣಿಗಳಿಲ್ಲ4 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಬೆಂಗಳೂರು, ಸೆ.14- ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಪಡೆದು ವಂಚಿಸಿರುವ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಗ್ಯಾಂಗ್ ನ ಕ್ವೀನ್ ಪಿನ್  ಚೈತ್ರಾ ಕುಂದಾಪುರ ವಲ ವಿಚಾರಣೆ ವೇಳೆ ಈ ಜಾಲದ  ಹಿಂದೆ ದೊಡ್ಡ ದೊಡ್ಡ ನಾಯಕರಿರುವ ಆಘಾತಕಾರಿ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ.
    ಸದ್ಯ ಪ್ರಕರಣದಲ್ಲಿ ನಾಪತ್ತೆಯಾಗಿರುವ ಸ್ವಾಮೀಜಿ ಬಂಧನವಾದರೆ, ಸಂಘ ಪರಿವಾರ ಮತ್ತು ಬಿಜೆಪಿಯ ಹಲವು ನಾಯಕರ‌ ನಿಜ ಬಣ್ಣ ಬಯಲಿಗೆ ಬರಲಿದೆ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

    ಉಡುಪಿಯ ಕೃಷ್ಣಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ಚೈತ್ರಾ ಕುಂದಾಪುರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ.
    ವಿಚಾರಣೆಯಲ್ಲಿ ಚೈತ್ರಾ ಕುಂದಾಪುರ ನೀಡಿರುವ ಹೇಳಿಕೆಯಲ್ಲಿ ಜಾಲದ ಹಿಂದೆ ದೊಡ್ಡ ನಾಯಕನಿರುವ ವಿಷಯ ಭಾರಿ ಚರ್ಚೆಗೆ ಕಾರಣವಾಗಿ ರಾಜಕೀಯ ವಲಯದಲ್ಲಿ ಕೋಲಾಹಲ ಉಂಟುಮಾಡಿದೆ.
    ತಲೆ ಮರೆಸಿಕೊಂಡಿರುವ ಸ್ವಾಮೀಜಿ ಸಿಕ್ಕಿ ಹಾಕಿಕೊಳ್ಳಲಿ, ಎಲ್ಲ ಸತ್ಯ ಹೊರಗಡೆ ಬರುತ್ತೆ, ದೊಡ್ಡ ದೊಡ್ಡವರ ಹೆಸರೆಲ್ಲ ಹೊರಗಡೆ ಬರುತ್ತದೆ. ನಾನು ಮೊದಲ ಆರೋಪಿಯಾಗಿರಬಹುದು. ಆದರೆ ನಿಜವಾದ ಅಪರಾಧಿ ಯಾರು ಎಂಬ ಸತ್ಯ ಹೊರಗೆ ಬರುತ್ತದೆ ಎಂದು ಆಕೆ ಹೇಳಿದ್ದಾರೆ.

    ಚೈತ್ರಾ ಕುಂದಾಪುರ (Chaitra Kundapura) ಅವರು ಸ್ವಾಮೀಜಿ ಎಂದು ಉಲ್ಲೇಖ ಮಾಡುತ್ತಿರುವುದು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಿರೇಹಡಗಲಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಎನ್ನುವುದು ತನಿಖೆಯಲ್ಲಿ ಕಂಡುಬಂದಿದೆ.
    ಅಭಿನವ ಹಾಲಶ್ರೀ ಸ್ವಾಮೀಜಿ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಮೂರನೇಯವರಾಗಿದ್ದಾರೆ, ಅವರು ಗೋವಿಂದ ಪೂಜಾರಿ ಅವರಿಂದ ನೇರವಾಗಿ  1.5 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.
    ಬೈಂದೂರು ಕ್ಷೇತ್ರದ ಟಿಕೆಟ್‌ ಬೇಕು ಎಂದು ಕೇಳಿದ ಗೋವಿಂದ ಪೂಜಾರಿ ಅವರನ್ನು ಚೈತ್ರಾ ಕುಂದಾಪುರ ಮತ್ತವರ ಗ್ಯಾಂಗ್ ಹೂವಿನ ಹಡಗಲಿಯ ಮಠಕ್ಕೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಲಾಗಿದೆ.
    ಅಲ್ಲಿ ಟಿಕೆಟ್‌ ಕೊಡಿಸುವ ಭರವಸೆ ನೀಡಿರುವ ಸ್ವಾಮೀಜಿ 1.5 ಕೋಟಿ ರೂ. ಕೊಡಬೇಕು ಎಂದು ಕೇಳಿದ್ದಾರೆ ಮತ್ತು ಅದನ್ನು ಜಯನಗರದಲ್ಲಿರುವ ಕಚೇರಿಗೇ ಕೊಂಡೊಯ್ದು ಒಪ್ಪಿಸಲಾಗಿದೆ. ಈ ವಿಚಾರವನ್ನು ಗೋವಿಂದ ಪೂಜಾರಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ಎಫ್‌ಐಆರ್‌ನಲ್ಲಿ ಏನಿದೆ?
    2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶ್ವನಾಥ್ ಜೀ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕಾಲ್‌ ಮಾಡಿ, ಕರ್ನಾಟಕದ ಬಿಜೆಪಿ ಟಿಕೆಟ್‌ಗೆ ಸಂಬಂಧಿಸಿ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಭೇಟಿಯಾಗಿ ಎಂಬ ಸಲಹೆಯನ್ನು ಗೋವಿಂದ ಪೂಜಾರಿಗೆ ನೀಡಲಾಗುತ್ತದೆ.

