ಮೈಸೂರು : ದೇವರಾಜ ಮಾರುಕಟ್ಟೆ ಹಾಗು ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನ ಶಾಸಕ ಎಲ್.ನಾಗೇಂದ್ರ ಭೇಟಿಯಾಗಿದ್ದಾರೆ.
ಮೈಸೂರು ಅರಮನೆಯ ಅಂಬಾವಿಲಾಸ ಅರಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪಾರಂಪರಿಕ ಕಟ್ಟಡಗಳ ಜೀರ್ಣೋದ್ದಾರ, ಅಭಿವೃದ್ದಿ ಹಾಗೂ ದುರಸ್ತಿ ಕುರಿತು ಚರ್ಚೆ ನಡೆಸಿದ್ದಾರೆ. ಟಾಸ್ಕ್ ಫೋರ್ಸ ಸಮಿತಿ, ಪಾರಂಪರಿಕ ತಜ್ಞರ ಸಮಿತಿ, ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ನಿರ್ಣಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನ್ಯಾಯಾಲಯದ ಆದೇಶ ಹಾಗು ಪಾರಂಪರಿಕ ಸಂರಕ್ಷಣಾ ಸಮಿತಿಗಳು ನೀಡಿರುವ ಅಭಿಪ್ರಾಯಗಳ ಬಗ್ಗೆ ವಿವರಣೆ.
ವಿವರಣೆ ಆಲಿಸಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಈ ಬಗ್ಗೆ ನುರಿತ ಪರಿಣಿತ ತಜ್ಞರೊಂದಿಗೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ಮುಂದಿನ 10-15 ದಿವಸಗಳಲ್ಲಿ ಈ ಕಟ್ಟಡಗಳ ಬಗ್ಗೆ ನಿರ್ಧಾರ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಇದೇ ವೇಳೆ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಉಪಸ್ಥಿತಿ ಉಪಸ್ಥಿತರಿದ್ದರು