ಮಂಡ್ಯದ ಶ್ರೀರಂಗಪಟ್ಟಣದ ಬಳಿಯ ನಿಮಿಷಾಂಭ ದೇಗುಲದ ಬಳಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದೆ. ಕಾರ್ ನದಿಯಲ್ಲಿರುವ ಬಗ್ಗೆ ಪೊಲೀಸರಿಗೆ ಸ್ಥಳೀಯ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು
ನದಿಯಿಂದ ಕಾರನ್ನು ಹೊರ ತೆಗೆಸಿ ವಿಚಾರಣೆ ಆರಂಭಿಸಿದ್ದು, ವಿಚಾರಣೆ ವೇಳೆ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆಂಗಳೂರಿನ ವ್ಯಕ್ತಿಯಿಂದ ನದಿಗೆ ಕಾರು ಮುಳುಗಡೆ ಆಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪೇಶ್ ತನ್ನ ತಾಯಿ ನಿಧನದ ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಶ್ರೀರಂಗಪಟ್ಟಣಕ್ಕೆ ಬಂದು ನದಿಯಲ್ಲಿ ಕಾರು ಮುಳುಗಿಸಿ ರೂಪೇಶ್ ವಾಪಸ್ಸು ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಾರ್ ಪತ್ತೆ ಬಳಿಕ ಪೊಲೀಸರು ಪರಿಶೀಲನೆ ನಡೆಸಿ ಕಾರು ಮಾಲೀಕನ್ನು ಪಟ್ಟಣದ ಠಾಣೆಗೆ ಕರೆದು ತಂದು ವಿಚಾರಣೆ ನಡೆಸಿದಾಗ, ಆ ವ್ಯಕ್ತಿ ಅಸಂಬದ್ದ ಹೇಳಿಕೆ ನೀಡುತ್ತಿದ್ದರಿಂದ ಕಂಗಾಲಾಗಿದ್ದರು.
ಬಳಿಕ ಸಂಬಂಧಿಕರನ್ನು ಠಾಣೆಗೆ ಬಂದು ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸಂಬಂಧಿಕರ ಹೇಳಿಕ ಆಧರಿಸಿ ಪ್ರಕರಣ ಖುಲಾಸೆ ಮಾಡಿದ್ದಾರೆ.
ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಪತ್ತೆ..!!
Previous Articleಕಾರವಾರ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗ
Next Article ನಮ್ಮ ದೇಗುಲ ನಮಗೆ ಕೊಡಿ: ಜೈನ, ಬೌದ್ಧರ ಆಗ್ರಹ