ಬೆಂಗಳೂರು:
ರಾಜ್ಯದಲ್ಲಿ ಅಧಿಕಾರ ಹಿಡಿಯುವ ಕನಸಿನೊಂದಿಗೆ ಪಂಚರತ್ನ ಯಾತ್ರೆ ಮಾಡುತ್ತಿರುವ ಜಾತ್ಯಾತೀತ ಜನತಾದಳದಲ್ಲಿ ಆ ಪಕ್ಷದ ರಾಜ್ಯ ಅಧ್ಯಕ್ಷ ಇಬ್ರಾಹಿಂ ಅವರಿಗೆ ಜೋಕರ್ ಪಾತ್ರ ಕೊಡಲಾಗಿದೆ ಎಂದು BJP ಮೋರ್ಚಾ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
BJP ರಾಜ್ಯ ಕಾರ್ಯಾಲಯ ಭವನದಲ್ಲಿ ಏರ್ಪಡಿಸಿದ್ದ ಸಂತ ರವಿದಾಸರ ಜಯಂತೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘JDS ನಲ್ಲಿ ಯಾವ ಮುಖಂಡರಿದ್ದಾರೆ? ಇಬ್ರಾಹಿಂ ಅವರು ಅಧ್ಯಕ್ಷರಾಗಿದ್ದರೂ ಅವರ ಮಾತು ನಡೆಯುತ್ತದೆಯೇ?’ ಎಂದು ಪ್ರಶ್ನಿಸಿದರು.
ಈ ಹಿಂದೆ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಎಂಬ ದಲಿತರನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಆಸರೆ ನೈಜ ಅಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ವಿವರಿಸಿದರು. ಹಾಸನದಲ್ಲಿ ಜೆಡಿಎಸ್ ಮನೆಗೇ ಬೆಂಕಿ ಬಿದ್ದಿದೆ. ಮನೆಯಲ್ಲೇ 9 ಜನರು ಚುನಾವಣಾ ಕಣದಲ್ಲಿ ಇರುವ ಕಾರಣ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಜೆಡಿಎಸ್ ನಡೆಸುತ್ತಿರುವುದು ಪಂಚರತ್ನ ಅಲ್ಲ, ನವಗ್ರಹ ಯಾತ್ರೆ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ JDS ನವರದು ಕುಟುಂಬ ರಾಜಕಾರಣ ಎಂದು ಟೀಕಿಸಿದರು.
Congress – JDS ಪಕ್ಷಗಳು ಕುಟುಂಬದ ಆಸ್ತಿಯಾಗಿವೆ. ಒಂದು ಕುಟುಂಬವೇ ಪಕ್ಷವನ್ನು ನಡೆಸುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬ ದಲಿತ ಮುಖಂಡನನ್ನು ಸರ್ವನಾಶ ಮಾಡಲಾಗಿದೆ. ಖರ್ಗೆ ಅವರನ್ನು AICC ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ, ಇವತ್ತೂ ಹೈಕಮಾಂಡ್ ಎಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರನ್ನೇ ಹೇಳುತ್ತಾರೆ ಎಂದು ತಿಳಿಸಿದರು. ಖರ್ಗೆಯವರಿಗೆ ನಾಮಕಾವಾಸ್ತೆ ಹುದ್ದೆ ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್- ಜೆಡಿಎಸ್‍ನದು ಚುನಾವಣೆಗಾಗಿ ಯಾತ್ರೆಯೇ ಹೊರತು ಸಂಘಟನೆಗಾಗಿ ನಡೆಸುತ್ತಿರುವ ಯಾತ್ರೆ ಅಲ್ಲ. ಆದರೆ ನಮ್ಮ ಪಕ್ಷ ಚುನಾವಣೆ ಆದ ಮರುದಿನದಿಂದಲೇ ಸಂಘಟನಾ ಕಾರ್ಯ ನಡೆಸುತ್ತದೆ. ಚುನಾವಣೆ ನಂತರವೂ ಅದು ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ತೊರೆದು ಅನೇಕ ಜನರು ಬಿಜೆಪಿ ಸೇರುತ್ತಿದ್ದಾರೆ ಎಂದ ಅವರು, ಮುಂದೆ ಇನ್ನಷ್ಟು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
10 ಪ್ರತಿಕ್ರಿಯೆಗಳು
ГК Айтек http://www.multimedijnyj-integrator.ru .
ВНЖ Испании ВНЖ Испании .
электрические карнизы для штор электрические карнизы для штор .
вывод из запоя ростов на дону вывод из запоя ростов на дону .
электрокарнизы для штор электрокарнизы для штор .
где заработать много денег https://kak-zarabotat-dengi11.ru .
вывод из запоя стационар вывод из запоя стационар .
вывод из запоя в санкт-петербурге вывод из запоя в санкт-петербурге .
снятие ломки наркомана снятие ломки наркомана .
семена почтой с бесплатной доставкой по россии http://www.semenaplus74.ru .