     

    Success story of a Persistent person who treated failure as steps to  success: Sri Govind Babu Poojary
    ಗೋವಿಂದ ಪೂಜಾರಿ ಅವರು ಬೆಂಗಳೂರಿನಿಂದ ಹೊಸಪೇಟೆಗೆ ಹೋಗಿ ಅಭಿನವ ಹಾಲಶ್ರೀ ಸ್ವಾಮೀಜಿಯ ಮುಂದೆ ಕುಕ್ಕರುಗಾಲಲ್ಲಿ ಕೂರುತ್ತಾರೆ. ಆಗ ಸ್ವಾಮೀಜಿಯವರು, ʻʻಗೋವಿಂದ ಪೂಜಾರಿಯವರೇ ವಿಶ್ವನಾಥಜೀ ಅವರು ಎಲ್ಲ ವಿಷಯ ತಿಳಿಸಿದ್ದಾರೆ. ಅವರು ಆಯ್ಕೆ ಸಮಿತಿಯಲ್ಲಿ ಹಿರಿಯ ಸದಸ್ಯರಾಗಿದ್ದಾರೆ. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಟ್ಟಿದ್ದು. ನನಗೆ ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದೆ. ಖಂಡಿತ ಟಿಕೆಟ್‌ ಕೊಡಿಸೋಣ. ಆದರೆ, ಮುಂದಿನ ಪ್ರಕ್ರಿಯೆಯಾಗಿ1.5 ಕೋಟಿ ರೂ ಬೇಕಾಗುತ್ತದೆ ಎಂದರು.

    ಗೋವಿಂದ ಪೂಜಾರಿ ಅವರು ಸ್ವಲ್ಪ ಕಾಲಾವಕಾಶ ಕೇಳುತ್ತಾರೆ. ಕೊನೆಗೆ 2023ರ ಜ. 16ರಂದು ಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ 1.5 ಕೋಟಿ ರೂ.ಯನ್ನು ನೀಡುತ್ತಾರೆ ಗೋವಿಂದ ಪೂಜಾರಿ. ಟಿಕೆಟ್‌ ಸಿಗದಿದ್ದರೆ ಹಣ ವಾಪಸ್‌ ಎಂಬ ಭರವಸೆಯನ್ನು ಸ್ವಾಮೀಜಿ ಕೂಡಾ ನೀಡುತ್ತಾರೆ.
    ಈ ನಡುವೆ, ಟಿಕೆಟ್‌ ಸಿಗದೆ ಇದ್ದಾಗ ಸಿಟ್ಟುಗೊಂಡ ಗೋವಿಂದ ಪೂಜಾರಿ ಅವರು ದೂರು ಕೊಡಲು ಮುಂದಾದಾಗ ಸ್ವಾಮೀಜಿ ನಾನು ನಿಮ್ಮ ಹಣವನ್ನು ವಾಪಸ್‌ ಕೊಡುತ್ತೇನೆ. ಈ ಕೇಸಿನಲ್ಲಿ ನನ್ನನ್ನು ಬಿಟ್ಟುಬಿಡಿ ಎನ್ನುತ್ತಾರೆ!

