ಬೆಂಗಳೂರು: ಕಳೆದ 10 ದಿನಗಳಲ್ಲಿ ನಗರದಲ್ಲಿ ಕೊರೋನಾ ಪ್ರಕರಣಗಳು 3 ಪಟ್ಟು ಹೆಚ್ಚಾಗಿದೆ.
ಈ ಹಿಂದೆ ಶೇ.1.1ರಷ್ಟಿದ್ದ ಪಾಸಿಟಿವಿಟಿ ದರ ಶೇ. 2.61ಕ್ಕೆ ತಲುಪಿದೆ ಎನ್ನಲಾಗಿದ್ದು, ಭಾನುವಾರ ಒಂದೇ ದಿನ 429 ಜನರಿಗೆ ಸೋಂಕು ತಗುಲಿದೆ.
ಮಹಾದೇವಪುರ ಮತ್ತು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಅಧಿಕ ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಬಿಬಿಎಂಪಿ ಕೋವಿಡ್ ವರದಿ ತಿಳಿಸಿದೆ.
ಈಗಾಗಲೇ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, 4ನೇ ಅಲೆ ಭೀತಿ ಎದುರಾಗಿದೆ.
Previous Articleಭಾರೀ ಕುಸಿತ ಕಂಡ ಷೇರು ಮಾರುಕಟ್ಟೆ: 6 ಲಕ್ಷ ಕೋಟಿ ರೂ. ನಷ್ಟ
Next Article ಕಿಮ್ಸ್ ನಲ್ಲಿ ಕಳ್ಳತನವಾದ ಮಗು ರಾತ್ರೋರಾತ್ರಿ ಪತ್ತೆ