ಬ್ರಹ್ಮಾಸ್ತ್ರ ಭಾಗ ಒಂದರ ಬಹು ನಿರೀಕ್ಷಿತ ಟ್ರೈಲರ್: ಶಿವ ಇಂದು ಬಿಡುಗಡೆ ಆಗಿದೆ ಅಯನ್ ಮುಖರ್ಜಿ ನಿರ್ದೇಶನದ ಟ್ರೈಲಾಜಿಯಲ್ಲಿ ಇದು ಮೊದಲನೆಯದು. ವೇಕ್ ಅಪ್ ಸಿದ್ ನಿರ್ದೇಶಕರ ಇದೊಂದು ಕಾಲ್ಪನಿಕ ಪುರಾಣ ಕಥಾಚಿತ್ರ . ಚಿತ್ರದಲ್ಲಿ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ ಅಕ್ಕಿನೇನಿ, ಮೌನಿ ರಾಯ್ ಮತ್ತು ಶಾರುಖ್ ಖಾನ್ ನಟಿಸಿದ್ದಾರೆ,
‘ಬ್ರಹ್ಮಾಸ್ತ್ರ’ವನ್ನು ರೂಪಿಸುವ ನೀರು, ಬೆಂಕಿ, ಗಾಳಿ – ವಿವಿಧ ‘ಅಸ್ತ್ರ’ಗಳ ಬಗ್ಗೆ ಅಮಿತಾಬ್ ಬಚ್ಚನ್ ಮಾತನಾಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ರಣಬೀರ್ ತನ್ನಲ್ಲಿರುವ ಶಕ್ತಿಗಳನ್ನು ಮರೆತಿರುವ ಯುವಕ. ಅವನು ಇಶಾ (ಆಲಿಯಾ ಭಟ್) ಳನ್ನು ಭೇಟಿಯಾಗುತ್ತಾನೆ ಮತ್ತು ಅವರು ಪರಸ್ಪರ ಪ್ರೀತಿಸುತ್ತಾರೆ. ಈ ನಡುವೆ ಶಿವನನ್ನು ಸೋಲಿಸಲು ದುಷ್ಟ ಶಕ್ತಿಗಳು ಕೈಜೋಡಿಸುವುದನ್ನು ನಾವು ನೋಡುತ್ತೇವೆ. ಟ್ರೇಲರ್ ನಮಗೆ ಮೌನಿ ರಾಯ್, ಅಮಿತಾಬ್ ಮತ್ತು ನಾಗಾರ್ಜುನ ಪಾತ್ರಗಳ ಲುಕ್ ತೋರಿಸುತ್ತದೆ.
ಸಿನಿಮಾವನ್ನು ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್ಲೈಟ್ ಪಿಕ್ಚರ್ಸ್ ನಿರ್ಮಿಸಿದೆ ಮತ್ತು ಸೆಪ್ಟೆಂಬರ್ 9 ರಂದು 5 ಭಾರತೀಯ ಭಾಷೆಗಳಲ್ಲಿ – ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಎಸ್ ಎಸ್ ರಾಜಮೌಳಿ ಈ ಚಿತ್ರವನ್ನು ಪ್ರಸಾರ ಮಾಡಲಿದ್ದಾರೆ..
Previous Articleದೇಶದಲ್ಲಿ ಕೊರೋನಾ ಏರುಮುಖ: 8,882 ಮಂದಿಗೆ ಸೋಂಕು, 15 ಜನ ಸಾವು
Next Article ಮೈಕಾಸುರನಿಗೆ ಬ್ರೇಕ್..