    ಚೈತ್ರಾ ಹೇಳಿಕೆಯ ಹಿಂದೆ:
    ಇದೀಗ ಚೈತ್ರಾ ಕುಂದಾಪುರ (Chaitra Kundapura) ಅವರ ಸ್ವಾಮೀಜಿಯ ವಿಚಾರಣೆ ನಡೆದರೆ ದೊಡ್ಡ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳಿರುವುದರ ಹಿಂದೆ ಏನಿದೆ ಎಂದು ಗಮನಿಸಿದರೆ, ಒಂದೊಮ್ಮೆ ಸ್ವಾಮೀಜಿ ಬಂಧನವಾದರೆ ಅವರ ಜತೆ ಸಂಪರ್ಕದಲ್ಲಿರುವ ನಾಯಕರ ಬಣ್ಣವೂ ಬಯಲಾಗಲಿದೆ.
    ವಂಚನಾ ಜಾಲದಲ್ಲಿರುವ ಅಧಿಕೃತ ಮತ್ತು ನಿಜವಾದ ಪಾತ್ರ ಸ್ವಾಮೀಜಿ ಅವರದು ಮಾತ್ರ. ಉಳಿದುದೆಲ್ಲವೂ ಹಣಕ್ಕಾಗಿ ಮಾಡಿದ ಪಾತ್ರಗಳು. ಟಿಕೆಟ್‌ ಬಗ್ಗೆ ಬಿಜೆಪಿ ವಲಯದ ಜತೆಗೆ ಸಂಪರ್ಕ ಇರುವ ವ್ಯಕ್ತಿ ಎಂಬ ನೆಲೆಯಲ್ಲಿ ಮಾತುಕತೆ ನಡೆದಿರುವುದು ಸ್ವಾಮೀಜಿ ಜತೆಗೆ ಮಾತ್ರ.
    ಸ್ವಾಮೀಜಿಯವರು ಹಲವಾರು ನಾಯಕರ ಜತೆ ನಿಕಟ ಸಂಪರ್ಕ ಹೊಂದಿರುವುದು, ಮಾತುಕತೆ ವೇಳೆ ತನಗೆ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ ಜತೆ ಒಡನಾಟವಿದೆ ಎಂದು ಹೇಳಿರುವುದು ಹಾಗೂ ಈ ಟಿಕೆಟ್‌ಗಾಗಿ ಒಂದುವರೆ ಕೋಟಿ ಕೊಡಬೇಕು ಎಂದು ಕೇಳಿರುವುದು ಸಂಶಯಗಳಿಗೆ ಕಾರಣವಾಗಿದೆ.

    ಸ್ವಾಮೀಜಿ ಸೆರೆಗೆ ಶೋಧ:
    ಈ ಪ್ರಕರಣದಲ್ಲಿ ಇದುವರೆಗೂ ಹಾಲಶ್ರೀ ಸ್ವಾಮೀಜಿ ಬಂಧನ ಆಗಿಲ್ಲ. ಅವರು ಸಿಸಿಬಿ ವಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅಧಿಕೃತವಾಗಿ ಹೇಳಲಾಗಿಲ್ಲ.
    ಹಾಗಿದ್ದರೆ ಹಿಂದು ಸಂಘಟನೆಗಳನ್ನು ಬೆಂಬಲಿಸುವುದರಲ್ಲಿ ಮುಂಚೂಣಿಯಲ್ಲಿದ್ದ ಸ್ವಾಮೀಜಿ, ರಾಜಕಾರಣಿಗಳ ಜತೆ ನಿಕಟ ಸಂಪರ್ಕದಲ್ಲಿರುವ ಮಾಹಿತಿಯಿದ್ದು,
    ಚೈತ್ರಾ ಕುಂದಾಪುರ ಅವರ ಜೊತೆಗೆ ಬಂಧಿತ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

    ಮೊಬೈಲ್ ಪರಿಶೀಲನೆ:
    ಈಗಾಗಲೇ ಬಂಧಿತರ ಎಲ್ಲಾ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ಯಾರೆಲ್ಲ ವಂಚನೆಯಲ್ಲಿ ಇವರ ಜೊತೆ ಭಾಗಿಯಾಗಿದ್ದಾರೆ, ಜೊತೆಗೆ ಎಷ್ಟು ದಿನದಿಂದ ಕೃತ್ಯ ಎಸಗುತ್ತಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
    ಎಲ್ಲಾ ಆರೋಪಿಗಳ ಮೊಬೈಲ್ ಕಾಲ್ ಲಿಸ್ಟ್ ಪಡೆಯಲಾಗುತ್ತಿದೆ.ಪ್ತಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್‌ ಚಾಟಿಂಗ್ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಕೋರ್ಟ್ ಅನುಮತಿ ಪಡೆದು ಮೊಬೈಲ್ ರಿಟ್ರೀವ್ ಮಾಡಿಸಲು ತೀರ್ಮಾನಿಸಲಾಗಿದೆ.

