ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ನಟಿಸಿರುವ ‘ತ್ರಿವಿಕ್ರಮ’ ಸಿನಿಮಾ ಇದೇ 24ಕ್ಕೆ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಜೋರಾಗಿ ಮಾಡುತ್ತಿದೆ. ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ತೆರಳಿ ಕಾಲೇಜುಗಳಲ್ಲಿ ಸಿನಿಮಾದ ಪ್ರಚಾರವನ್ನು ಚಿತ್ರತಂಡ ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ, ದಾವಣಗೆರೆಯ ಕಾಲೇಜೊಂದರಲ್ಲಿ ನಾಯಕ ವಿಕ್ರಮ್ ನಾಯಕಿ ಆಕಾಂಕ್ಷಾ ನೃತ್ಯ ಕಾರ್ಯಕ್ರಮ ನಡೆಯಿತು.
ಅಂತೆಯೇ ನಿನ್ನೆ (ಜೂನ್ ೧೯) ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ ನಲ್ಲಿ ಚಿತ್ರದ ಪ್ರಿ ರಿಲೀಸ್ ಇವೆಂಟ್ ನಡೆದಿದೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಡಾಲಿ ಧನಂಜಯ, ನಟಿ ಶ್ರುತಿ, ನಟರಾದ ಶರಣ್, ರವಿಶಂಕರ್, ಶ್ರೀನಗರ ಕಿಟ್ಟಿ, ನಟಿ ನಿಶ್ವಿಕಾ ನಾಯ್ಡು ಸೇರಿ ಅನೇಕರು ಭಾಗವಹಿಸಿದ್ದರು
ಮಳೆಯ ನಡುವೆಯೇ ನೂರಾರು ಪ್ರೇಕ್ಷಕರ ಮುಂದೆ ಚಿತ್ರತಂಡ ಅದ್ದೂರಿ ಮನರಂಜನೆ ನೀಡಿತು.
ರವಿಚಂದ್ರನ್‌ನ ಎರಡನೇ ಮಗ ವಿಕ್ರಮ್‌ರ ಮೊದಲ ಸಿನಿಮಾ ‘ತ್ರಿವಿಕ್ರಮ’ ಸಿನಿಮಾದಲ್ಲಿ ಆಕಾಂಕ್ಷಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ. ಸಹನ ಎಚ್‌ಎಸ್ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.