ಬೆಂಗಳೂರು.
ಗಣಿ ಧೂಳಿನ ರಾಜಕಾರಣಕ್ಕೆ ಹೆಸರಾದ ಗಣಿ ನೋ
ನಾಡು ಬಳ್ಳಾರಿ ರಕ್ತ ಸಿಕ್ತ ರಾಜಕಾರಣಕ್ಕೂ ಕೂಡ ಹೆಸರುವಾಸಿ. ಇದನ್ನು ನಿಜ ಎಂದು ಸಾಬೀತು ಪಡಿಸಲು ಮತ್ತೊಂದು ಉದಾಹರಣೆ ಸಿಕ್ಕಿದೆ.ಅದು ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಅವರು ತಮ್ಮ ಒಂದು ಕಾಲದ ಆಪ್ತ ಗೆಳೆಯ ಹಾಗೂ ಮಾಜಿ ಮಂತ್ರಿ ಬಿ ಶ್ರೀರಾಮುಲು ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.
ಒಂದು ಕಾಲದಲ್ಲಿ ಶ್ರೀರಾಮುಲು ದೊಡ್ಡ ರೌಡಿ ಯಂತೆ ಇದ್ದರು. ಕಾಂಗ್ರೆಸ್ ಮುಖಂಡರಾದ ಮಾಜಿ ಮಂತ್ರಿ ಬಿ ದಿವಾಕರ ಬಾಬು ಮತ್ತು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು. ಅವರನ್ನು ಕೊಲೆ ಮಾಡಲು ತಯಾರಾಗಿದ್ದ ಇವರು ಸದಾ ಚಾಕು ಇಟ್ಟುಕೊಂಡು ಓಡಾಡುತ್ತಿದ್ದರು ಎಂದು ಆಪಾದಿಸಿದ್ದಾರೆ.
ಒಂದು ಕಾಲದ ಆಪ್ತ ಗೆಳೆಯರಾಗಿದ್ದ ಈ ಇಬ್ಬರ ನಡುವೆ ಇದೀಗ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ ಜನಾರ್ಧನ ರೆಡ್ಡಿ ಅವರ ಕಾರಣಕ್ಕಾಗಿ ತಾವು ಬಿಜೆಪಿ ತೊರೆಯಲು ಸಿದ್ದನಾಗಿದ್ದೇನೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಜನಾರ್ದನ ರೆಡ್ಡಿ ರೌಡಿ ಯಾಗಿದ್ದ ಶ್ರೀರಾಮುಲು ಅವರನ್ನು ಸಜ್ಜನರನ್ನಾಗಿ ಮಾಡಿದ್ದು ನಾನು. ನನ್ನಿಂದಾಗಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದು ಉತ್ತಮ ವ್ಯಕ್ತಿ ಯಾಗಿರುವ ಶ್ರೀರಾಮುಲು ನನ್ನ ವಿರುದ್ಧವೇ ಆರೋಪ ಮಾಡುತ್ತಿರುವುದು ಸರಿಯಲ್ಲ ಅವರಿಗೆ ಬಿಜೆಪಿ ಬಿಡಬೇಕು ಎನಿಸಿದರೆ ಬಿಟ್ಟು ಹೋಗಲಿ ನನ್ನ ವಿರುದ್ಧ ಆರೋಪ ಮಾಡಬಾರದು ಎಂದು ಕಿಡಿ ಕಾರಿದ್ದಾರೆ.ರಾಮುಲು ಅವರನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ರಾಮುಲು ಅವರ ಮಾವ ರೈಲ್ವೇ ಬಾಬು ಅವರನ್ನು ಕೊಲೆ ಮಾಡಲಾಗುತ್ತದೆ. 1991ರಲ್ಲಿ ಆದ ಭೀಕರ ಕೊಲೆ ಅದು. ಆಗ ರಾಜಕೀಯ ಶತ್ರುಗಳ ವಿರುದ್ಧ ಪ್ರತೀಕಾರ ತೀರಿಸಲು ಶ್ರೀರಾಮುಲು ಮುಂದಾಗಿದ್ದರು. ಅವರು ಚಾಕು, ಬೆನ್ನಿಗೆ ಲಾಂಗು ಹಿಡಿದುಕೊಂಡು 40 ಜನ ಬೆಂಬಲಿಗರ ಜೊತೆ ಬಂದಿದ್ರು. ಅಂದು ರಾಮುಲು ಅವರನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿ ಇತ್ತು. ಅವರ ಮೇಲೂ ಜೀವ ಬೆದರಿಕೆ ಇತ್ತು. ರಕ್ಷಣೆಗಾಗಿ ರಾಮುಲು ಹುಡುಗರ ಜೊತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು. ಅಂದು ರಾಮುಲು ಅವರನ್ನು ನಾವು ಉಳಿಸಿಕೊಳ್ಳಬೇಕಾಗಿತ್ತು. ನಮ್ಮ ತಾಯಿ ಕಾಪಾಡು ಅವನನ್ನು ಎಂದಿದ್ರು. ಅಂದು ನಾನು ಅವರ ಜೊತೆಗೆ ನಿಂತೆ. ನಾನು ಅವರನ್ನು ಉಳಿಸಿಕೊಂಡೆ ಎಂದು ಹೇಳಿದರು.