ಗುವಾಹಟಿ (ಅಸ್ಸಾಂ), ಜೂ.14-ಅಸ್ಸಾಂನ ರಾಜಧಾನಿ ಗುವಾಹಟಿಯ ಬೋರಗಾಂವ್ ಸಮೀಪದ ನಿಜಾರಪರ್ ಪ್ರದೇಶದಲ್ಲಿ ಇಂದು ಸಂಭವಿಸಿದ ಭಾರೀ ಭೂಕುಸಿತದಿಂದಾಗಿ ನಾಲ್ವರು ಸಜೀವ ಸಮಾಧಿಯಾಗಿದ್ದಾರೆ.
ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಭೂಕುಸಿತ ಸಂಭವಿಸಿದೆ. ಘಟನೆಯ ನಂತರ, ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ಎಫ್ & ಇಎಸ್) ತಂಡಗಳು ಸ್ಥಳಕ್ಕೆ ಧಾವಿಸಿ ನಾಲ್ವರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದರು.
ನಾಲ್ವರು ಮೃತರಲ್ಲಿ ಮೂವರು ಧುಬ್ರಿಯಿಂದ ಮತ್ತು ಒಬ್ಬರು ಕೊಕ್ರಜಾರ್‌ನಿಂದ ಬಂದವರು. ಇವರು ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಈ ಪ್ರದೇಶದಲ್ಲಿ ಮನೆ ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ಭಾರೀ ಮಳೆಗೆ ಗುಡ್ಡದ ಮಣ್ಣು ಮನೆ ಮೇಲೆ ಬಿದ್ದ ಪರಿಣಾಮ, ಅವಷೇಶಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Previous Articleಕಿಚ್ಚ ಸುದೀಪ್ ಆಪ್ತ, ನಿರ್ಮಾಪಕ ಜಾಕ್ ಮಂಜು ಆಸ್ಪತ್ರೆಗೆ ದಾಖಲು
Next Article ಕಾಂಗ್ರೆಸ್ ಬೀದಿ ಹೋರಾಟ