ಲಕ್ನೋ ,ಏ.27- ಬೃಹತ್ ಮಾನವ ಕಳ್ಳ ಸಾಗಾಣೆಯ ಜಾಲವೊಂದು ಬೆಳಕಿಗೆ ಬಂದಿದ್ದು, ಬಿಹಾರದಿಂದ ಉತ್ತರಪ್ರದೇಶ ರಾಜ್ಯಕ್ಕೆ ಸಾಗಾಟವಾಗುತ್ತಿದ್ದ 95ಕ್ಕೂ ಅಧಿಕ ಮಕ್ಕಳನ್ನು ರಕ್ಷಿಸಲಾಗಿದೆ.
ಪೊಲೀಸರ ಸಹಾಯದಿಂದ ಮಕ್ಕಳನ್ನು ರಕ್ಷಿಸಿ ಆಹಾರ ಮತ್ತು ಔಷಧ ಪೂರೈಕೆ ಮಾಡಿದ್ದಾರೆ. ಇನ್ನು ಈ ಮಕ್ಕಳು 4-12 ವರ್ಷ ವಯೋಮಿತಿಯವರಾಗಿದ್ದು, ಅವರನ್ನು ಕರೆದುಕೊಂಡು ಬಂದವರ ಬಳಿಕ ಮಕ್ಕಳ ಪೋಷಕರ ಒಪ್ಪಿಗೆ ಪತ್ರವಾಗಲೀ, ಇತರೆ ಯಾವುದೇ ದಾಖಲೆಗಳು ಇರಲಿಲ್ಲ.
ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಸರ್ವೇಶ್ ಅವಸ್ಥಿ ಅವರು ಮಾತನಾಡಿ ನಿನ್ನೆ ಬೆಳಗ್ಗೆ 9 ಗಂಟೆಗೆ ಉತ್ತರಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ಸದಸ್ಯೆ ಸುಚಿತ್ರಾ ಚತುರ್ವೇದಿ ಕರೆ ಮಾಡಿ, ಬಿಹಾರದಿಂದ ಸಹರಾನ್‌ಪುರಕ್ಕೆ ಮಕ್ಕಳನ್ನು ಅಕ್ರಮವಾಗಿ ಸಾಗಾಟ ಆಗುತ್ತಿದೆ. ಮಕ್ಕಳು ಸದ್ಯ ಗೋರಕ್‌ಪುರದಲ್ಲಿದ್ದು, ಅಯೋಧ್ಯೆ ಮೂಲಕ ಅವರನ್ನು ಬೇರೆಡೆ ಸಾಗಿಸಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿಸಿದರು.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸರ್ವೇಶ್ ಅವಸ್ಥಿ ಪೊಲೀಸರ ಸಹಾಯದಿಂದ ಮಕ್ಕಳ ರಕ್ಷಿಸಲಾಗಿದ್ದು, ಮಕ್ಕಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಸದ್ಯ ಮಕ್ಕಳ ರಕ್ಷಿಸಲಾಗಿದ್ದು, ಅವರ ಪೋಷಕರನ್ನು ಸಂಪರ್ಕಿಸಿ ಅವರಿಗೆ ಒಪ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಬಿಹಾರದಿಂದ ಮಕ್ಕಳ ಗುಂಪೊಂದನ್ನು ವಿವಿಧ ರಾಜ್ಯಗಳ ಮದರಸಾಗಳಿಗೆ ಕಳುಹಿಸಲಾಗಿತ್ತು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಗೋರಖ್‌ಪುರದಲ್ಲಿ ಮಕ್ಕಳ ಹಕ್ಕುಗಳ ಆಯೋಗದ ಮಕ್ಕಳನ್ನು ರಕ್ಷಿಸಿತ್ತು. ದೇಶದ ಸಂವಿಧಾನ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನೀಡಿದೆ. ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗಲೇಬೇಕು. ಹೀಗಿರುವಾಗಿ ಮಕ್ಕಳನ್ನು ಕಳ್ಳ ಸಾಗಾಟ ಮಾಡಿ ಮದರಸಾಗಳಿಗೆ ಕೊಂಡೊಯ್ದು ಅಲ್ಲಿ ಅವರ ಹೆಸರಿನಲ್ಲಿ ಸಾವಿರಾರು ರೂಪಾಯಿ ದೇಣಿಗೆ ಪಡೆಯುವುದು ಕಾನೂನು ಬಾಹಿರ ಎಂದು ಸರ್ವೇಶ್ ಹೇಳಿದ್ದಾರೆ.
ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ, ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಏಕ್ಸ್ ನಲ್ಲಿ ಪೋಸ್ಟ್‌ನಲ್ಲಿ ಮಕ್ಕಳ ರಕ್ಷಣೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹಾಗೂ ಘಟನೆಗಳ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಆಯೋಗಕ್ಕೆ ತಿಳಿಸಿವಂತೆ ಮನವಿ ಮಾಡಿದ್ದಾರೆ.