ಭಾಲ್ಕಿ ತಾಲೂಕಿನ ಗಡಿಭಾಗದ ಮೇಹಕರ್ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕಾಡುಪ್ರಾಣಿಗಳಿಂದ ಸಾಕಷ್ಟು ಬೆಳೆ ನಷ್ಟವಾಗಿದ್ದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ
ಮೆಹಕರ ಸರ್ಕಲ್ ನಲ್ಲಿ ಸುಮಾರು 500 ಎಕರೆ ಅರಣ್ಯ ಪ್ರದೇಶವೆಂದು ಇದರಿಂದಾಗಿ ಕಾಡುಹಂದಿ, ಜಿಂಕೆ ಹಿಂಡು
(ಪ್ರತಿ ಹಿಂಡುನಲ್ಲಿ ಐದುನೂರು ಜಿಂಕೆಗಳು), ನವಿಲುಗಳು ಹಾಗು ಇತರೆ ಕಾಡುಪ್ರಾಣಿಗಳು ವಾಸವಾಗಿದ್ದು ಇದರಿಂದಾಗಿ ರೈತರು ಸಾಲವನ್ನು ಮಾಡಿ ಬೆಳೆದ ಬೆಳೆಗಳಾದ ಸೋಯಾಬಿನ್, ಕಬ್ಬು, ತೋಟಗಾರಿಕೆ ಬೆಳೆಗಳಾದ ಬೂದುಕುಂಬಳಕಾಯಿ ಹಾಗು ತರಕಾರಿ ಬೆಳೆಗಳನ್ನು ಸಂಪೂರ್ಣ ತಿಂದು ಬೆಳೆನಷ್ಟ ಗೊಳಿಸುತ್ತಿವೆ ಇದರಿಂದ ನೊಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
” ಮೆಹಕರ ಗ್ರಾಮದ ಪ್ರಗತಿಪರ ರೈತ ಪ್ರಮೋದ್ ಲಾಲಪ್ಪ ತೇಲಂಗ ಎಂಬ ರೈತ ಇಂಜಿನಿಯರ್ ಪದವಿ ಪಡೆದು ಉದ್ಯೋಗ ಕಲ್ಪಿಸಿದರು ಸಹ ಉದ್ಯೋಗ ಬಿಟ್ಟು ತಮ್ಮ ಸ್ವಂತ ಜಮೀನಿನಲ್ಲಿ ಜೇನು ಸಾಕಾಣಿಕೆ ಹಾಗು ತೋಟಗಾರಿಕೆ ಬೆಳೆಗಳಾದ ಬೂದು ಕುಂಬಳಕಾಯಿ ಹಾಗು ತರಕಾರಿಗಳನ್ನು ಬೆಳೆದು ಲಾಭ ಪಡೆದುಕೊಳ್ಳುವ ಸಮಯದಲ್ಲಿ ಕಾಡುಪ್ರಾಣಿಗಳಿಂದ ಅವರ ಸಂಪೂರ್ಣ ಬೆಳೆಯನ್ನು ತಿಂದು ರೈತನನ್ನು ಅಪಾರ ಸಂಕಷ್ಟಕ್ಕೆ ತಂದಿವೆ ಇದರಿಂದ ಇದಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯವಾಗಿದೆ ಎಂದು ಹೇಳಿದರು” ಮೇಕರ್ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನವನಾಥ ಪಾಟೀಲ್ ಅವರು ಅರಣ್ಯ ಪ್ರದೇಶ 500 ಎಕರೆ ಇದ್ದು ಇದಕ್ಕೆ ಸಂಪೂರ್ಣ ಬೇಲಿ ಅಳವಡಿಸಿ ಕಾಡುಪ್ರಾಣಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.