    ಒಪ್ಪಿಕೊಂಡ ಪ್ರಸಾದ್ :
    ವಿಚಾರಣೆ ವೇಳೆ ನಾನು ಹಣ ಪಡೆದಿಲ್ಲವೆಂದು ಚೈತ್ರಾ ಕುಂದಾಪುರ ವಾದ ಮುಂದುವರಿಸಿದ್ದರೂ, ವಂಚನೆಯಲ್ಲಿ ಚೈತ್ರಾ ಸಹಚರರಾಗಿದ್ದವರು ಸಿಸಿಬಿ ಪೊಲೀಸರ ಎದುರು ಬಾಯಿಬಿಟ್ಟಿದ್ದಾರೆ. ಚೈತ್ರಾ ಕುಂದಾಪುರಗೆ ಗೋವಿಂದ ಪೂಜಾರಿಯನ್ನು ಪರಿಚಯ ಮಾಡಿಸಿದ್ದೆ ಎಂದು ಸಿಸಿಬಿ ಅಧಿಕಾರಿಗಳ ಎದುರು ಪ್ರಸಾದ್‌ ಒಪ್ಪಿಕೊಂಡಿದ್ದಾನೆ. ಇತ್ತ ಶಿವವೊಗ್ಗ ಆರ್‌ಎಸ್‌ಎಸ್ ಕಚೇರಿ ಎದುರು 50 ಲಕ್ಷ ರೂ. ಹಣ ಪಡೆದಿರುವ ಬಗ್ಗೆ ಗಗನ್ ಕಡೂರು ಒಪ್ಪಿಕೊಂಡಿದ್ದು, 50 ಲಕ್ಷದಲ್ಲಿ ಚೈತ್ರಾಗೆ ಅರ್ಧ ಹಣ ನೀಡಿರುವ ಬಗ್ಗೆ ತಿಳಿಸಿದ್ದಾನೆ.

    ದೂರು ನೀಡಲು ಮನವಿ:
    ಗೋವಿಂದ ಪೂಜಾರಿ ಮಾತ್ರವಲ್ಲದೆ ಮತ್ತಷ್ಟು ಜನರಿಗೆ ಚೈತ್ರಾ ಹೀಗೆ ಮೋಸ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹೆಸರಲ್ಲಿ ಮತ್ತಷ್ಟು ಜನರಿಗೆ ಮೋಸ ಮಾಡಿರಬಹುದು ಎಂಬ ಆಯಾಮದಲ್ಲಿ ಸಿಸಿಬಿ ಪೊಲೀಸರಿಂದ ತನಿಖೆ ನಡೆದಿದೆ. ಮೋಸ ಹೋಗಿದ್ದರೆ ಬಂದು ದೂರು ನೀಡುವಂತೆ ಸಿಸಿಬಿ ಪೊಲೀಸರು ಮನವಿ‌ ಮಾಡಿದ್ದಾರೆ.

    Bangalore BJP Chaitra Kundapura crime Karnataka kundapura NDA News Politics ಉಡುಪಿ ಚುನಾವಣೆ ನ್ಯಾಯ ರಾಜಕೀಯ
    Share. Facebook Twitter Pinterest LinkedIn Tumblr Email
    Previous Articleರಾಜ್ಯದ 195 ತಾಲ್ಲೂಕುಗಳು ಬರ ಪೀಡಿತ | Drought
    Next Article ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವಿಲ್ಲ | Cauvery
    vartha chakra
    • Website

    Related Posts

    ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದವರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ | DK Shivakumar

    ಅಕ್ಟೋಬರ್ 4, 2023

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    ಅಕ್ಟೋಬರ್ 4, 2023

    ಜಾತಿ ಜನಗಣತಿ ಬಹಿರಂಗ ಯಾಕಿಲ್ಲ? | Karnataka Caste Census

    ಅಕ್ಟೋಬರ್ 3, 2023

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದವರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ | DK Shivakumar

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    BMTC ಗೆ 17 ಕೋಟಿ ನಾಮ ಹಾಕಿದ ಅಧಿಕಾರಿಗಳು

    ಜಾತಿ ಜನಗಣತಿ ಬಹಿರಂಗ ಯಾಕಿಲ್ಲ? | Karnataka Caste Census

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • canada pharmacy online no script ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • giant discount pharmacy ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • prednisone mexican pharmacy ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    Latest Kannada News

    ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದವರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ | DK Shivakumar

    ಅಕ್ಟೋಬರ್ 4, 2023

    ತೆರಿಗೆ ವಂಚಕರ ಚಳಿ ಬಿಡಿಸಿದ IT Raid

    ಅಕ್ಟೋಬರ್ 4, 2023

    BMTC ಗೆ 17 ಕೋಟಿ ನಾಮ ಹಾಕಿದ ಅಧಿಕಾರಿಗಳು

    ಅಕ್ಟೋಬರ್ 4, 2023
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2023
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
    Subscribe