ಬೆಂಗಳೂರು,ಜ.2-
ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಚಿನ್ನಾಭರಣ Businessಿಗಳು ಸೇರಿದಂತೆ ಹಲವರನ್ನು ವಂಚಿಸಿದ ಆರೋಪದಲ್ಲಿ ಸಿಲುಕಿರುವ ಐಶ್ವರ್ಯಗೌಡ, ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಹತ್ತಿರದ ಸಂಬಂಧಿಗಳು ಎಂದು ಹೇಳಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಿಕಿಗೆ ಬಂದಿದೆ.
ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನದ ವ್ಯಾಪಾರಿಯಿಂದ 9 ಕೋಟಿ ರೂಪಾಯಿ ಮೊತ್ತದ ಚಿನ್ನ ಪಡೆದು ವಂಚಿಸಿದ ಐಶ್ವರ್ಯಗೌಡ ಇದೀಗ ಮಂಡ್ಯದ ಪೂರ್ಣಿಮಾ ಎಂಬುವರಿಗೂ ವಂಚಿಸಿದ್ದಾಳೆ.
ಅವರಿಂದ 100 ಗ್ರಾಂ ಚಿನ್ನದ ಜೊತೆಗೆ 15 ಲಕ್ಷ ಹಣ ಪಡೆದು ಇಂದು ನಾಳೆ ವಾಪಸ್ಸು ಕೊಡುವೆ ಎಂದು ಸಾಯಿಸಿದ್ದಾಳೆ ಅಲ್ಲದೇ ಹಣ ಪಡೆಯುವ ಮುನ್ನ ನಾನು ಡಿ.ಕೆ.ಸುರೇಶ್ ತಂಗಿ ಎಂದು ಐಶ್ವರ್ಯ ಪರಿಚಯ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ತನಗೆ ಹೆಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಕೂಡ ನಂಬಿಕೆ ಗಳಿಸಿಕೊಂಡಿದ್ದಾಳೆ. ಈ ಕುರಿತು ಐಶ್ವರ್ಯಗೌಡ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಅನಿತಾ ಕುಮಾರಸ್ವಾಮಿ, ನಿಖಿಲ್ ಇಬ್ಬರೂ ಬಹಳಷ್ಟು ಪರಿಚಿತರು. ನಿಮಗೆ ಅವರ ಕಡೆಯಿಂದ ಸಹಾಯ ಬೇಕಿದ್ದರೆ ನನಗೆ ಹೇಳಿ,ನಾನು ಸಹಾಯ ಮಾಡುವೆ,ಎಂದು ಐಶ್ವರ್ಯಗೌಡ ಹೇಳಿ ನಮ್ಮನ್ನ ನಂಬಿಸಿ ನಮ್ಮ ಬಳಿ ಹಂತ ಹಂತವಾಗಿ 40 ಲಕ್ಷ ರೂ. ಹಾಗೂ ಪೂರ್ಣಿಮಾ ಬಳಿಯೂ ಹಣ, ಚಿನ್ನ ಪಡೆದಿದ್ದಳು. ಈಗ ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮನೆ ಪರಿಶೀಲನೆ:ಈ ನಡುವೆ ಮಹಿಳೆಯೊಬ್ಬರಿಗೆ 3.25 ಕೋಟಿ ರೂ ವಂಚಿಸಿರುವ ಪ್ರಕರಣವನ್ನು ತನಿಖೆಯನ್ನು ತೀವ್ರಗೊಳಿಸಿರುವ ರಾಜರಾಜೇಶ್ವರಿನಗರ ಪೊಲೀಸರು, ಸರ್ಚ್ ವಾರೆಂಟ್ ಪಡೆದು ನಿನ್ನೆ ಆರೋಪಿ ಐಶ್ವರ್ಯ ಗೌಡ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.3.25 ಕೋಟಿ ರೂ. ಹಾಗೂ 430 ಗ್ರಾಂ ಚಿನ್ನಾಭರಣ ವಂಚಿಸಿರುವುದಾಗಿ ಆರೋಪಿಸಿ ಶಿಲ್ಪಾ ಗೌಡ ಎಂಬವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಐಶ್ವರ್ಯ ಗೌಡ ಮನೆ ಶೋಧಿಸಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದು, ಇಂದು ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ..
Previous Articleಸೌತೆ ಕಾಯಿ ತಿನ್ನಿಸಿದ್ದಕ್ಕೆ ಹೀಗಾ ಮಾಡೋದು
Next Article ಕೇಂದ್ರದ ಜೊತೆ ಮತ್ತೊಂದು ಸಂಘರ್ಷಕ್ಕೆ ಸಜ್ಜಾದ ರಾಜ್ಯ