ಬೆಂಗಳೂರು,ಡಿ.7-
ಅದಾನಿ ಸಮೂಹ ಸಂಸ್ಥೆಯು ಬೇಲೆಕೆರಿ ಬಂದರಿನಲ್ಲಿ ಜಪ್ತಿ ಮಾಡಲಾಗಿದ್ದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಿದ್ದು, ಲೋಕಾಯುಕ್ತ ತನಿಖೆಯಲ್ಲಿ ಪತ್ತೆಯಾಗಿದ್ದು ಈ ಸಂಸ್ಥೆಯ ವಿರುದ್ಧ ರಾಜ್ಯಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಕಾಂಗ್ರೆಸ್ ಹಿರಿಯ
ನಾಯಕ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011 ರ ಜುಲೈನಲ್ಲಿ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಬೇಲೆಕೆರಿ ಬಂದರು ಅದಿರು ನಾಪತ್ತೆ ಹಗರಣದಲ್ಲಿ ಭಾಗವಹಿಸಿರುವ ನಾಲ್ಕು ಕಂಪನಿಗಳ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದರು.
ಅರಣ್ಯ ಇಲಾಖೆ ಜಪ್ತಿ ಮಾಡಿದ ಎಂಟು ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಅದಿರನ್ನು ದೊಡ್ಡ ಪ್ರಮಾಣದಲ್ಲಿ ವಿದೇಶಕ್ಕೆ ಕಳ್ಳಸಾಗಾಣಿಕೆ ಮಾಡಿರುವ ಹಗರಣದಲ್ಲಿ ಅದಾನಿ ಎಂಟರ್‌ಪ್ರೈಸಸ್ ಕೂಡ ಭಾಗಿಯಾಗಿದೆ.ಇದಲ್ಲದೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿಮಿಟೆಡ್, ಸಲ್‌ಗಾಂವ್ಕರ್ ಮೈನಿಂಗ್ ಇಂಡಸ್ಟ್ರೀಸ್ ಪ್ರೈ.ಲಿಮಿಟೆಡ್, ರಾಜ್‌ಮಹಲ್ ಸೆನ್‌್ಸಕಿ ಕಂಪನಿಗಳ ಪಾತ್ರವನ್ನು ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.
ಪ್ರಕರಣದ ತನಿಖೆ ನಡೆಸಿದ್ದ ಅರಣ್ಯಾಧಿಕಾರಿ ಯು.ವಿ.ಸಿಂಗ್ ನೀಡಿದ ಮಾಹಿತಿ ಆಧರಿಸಿ ಲೋಕಾಯುಕ್ತರು ವರದಿ ನೀಡಿದ್ದರು. ಅದರಲ್ಲಿ ಪುಟ ಸಂಖ್ಯೆ 51 ರಿಂದ 56 ರ ನಡುವೆ ಅದಾನಿ ಕಂಪನಿ ತನ್ನ ಶಾಖೆಗೆ ಇ-ಮೇಲ್ ಕಳುಹಿಸಿ ಯಾವೆಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಣ ನೀಡಬೇಕು ಎಂಬ ಸ್ಪಷ್ಟ ಉಲ್ಲೇಖ ಇದೆ. ದಾಖಲೆ ಇದ್ದರೂ ಇದರ ವಿರುದ್ಧ ತನಿಖೆ ನಡೆದಿಲ್ಲ ಎಂದು ಆಪಾದಿಸಿದರು.
ಕಳ್ಳಸಾಗಾಣಿಕೆಯ ಮೂರು ಕಂಪನಿಗಳ ವಿರುದ್ಧ ಈಗಾಗಲೇ ತನಿಖೆ ಪೂರ್ಣಗೊಂಡು, ಕಾಂಗ್ರೆಸ್‌ನ ಶಾಸಕ ಸತೀಶ್ ಶೈಲ್ ಸೇರಿದಂತೆ ಹಲವರಿಗೆ ಶಿಕ್ಷೆಯಾಗಿದೆ. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆಯನ್ನೂ ನೀಡಿದೆ. ಮೂರು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಅದಾನಿ ಕಂಪನಿ ವಿರುದ್ಧ ಏಕಿಲ್ಲ ಎಂಬುದು ತೀವ್ರವಾಗಿ ಕಾಡುವ ಪ್ರಶ್ನೆಯಾಗಿದೆ ಎಂದರು.
Previous Articleಶಾಲೆ ಕಬಳಿಸಿದ್ರಾ ಹೊರಟ್ಟಿ.?
Next Article ಬಿಜೆಪಿ ಅಶಿಸ್ತಿಗೆ ಮದ್ದು ಅರೆಯಿತಾ ಕೋರ್ ಕಮಿಟಿ.


4 Comments
tadalafil 20mg dosage tadalafil liquid tadalafil side effects long-term
tadalafil 20mg dosage tadalafil liquid tadalafil side effects long-term
tadalafil 20mg dosage tadalafil liquid tadalafil side effects long-term
tadalafil 20mg dosage tadalafil liquid tadalafil side effects long-term