ನವದೆಹಲಿ ಸೆ. ೩ : ಮದ್ಯ ಮತ್ತು ಮಾದಕವಸ್ತುಗಳ ಸೇವನೆಯಿಂದ ಆಗುವ ಅನಾಹುತ ಅಷ್ಟಿಷ್ಟಲ್ಲ.ಇವುಗಳ ಚಟಕ್ಕೆ ಬಲಿಯಾದವರು ಅನುಭವಿಸುವ ಬವಣೆ ಅಂತಿಂತದ್ದಲ್ಲ ಕೊನೆಗೆ ಇದನ್ನು ಸಹಿಸಲಾಗದೆ ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ ಮದ್ಯ ಮತ್ತು ಮಾದಕವಸ್ತುಗಳ ದಾಸರಾಗಿ ಪ್ರಾಣ ಕಳೆದುಕೊಂಡರವರ ಸಂಖ್ಯೆ ಕಳೆದೊಂದು ವರ್ಷದಲ್ಲಿ 10 ಸಾವಿರದ 560 ಕ್ಕೇರಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಅಂಕಿಅಂಶಗಳ ಪ್ರಕಾರ ಕೌಟುಂಬಿಕ ಕಲಹ,ಸಾಲ ಮೊದಲಾದ ಕಾರಣಗಳಿಂದ ಜೀವ ಕಳೆದುಕೊಳ್ಳುವವರ ಪ್ರಮಾಣಕ್ಕಿಂತ ಮದ್ಯ ಮತ್ತು ಮಾದಕವಸ್ತುಗಳ ವ್ಯಸನಕ್ಕೆ ಸಿಲುಕಿ ಬಲಿಯಾಗುವವರ ಸಂಖ್ಯೆ ಹೆಚ್ಚಿದೆ
ಕಳೆದ ಒಂದು ವರ್ಷದಲ್ಲಿ ಈ ಪ್ರಮಾಣ ಶೇ ಹದಿನೈದನ್ನು ದಾಟಿದೆ.
ಇದು ರಾಷ್ಟ್ರೀಯ ಅಂಕಿಅಂಶಗಳಾದರೆ ಕರ್ನಾಟಕ, ಮಹಾರಾಷ್ಟ್ರ,ಮಧ್ಯಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು. ಈ ರಾಜ್ಯಗಳಲ್ಲಿ ವರದಿಯಾಗುವ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.75 ರಷ್ಟು ಪ್ರಕರಣಗಳು ಮದ್ಯ ಮತ್ತು ಮಾದಕವಸ್ತುವಿನ ಕಾರಣಕ್ಕೆ ನಡೆದಿವೆ.
ರಾಷ್ಟ್ರೀಯ ಅಪರಾಧ ಅಂಕಿಅಂಶಗಳ ದಾಖಲೆಗಳ ವಿವರ ಗಮನಿಸಿದಾಗ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಅಮಲು ಪದಾರ್ಥಗಳ ಸೇವನೆ ಎಗ್ಗಿಲ್ಲದೆ ಸಾಗಿರುವುದು ಧೃಡಪಡುತ್ತಿದೆ.
ಈ ಪ್ರದೇಶ ಇದೀಗ ಮಾದಕವಸ್ತುಗಳ ಸ್ವರ್ಗವಾಗಿದೆಯೇನೋ ಎಂಬ ಅನುಮಾನ ಕಾಡುತ್ತಿದೆ.ಚಟಕ್ಕೆ ಸಿಲುಕಿದವರ ಪ್ರಮಾಣ ಎಷ್ಟಿದೆ ಎನ್ನುವುದಕ್ಕೆ ಬೇರೆ ಯಾವುದೇ ರೀತಿಯ ವಿವರಗಳು ಬೇಕಾಗಿಲ್ಲ ಇಷ್ಟೊಂದು ಪ್ರಮಾಣದ ಸಾವಿನ ಸಂಖ್ಯೆ ಗಮನಿಸಿದರೆ ಸಾಕು ಅದರ ತೀವ್ರತೆ ತಿಳಿಯಲಿದೆ.ಈಗ ಇಲ್ಲಿರುವುದು ಕಾನೂನು ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳ ಪಾತ್ರ ಮತ್ತು ಆಡಳಿತ ಯಂತ್ರದ ಕಾರ್ಯ ನಿರ್ವಹಣೆ .ಇದು ಸರಿ ಹೋಗದೆ ಇದ್ದರೆ ಮುಂದೆ ಇನ್ನೂ ಗಂಭೀರವಾದ ಸಮಸ್ಯೆ ಎದುರಿಸುವ ಅಪಾಯವಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ..
ಡ್ರಗ್ಸ್ ಚಟಕ್ಕೆ ಬಿದ್ದು ಬಲಿಯಾದವರೆಷ್ಟು ಗೊತ್ತಾ?
Previous Articleಪಿ ಸಾಯಿನಾಥ್ ರಿಂದ ಮುರುಘಾ ಪ್ರಶಸ್ತಿ ವಾಪಸ್
Next Article ಪುರುಷತ್ವ ಪರೀಕ್ಷೆಯಲ್ಲಿ ಶರಣರು ಫಿಟ್