ಬೆಂಗಳೂರು, ಆ.23-
ಕೃಷ್ಣ ಜನ್ಮಾಷ್ಟಮಿ, ಗೌರಿ ಗಣೇಶ ಸೇರಿದಂತೆ ಸಾಲು ಸಾಲು ಹಬ್ಬಗಳ ಸಮಯದಲ್ಲಿ ದೇಶದ ಹಲವೆಡೆ ವಿಧ್ವಂಸಕರು ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತ ದಳ ಸಂಗ್ರಹಿಸಿದೆ.
ಕೇಂದ್ರ ಗುಪ್ತಚರ ಇಲಾಖೆ ಎಲ್ಲ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದು ದೇಹದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಪ್ರತಿ ಮೂರು ಗಂಟೆಗೊಮ್ಮೆ ವರದಿ ನೀಡುವಂತೆ ಸೂಚಿಸಲಾಗಿದೆ.
ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಸಾರ್ವಜನಿಕ ಸಭೆ ಸಮಾರಂಭಗಳು, ಪ್ರತಿಭಟನೆ ಹಾಗೂ ಅಪರಿಚಿತ ವ್ಯಕ್ತಿಗಳ ಚಲನ ವಲನಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಗುಪ್ತಚರ ಸಂಸ್ಥೆ ನೀಡಿದ ಮಾಹಿತಿ ಆಧರಿಸಿ ನಿನ್ನೆಯಷ್ಟೇ ಕಾರ್ಯಾಚರಣೆ ಮಾಡಿದ ದೆಹಲಿ ಪೊಲೀಸರ ಮೂರು ವಿಶೇಷ ತಂಡ ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ 15ಸ್ಥಳಗಳಲ್ಲಿ ದಾಳಿಸಿ ನಡೆಸಿ 11ಮಂದಿ ಶಂಕಿತ ಆಲ್ ಖೈದಾ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ
ಬಂಧಿತರಿಂದ ಒಂದು ಎಕೆ-47 ರೈಫಲ್, 38 ಬೋರ್ ರಿವಾಲ್ವರ್, 38 ಬೋನರ್ ಆರು ಲೈವ್ ಕಾಟ್ರಿಡ್ಜ್ ಗಳು, 32 ಬೋನರ್ 30 ಲೈವ್ ಕಾಟ್ರಿಡ್ಜ್ ಗಳು ಮತ್ತು ಎಕೆ-47ನ 30 ಲೈವ್ ಕಾಟ್ರಿಡ್ಜ್ ಗಳು ಸೇರಿದಂತೆ ಭಾರೀ ಸಶಾ್ತ್ರಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ.
Previous Articleಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಲು ಹೊಸ ವ್ಯವಸ್ಥೆ.
Next Article ರಾಜ್ಯ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದ ರಾಜ್ಯಪಾಲ.