ಬೆಂಗಳೂರು – ಬೆಂಗಳೂರು ನಗರದ ಅತ್ಯಂತ ಹಳೆಯ ಕ್ಷೇತ್ರಗಳಲ್ಲಿ ಒಂದಾದ ಜಯನಗರ ಕ್ಷೇತ್ರ ಪುನರ್ ವಿಂಗಡಣೆ ನಂತರ ಬಿಜೆಪಿಯ ಭದ್ರಕೋಟೆಯಾಗಿತ್ತು.
ದಿವಂಗತ ವಿಜಯ್ ಕುಮಾರ್ ಅವರ ನಂತರ ಈ ಕ್ಷೇತ್ರ ಬಿಜೆಪಿಯಿಂದ ಕೈ ತಪ್ಪಿ ಕಾಂಗ್ರೆಸ್ ಪಾಲಾಗಿದೆ ಈ ಬಾರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿದೆ. (CK Ramamurthy)
ಈ ತಂತ್ರಗಾರಿಕೆಯ ಪರಿಣಾಮವಾಗಿ ಎಲ್ಲರ ವಿಶ್ವಾಸದೊಂದಿಗೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸಿ ಕೆ ರಾಮಮೂರ್ತಿ ಅವರನ್ನು ಕಣಕ್ಕಿಳಿಸಿದೆ.
ಬಿಬಿಎಂಪಿ ಸದಸ್ಯರಾಗಿ ರಾಮಮೂರ್ತಿ ಕ್ಷೇತ್ರದ ವಾರ್ಡ್ ಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಮತ್ತು ಸ್ಥಳೀಯ ಜನರೊಂದಿಗೆ ಹೊಂದಿರುವ ಆತ್ಮೀಯ ಒಡನಾಟ ಕ್ಷೇತ್ರದಲ್ಲಿ ಪ್ರಮುಖವಾಗಿ ಚರ್ಚೆಗೆ ಬರುತ್ತಿದೆ. (CK Ramamurthy)
ಸದ್ಯ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕಿ ಸೌಮ್ಯ ರೆಡ್ಡಿ ಅವರು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ. ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸುಶಿಕ್ಷಿತರಾದ ಶ್ರೀಮತಿ ಸೌಮ್ಯ ರೆಡ್ಡಿ ಅವರನ್ನು ಕ್ಷೇತ್ರದ ಮತದಾರರು ವಿಶೇಷ ಕಾಳಜಿಯಿಂದ ಆಯ್ಕೆ ಮಾಡಿದರು ಆದರೆ ಅವರು ಕ್ಷೇತ್ರದ ಜನರೊಂದಿಗೆ ಬೆರೆಯುವುದು ಅಷ್ಟಕಷ್ಟೇ ಸದಾ ಕಾಲ ಅವರನ್ನು ಕೆಲವೇ ಕೆಲವು ವ್ಯಕ್ತಿಗಳ ಗುಂಪು ಸುತ್ತುವರಿದಿರುತ್ತದೆ ಅವರನ್ನು ದಾಟಿ ಸೌಮ್ಯ ರೆಡ್ಡಿ ಅವರನ್ನು ಭೇಟಿ ಮಾಡುವುದು ಕ್ಷೇತ್ರದ ಮತದಾರರ ಪಾಲಿಗೆ ಸವಾಲಿನ ಸಂಗತಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸೌಮ್ಯ ರೆಡ್ಡಿ ಮತ್ತೊಮ್ಮೆ ಆಯ್ಕೆ ಬಯಸಿ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಉತ್ತಮ ಕೆಲಸಗಾರರು ಎಂಬ ಹೆಗ್ಗಳಿಕೆಯ ಜೊತೆಗೆ ತಮ್ಮ ತಂದೆಯ ಶ್ರೀರಕ್ಷೆ ಅವರ ಜೊತೆಗೆ ಇದೆ. ಆದರೆ ಅವರು ಸುಲಭವಾಗಿ ಜನಸಾಮಾನ್ಯರಿಗೆ ಸಿಗುವುದಿಲ್ಲ ಹೀಗಾಗಿ ತಮ್ಮ ಹಾಗೂ ತಮ್ಮ ಪ್ರದೇಶದ ಸಮಸ್ಯೆಯ ಬಗ್ಗೆ ಅವರ ಗಮನಕ್ಕೆ ತರಲು ಸಾಧ್ಯವಾಗುವುದಿಲ್ಲ ಎಂಬ ಆಪಸ್ವರ ಸರ್ವೇಸಾಮಾನ್ಯವಾಗಿದೆ. (CK Ramamurthy)
ಹಾಲಿ ಶಾಸಕರ ವಿರುದ್ಧ ಕೇಳಿ ಬರುತ್ತಿರುವ ಆಡಳಿತ ವಿರೋಧಿ ಅಲೆಯನ್ನು ತಮ್ಮ ಪರವಾಗಿ ಪರಿವರ್ತಿಸಲು ರಾಮಮೂರ್ತಿ ಕಸರತ್ತು ನಡೆಸುತ್ತಿದ್ದಾರೆ. ರಾಮಮೂರ್ತಿ ಅವರಿಗೆ ಬಿಜೆಪಿ ಕಾರ್ಯಕರ್ತರ ಜೊತೆಗೆ ಸಂಘ ಪರಿವಾರ ಕಾರ್ಯಕರ್ತರ ದೊಡ್ಡ ಪಡೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದೆ.
ಪಾಲಿಕೆ ಸದಸ್ಯರಾಗಿ ಇವರು ಮಾಡಿದ ಅಭಿವೃದ್ಧಿ ಕೆಲಸ ಪಕ್ಷದ ಕಾರ್ಯಕರ್ತರ ಅವಿರತ ಶ್ರಮ ಮತ್ತು ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಇವರ ಸ್ನೇಹ ಪರವಾದ ನಡವಳಿಕೆ ಗೆಲುವಿನ ನಗೆ ಮೂಡುವಂತೆ ಮಾಡಬಹುದು ಎಂಬ ಲೆಕ್ಕಾಚಾರ ಕೇಳಿ ಬಂದಿದೆ. (CK Ramamurthy)
Also read.