ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ತನ್ನ ಬದ್ಧತೆಗೆ ಹೆಸರಾದ, ಭಾರತೀಯ ಸೇನೆಯು ಸುರೇಂದ್ರ ನಗರದ ಧ್ರಂಗಾಧ್ರ ತಾಲೂಕಿನ ದೂದಾಪುರ ಗ್ರಾಮದಲ್ಲಿ ಬೋರ್‌ವೆಲ್‌ನಿಂದ 18 ತಿಂಗಳ ಮಗುವನ್ನು ರಕ್ಷಿಸಿದೆ. ಮಂಗಳವಾರ ತಡರಾತ್ರಿ ಮಗು ಬೋರ್‌ವೆಲ್‌ಗೆ ಬಿದ್ದಿತ್ತು, ನಂತರ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ ವರ್ಮಾ ಅವರು ಆ ಪ್ರದೇಶದ ಮಿಲಿಟರಿ ಠಾಣೆಗೆ ಕರೆ ಮಾಡಿ, ಮಗುವನ್ನು ರಕ್ಷಿಸುವಂತೆ ವಿನಂತಿಸಿದರು. ಕ್ಯಾಪ್ಟನ್ ಸೌರವ್ ನೇತೃತ್ವದ ಗೋಲ್ಡನ್ ಕಟರ್ ಗನ್ನರ್ಸ್, 10 ನಿಮಿಷಗಳಲ್ಲಿ, ಲಘು ವಾಹನದಲ್ಲಿ ಮನಿಲಾ ರೋಪ್, ಸರ್ಚ್‌ಲೈಟ್‌ಗಳು, ಸುರಕ್ಷತಾ ಸರಂಜಾಮು ಮತ್ತು ಕ್ಯಾರಬೈನರ್‌ನಂತಹ ಅಗತ್ಯ ಸಾಧನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ತಂಡವು ಪರಿಸ್ಥಿತಿಯನ್ನು ಅವಲೋಕಿಸಿದ ನಂತರ, ಲೋಹದ ಕೊಕ್ಕೆಯನ್ನು ಮಾರ್ಪಡಿಸಿ ಅದನ್ನು ಮನಿಲಾ ಹಗ್ಗಕ್ಕೆ ಕಟ್ಟಿ 300 ಅಡಿ ಆಳದ ಬೋರ್‌ವೆಲ್‌ಗೆ ಇಳಿಸಿದರು. ನೆಲಮಟ್ಟದಿಂದ ಸುಮಾರು 20-25 ಅಡಿ ಕೆಳಗೆ ಸಿಲುಕಿಕೊಂಡಿದ್ದ ಮಗುವನ್ನು ತಂಡವು ನಿಧಾನವಾಗಿ ಮೇಲಕ್ಕೆ ಎಳೆದರು ಮತ್ತು ನಂತರ ಮಗುವನ್ನು ಬೋರ್‌ವೆಲ್‌ನಿಂದ ರಕ್ಷಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನೂ ಸಚಿವಾಲಯ ಹಂಚಿಕೊಂಡಿದೆ.
ಬೋರ್‌ವೆಲ್‌ನಿಂದ 18 ತಿಂಗಳ ಮಗುವನ್ನು ರಕ್ಷಿಸಿದ ಭಾರತೀಯ ಸೇನೆ!
Previous Articleರೈಲಿನಡಿ ಸಿಲುಕಿದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಪೊಲೀಸ್!
Next Article ವ್ಯಕ್ತಿ ಮೇಲೆ ಹಲ್ಲೆ: ನಟ ಜೈಜಗದೀಶ್ ವಿರುದ್ಧ ಕೇಸ್ ದಾಖಲು