ಬೆಂಗಳೂರು,ಜು.2:
ಜಾತಿ ಗಣತಿ ಹೆಸರಿನಲ್ಲಿ ಈಗಾಗಲೇ 160 ಕೋಟಿ ರೂಪಾಯಿ ಪೋಲು ಮಾಡಿರುವ ರಾಜ್ಯ ಸರ್ಕಾರ ಈಗ ಒಳಮೀಸಲಾತಿಗಾಗಿ ಮಾಡುತ್ತಿರುವ ಸಮೀಕ್ಷೆಯ ಹೆಸರಿನಲ್ಲಿ ಇನ್ನೊಂದಿಷ್ಟು ಕೋಟಿ ಲೂಟಿ ಮಾಡುತ್ತಿದೆ ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್ ಅಶೋಕ್ ಆಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಒಳ ಮೀಸಲಾತಿಗಾಗಿ ಸಮೀಕ್ಷೆ ನಡೆಸಬೇಕಾದ ಸಿಬ್ಬಂದಿ ಮನೆ ಮನೆಗೆ ಹೋಗದೇ, ಜನರೊಂದಿಗೆ ಸಂಪರ್ಕವಿಲ್ಲದೆ, ಕೇವಲ ಬಾಗಿಲಿಗೆ “ಸಮೀಕ್ಷೆ ಪೂರ್ಣ” ಎನ್ನುವ ಸ್ಟಿಕ್ಕರ್ ಅಂಟಿಸಿ ಹೋಗುತ್ತಿದ್ದಾರೆ ಎಂದು ದೂರಿದ್ದಾರೆ
ಇದು ಯಾವ ಸೀಮೆ ಸಾಮಾಜಿಕ ನ್ಯಾಯ ಸ್ವಾಮಿ? ಜನರ ತೆರಿಗೆ ದುಡ್ಡನ್ನ ಹಗಲು ದರೋಡೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ದಲಿತರಿಗೆ ಮೋಸ ಮಾಡುತ್ತಿದೆ.ಜನರ ಜಾತಿಯ ಬಗ್ಗೆ ಕೇಳದೆ, ಮಾಹಿತಿ ಸಂಗ್ರಹಿಸದೇ ನಡೆಯುತ್ತಿರುವ ಇದನ್ನು ಸಮೀಕ್ಷೆ ಅನ್ನುತ್ತಾರಾ ಇದು ಸಮೀಕ್ಷೆ ಅಲ್ಲ, ಇದು ಸರ್ಕಾರಿ ನಿರ್ದೇಶಿತ ಹಗರಣ ಎಂದು ಹೇಳಿದ್ದಾರೆ
ಇಂತಹ ಕಾಟಾಚಾರದ, ಬೂಟಾಟಿಕೆಯ, ತೋರಿಕೆಯ ಜಾತಿ ಸಮೀಕ್ಷೆ ಏಕೆ ಮಾಡುತ್ತಿದ್ದೀರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ? ಇದು ಯಾವ ಪುರುಷಾರ್ಥಕ್ಕೆ? ಯಾರ ಲಾಭಕ್ಕೆ ಎಂದು ಪ್ರಶ್ನಿಸಿದ್ದಾರೆ.
Previous Articleಕಾಲ್ತುಳಿತದ ಕಾರಣ 10 ದಿನದಲ್ಲಿ ಬಹಿರಂಗ.
Next Article ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್