ಆಸ್ಟ್ರೇಲಿಯಾದ ಮೆಲ್ಬೋರ್ನ್ನ ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ವಿಶ್ವದ ಅತ್ಯಂತ ವಿಷಕಾರಿ ಹಾವು ತನ್ನ ಕಾಲನ್ನು ಹತ್ತುವುದನ್ನು ನೋಡಿ ತನ್ನ ಜೀವನದ ಅತ್ಯಂತ ಭಯಪೂರ್ಣ ಸನ್ನಿವೇಶಕ್ಕೆ ಸಾಕ್ಷಿಯಾದರು. ಶನಿವಾರದಂದು ಬರಿಗಾಲಿನಲ್ಲಿದ್ದ ಮತ್ತು ರಸ್ತೆಯ ಬದಿಯಲ್ಲಿ ಕಾರುಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದ ಮಹಿಳೆಯ ಯೋಗಕ್ಷೇಮ ವಿಚಾರಣೆಗಾಗಿ ಆಕೆಯನ್ನು ಠಾಣೆಗೆ ಕರೆಯಲಾಯಿತು ಎಂದು ವಿಕ್ಟೋರಿಯಾ ರಾಜ್ಯದ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಂದಾಗ, ಅವರು ಏನು ಮಾಡುತ್ತಿದ್ದಾರೆಂದು ಆ ಮಹಿಳೆಗೇ ತಿಳಿಯದಷ್ಟು ಅವರು ದಿಗ್ಭ್ರಾಂತರಾಗಿದ್ದರು.
ತನ್ನ ಕಾಲಿಗೆ ಏನೋ ತಗುಲಿದಭಾಸವಾದಾಗಿ ತಾನು ಚಾಲಯಾಸುತ್ತಿದ್ದ ಕಾರಿನಲ್ಲಿ ಅತ್ಯಂತ ವಿಷಪೂರಿತ ಟೈಗರ್ ಹಾವು ತನ್ನ ಕಾಲ ನ್ನು ಹತ್ತುತ್ತಿರುವುದು ಕಂಡು ಅವರಿಗೆ ಏನೂ ತೋಚದಷ್ಟು ಗಾಬರಿಯಾಯಿತು ಎಂದು ಹೇಳಿದ್ದಾರೆ.
ಹೇಗೋ ಹಾವನ್ನು ಕಾಲಿನಿಂದ ದೂರವಿಟ್ಟು ಟ್ರಾಫಿಕ್ ಮೂಲಕ ಹಾಗೂ ಹೀಗೂ ಕಾರು ಚಲಾಯಿಸಿ ಸಹಾಯ ಪಡೆಯಲು ನಿಲ್ಲಿಸಲಾಯಿತು ಎಂದು ಮಹಿಳೆ ಹೇಳಿದ್ದಾರೆ.