ಚಿಕ್ಕಮಗಳೂರು,ಜೂ.2- ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಬಂದಿದ್ದ ವೈದ್ಯ ಮಹಾಶಯನ ಕತೆಯಿದು.ವೈದ್ಯೋ ನಾರಾಯಣೋ ಹರಿಃ ಎಂಬ ಆಶ್ರಯಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ಅಮಾಯಕರ ಬದುಕಿನೊಂದಿಗೆ ಚೆಲ್ಲಾಟವಾಡಿದ ಮಾಹನ್ ವೈದ್ಯ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಸಮಯ ನಿಗಧಿಯಾಗಿ ಒಂಭತ್ತು ಮಹಿಳೆಯರು ಬಂದಿದ್ದರು
ಶಸ್ತ್ರಚಿಕಿತ್ಸೆ ಮಾಡಲು ಸಜ್ಜಾಗಿದ್ದ ವೈದ್ಯರೊಬ್ಬರು
ಈತ ಬೆಳಗ್ಗೆ 8 ಗಂಟೆಗೆ ಎಲ್ಲರಿಗೂ ಅನಸ್ತೇಷಿಯಾ ನೀಡಿ ಹೊರ ಹೋದರು.ಆಪರೇಷನ್ ಗೆ ಕಾಯುತ್ತಿದ್ದ ಮಹಿಳೆಯರು ಮತ್ತು ಅವರ ಕುಟುಂಬದವರು ವೈದ್ಯರು ಈಗ ಬರಲಿದ್ದಾರೆ ಎಂದು ಕಾದಿದ್ದೇ ಬಂತು.
ಮಧ್ಯಾಹ್ನ 2 ಗಂಟೆಯಾದರೂ ಆಪರೇಷನ್ ಮಾಡಬೇಕಾದ ವೈದ್ಯರ ಸುಳಿವೇ ಇಲ್ಲ.
ಆತಂಕಕ್ಕೊಳಗಾದ ಮಹಿಳೆಯರ ಕುಟುಂಬದ ಸದಸ್ಯರು ವೈದ್ಯರನ್ನು ನೋಡಲು ಹೋದಾಗ ಆತ ಆಪರೇಷನ್ ಥಿಯೇಟರ್ನಲ್ಲೆ ನಿದ್ರೆಗೆ ಜಾರಿದ್ದಾರೆ.
ಎಲ್ಲರೂ ಆತನ ಬಳಿ ಹೋಗಿ ಎಬ್ಬಿಸಿದರೆ ಆತ ಸರಿಯಾಗಿ ನಿಲ್ಲಲೂ ಸಾಧ್ಯವಿಲ್ಲದೆ ತೂರಾಡತೊಡಗಿದ್ದಾರೆ.ಅವರೆಲ್ಲಾ ಆತನನ್ನು ಹಿಡಿದು ನಿಲ್ಲಿಸಲು ಯತ್ನಿಸಿದರೆ ಆತ ನಿಲ್ಲಲೂ ಸಾಧ್ಯವಿಲ್ಲದೆ ಕುಸಿದು ಬಿದ್ದಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಬೇಕಾದ ವೈದ್ಯರು ಕಂಠಪೂರ್ತಿ
ಮದ್ಯಸೇವಿಸಿ ಬಂದಿರುವ ಆರೋಪ ಕೇಳಿಬಂದಿದೆ. . ಈ ವೇಳೆ ಸಂತಾನಹರಣ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ, ಅನಸ್ತೇಷಿಯಾ ಇಂಜೆಕ್ಷನ್ ಪಡೆದಿದ್ದ 9 ಮಹಿಳೆಯರ ಪರದಾಟ ಹೇಳತೀರದಾಗಿತ್ತು. ಆಪರೇಷನ್ ಥಿಯೇಟರ್ನಲ್ಲಿ ಕುಸಿದು ಬಿದ್ದದ್ದು ಅಸ್ವಸ್ಥಗೊಂಡ ವೈದ್ಯ ಬಾಲಕೃಷ್ಣ ಅವರನ್ನು ಆಸ್ಪತ್ರೆಯ ಸಿಬ್ಬಂದಿಗಳು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ವಿದ್ಯಮಾನದ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್ ಅವರು ಮಾತನಾಡಿ ‘ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
Previous ArticleElon Musk ಮತ್ತೊಮ್ಮೆ ಅತ್ಯಂತ ಶ್ರೀಮಂತ
Next Article ಉನ್ನತ ಶಿಕ್ಷಣದ ಹೆಸರಲ್ಲಿ ಪಂಗನಾಮ | Education News