ಕನಕಪುರ: ಕನಕಪುರದ ಬಂಡೆ ಎಂದೇ ಖ್ಯಾತಿ ಪಡೆದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D K Shivakumar) ಮುಖ್ಯಮಂತ್ರಿ ಆಗುವ ಕನಸಿನೊಂದಿಗೆ ಒಕ್ಕಲಿಗ ಪ್ರಾಬಲ್ಯ ಇರುವ ಕನಕಪುರದಲ್ಲಿ ಸ್ಪರ್ಧಿಸಿದ್ದಾರೆ.
ಈ ಕ್ಷೇತ್ರದಿಂದ ಸತತ 7 ಬಾರಿ ಗೆಲುವು ಸಾಧಿಸಿರುವ ಡಿ. ಕೆ.ಶಿವಕುಮಾರ್(D K Shivakumar), 1989ರಿಂದ ಈವರೆಗೆ ನಿರಂತರವಾಗಿ ಗೆಲುವು ಕಂಡಿದ್ದಾರೆ. ಈ ಕ್ಷೇತ್ರವನ್ನು ತಮ್ಮ ಕೈವಶ ಮಾಡಿಕೊಳ್ಳಬೇಕೆಂದು ತಂತ್ರ ಆರೋಪಿಸುತ್ತಿರುವ ಬಿಜೆಪಿ ಕಳೆದೊಂದು ವರ್ಷದಿಂದ ಸಂಘ ಪರಿವಾರದ ಮೂಲಕ ಹಿಂದೂ ಕಾರ್ಯಸೂಚಿಯನ್ನು ಮುಂದಿಡುತ್ತಾ ಬಂದಿದೆ. ಏಸು ಬೆಟ್ಟ ವಿವಾದ ಟಿಪ್ಪು ಗೋಹತ್ಯೆ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಬಹು ಸಂಖ್ಯಾತರ ಒಲವು ಗಿಟ್ಟಿಸಲು ಪ್ರಯತ್ನಿಸಿದೆ
ಇದರ ಮುಂದುವರೆದ ಭಾಗವಾಗಿ ಒಕ್ಕಲಿಗ ಸಮುದಾಯದ ಪ್ರಬಲ ಕಾಂಗ್ರಸ್ ನಾಯಕನಿಗೆ ಸವಾಲೊಡ್ಡಲು ಬಿಜೆಪಿ ಕೂಡಾ ತನ್ನ ಒಕ್ಕಲಿಗ ನಾಯಕನನ್ನೇ ಅಖಾಡಕ್ಕೆ ಇಳಿಸಿದೆ. ಕನಕಪುರ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲವಾದರೂ ಕೂಡಾ ಆರ್. ಅಶೋಕ್ ಸ್ಪರ್ಧೆಯಿಂದಾಗಿ ಕದನ ಕಣ ಕುತೂಹಲ ಕೆರಳಿಸಿದೆ.
ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳ ಜೊತೆಗೆ, ಅಲ್ಪಸಂಖ್ಯಾತ ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಮತದಾರರು ಇದ್ದಾರೆ. (D K Shivakumar)
ಸರ್ಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿರುವ ಡಿಕೆ ಶಿವಕುಮಾರ್ (D K Shivakumar)ಕೋವಿಡ್ ಸಮಯದಲ್ಲಿ ಉಂಟಾದ ಸಂಕಷ್ಟಕ್ಕೆ ಸ್ಪಂದಿಸಿದ್ದನ್ನು ಕ್ಷೇತ್ರದ ಮತದಾರರು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಕ್ಷೇತ್ರದಲ್ಲಿ ಶಿವಕುಮಾರ್ ಅವರಿಗಿಂತ ಅವರ ಸೋದರ ಡಿಕೆ ಸುರೇಶ್ ಸತತ ಒಡನಾಟ ಹೊಂದಿದ್ದು ಪ್ರತಿಪಕ್ಷಗಳು ತಲೆ ಎತ್ತಲು ಸಾಧ್ಯವಾಗದಂತೆ ಮಾಡಿದ್ದಾರೆ ಇದಕ್ಕೆ ಸಾಕ್ಷಿ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಸುವಾಗ ಸೇರಿದ್ದ ಜನ ಸಮೂಹ.
ಪ್ರತಿ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶಿವಕುಮಾರ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ಜೆಡಿಎಸ್ ಈ ಬಾರಿ ಅಂತಹ ಸದ್ದು ಮಾಡುತ್ತಿಲ್ಲ ಈ ಹಿಂದೆ ಶಿವಕುಮಾರ್ ಅವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ನ ಅಭ್ಯರ್ಥಿಗಳು ಶಿವಕುಮಾರ್ ಅವರ ಬೆಂಬಲಕ್ಕೆ ನಿಂತಿರುವುದು ಇವರ ಗೆಲುವಿನ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. (D K Shivakumar)
Also read.