ಬೆಂಗಳೂರು,ಡಿ.17- ಮುಂಬೈ ಮೂಲದ ಸೈಬರ್ ವಂಚಕರು ಸಿಬಿಐ ಪೊಲೀಸರ ಹೆಸರಿನಲ್ಲಿ ನಗರದ 83 ವರ್ಷದ ವೃದ್ದೆಗೆ 1 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಮುಂಬಯಿ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿಗಳು, “ನಿಮ್ಮ ಮತ್ತೊಂದು ದೂರವಾಣಿ ಸಂಖ್ಯೆಯಿಂದ ಮನಿ ಲ್ಯಾಂಡರಿಂಗ್ ನಡೆಯುತ್ತಿದೆ. ನಿಮ್ಮ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ದಾಖಲಾಗಿದೆ ಎಂದು ವೃದ್ಧೆಗೆ ಬೆದರಿಕೆ ಹಾಕಿ
ಆಕೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿದ್ದಾರೆ. ಆರೋಪಿಗಳ ಬೆದರಿಕೆಗೆ ಹೆದರಿದ ವೃದ್ಧೆ ಆರೋಪಿಗಳ ಖಾತೆ ಹಂತ ಹಂತವಾಗಿ 32 ಲಕ್ಷ ರೂ., 50 ರೂ. ಲಕ್ಷ, 32 ಲಕ್ಷ ರೂ., 10 ಲಕ್ಷ ರೂ. ಒಟ್ಟು 1.24 ಕೋಟಿ ರೂ. ಸೈಬರ್ ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಹಣ ಖಾತೆಗೆ ಜೆಮೆಯಾದ ಬಳಿಕ ಆರೋಪಿಗಳು ಮತ್ತೆ ಸಂಪರ್ಕಿಸಿದ ಹಿನ್ನೆಲೆಯಲ್ಲಿ ವೃದ್ಧೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ, ವಂಚನೆಗೆ ಒಳಗಾಗಿರುವುದು ತಿಳಿದುಕೊಡಿದ್ದಾರೆ. ನಂತರ, ಘಟನೆ ನಡೆದು ಎರಡು ತಿಂಗಳ ಬಳಿಕ ವೃದ್ಧೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ವೃದ್ಧೆ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ತಿಂಗಳಷ್ಟೇ ಇದೇ ರೀತಿಯಾಗಿ ಸೈಬರ್ ಕ್ರೈಂ ನಡೆದಿತ್ತು. ವಂಚಕರು ವೃದ್ದೆಯೊಬ್ಬರಿಂದ 10 ಲಕ್ಷ ಹಣ ಸುಲಿಗೆ ಮಾಡಿದ್ದರು.
Previous Articleಮಂಗಳಮುಖಿಯ ಈ ಸಾಧನೆ ನೋಡಿ.
Next Article ಸ್ನೇಹಮಯಿ ಕೃಷ್ಣ ಎಲ್ಲಿದ್ದಾರೆ ಗೊತ್ತಾ.