ಅಂದು ರಾಮುಲು ಓಡೋಡಿ ಬಂದ. ನಾನು ಅಂದು ಅವನನ್ನು ಸನ್ಮಾರ್ಗಕ್ಕೆ ತಂದಿದ್ದೆ. ಪ್ರತಿಕಾರ ತೀರಿಸಲು ಮುಂದಾಗಿದ್ದ ರಾಮುಲುಗೆ ರಾಮಾಯಣ ಹೇಳಿ ಒಳ್ಳೆಯ ಮಾರ್ಗಕ್ಕೆ ತಂದಿದ್ದೆ. ಅದೇ ಇಂದು ತಪ್ಪಾಯ್ತು. ಅವನು ಒಮ್ಮೆ ಕ್ರೈಂನಲ್ಲಿ ಭಾಗಿ ಆದ್ರೆ, ಮತ್ತೆ ಅದೇ ಮಾರ್ಗದಲ್ಲಿ ಹೋಗುತ್ತಾನೆ ಎಂದು ಅವನಿಗೆ ಬುದ್ದಿ ಹೇಳಿದ್ದೆ. ರಾಮುಲು ಮತ್ತವರ ತಂಡ ದಿವಾಕರ ಬಾಬು ಮತ್ತು ಸೂರ್ಯನಾರಾಯಣ ರೆಡ್ಡಿ ಕೊಲೆಗೆ ಸ್ಕೆಚ್ ಹಾಕಿದ್ರು. ಅದನ್ನು ತಡೆದು ಸನ್ಮಾರ್ಗದಲ್ಲಿ ಕರೆದುಕೊಂಡು ಬಂದಿದ್ದು ನಾನು ಎಂದರುನನ್ನ ಮಾತಿನಂತೆ ರಾಮುಲು ರಾಜಕೀಯಕ್ಕೆ ಬಂದ್ರು. 1999ರಲ್ಲಿ ಯಡಿಯೂರಪ್ಪ ಹಾಗೂ ಸುಷ್ಮಾ ಸ್ವರಾಜ್ ಭೇಟಿ ಮಾಡಿಸಿದೆ. ಶಾಸಕ ಕ್ಷೇತ್ರಕ್ಕೆ ಟಿಕೆಟ್ ಕೊಡಿಸಿದೆ.ರಾಮುಲು ಅಂದು ಯಡಿಯೂರಪ್ಪ ಅವರ ಮುಂದೆ ಕಣ್ಣೀರು ಹಾಕಿದ್ದರು .ಆ Electionಯಲ್ಲಿ ರಾಮುಲು ಸೋತರು. ಆದರೆ ಬಿಜೆಪಿಯಲ್ಲಿ ಅವರು ಬೆಳೆದರು. ನಮ್ಮಿಬ್ಬರ ಸ್ನೇಹ ರಾಜಕೀಯ ಮೀರಿದ್ದು. ನಂತರ ಸಮ್ಮಿಶ್ರ ಸರ್ಕಾರ ಬಂದಾಗ ರಾಮುಲುನ ಮಂತ್ರಿ ಮಾಡಿಸಿದ್ದು ನಾನು. 2018ರಲ್ಲಿ ಬಳ್ಳಾರಿ ಗ್ರಾಮಾಂತರ ಬಿಟ್ಟು ರಾಮುಲು ಮೊಳಕಾಲ್ಮೂರಿನಲ್ಲಿ ಸ್ಪರ್ಧೆ ಮಾಡಿದ್ರು. ಬಳ್ಳಾರಿ ಗ್ರಾಮಾಂತರದಲ್ಲಿ ಆಗ ಅವರಿಗೆ ಸೋಲೋ ಭಯ ಇತ್ತು. ಆಗ ಬಾದಾಮಿಗೂ ಅವರಿಗೆ ಟಿಕೆಟ್ ಕೊಡಲಾಯ್ತು. ಮೊಳಕಾಲ್ಮೂರಿನಲ್ಲಿ ಆಕಾಂಕ್ಷಿ, ಆಗಿನ ಶಾಸಕ ತಿಪ್ಪೇಸ್ವಾಮಿ ರಾಮುಲು ಮೇಲೆ ದಾಳಿ ಮಾಡಿಸಿದ್ರು. ನಾನು ಆಗ ಮೊಳಕಾಲ್ಮೂರಿಗೆ ಹೋದೆ. ರಾಮುಲು ಪರ ಪ್ರಚಾರ ಮಾಡಿದೆ, 45 ಸಾವಿರ ಮತಗಳಿಂದ ನಾನು ಆಗ ರಾಮುಲುನ ಗೆಲ್ಲಿಸಿದೆ ಎಂದು ತಿರುಗೇಟು ನೀಡಿದರುನಾನು ನನ್ನ ಸ್ನೇಹಿತನಿಗೆ ದ್ರೋಹ ಮಾಡಿದೆ, ಅವಮಾನ ಮಾಡಿದೆ ಅಂತ ರಾಮುಲು ಬಳ್ಳಾರಿಯಮ್ಮ ದೇವಿ ಬಳಿ ಹೋಗಿ ಕಣ್ಣೀರು ಹಾಕಲಿ. ಕರ್ಮ ಯಾರಿಗೂ ಬಿಡಲ್ಲ. ನಾನು ಎಲ್ಲೆ ಮೆಟ್ಟಿ ನಿಂತು ಬಂದಿದ್ದೇನೆ. ನನಗೆ ಅನ್ಯಾಯ ಮಾಡಿದವರಿಗೆ ಇವತ್ತು ಕರ್ಮ ಏನೇನು ಮಾಡ್ತಿದೆ ಅಂತ ನೋಡುತ್ತಿದ್ದೇನೆ. ಕರ್ಮ ಮತ್ತು ಭಗವಂತನ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ ಎಂದರು.
ದಿವಾಕರ್ ಬಾಬು ಕೊಲೆಗೆ ಶ್ರೀ ರಾಮುಲು ಸ್ಕೆಚ್ ಹಾಕಿದ್ದರಾ.?
Previous Articleಮುಡಾ ಹಗರಣದಲ್ಲಿ ಸಿಎಂ ಪಾತ್ರ ಗೊತ್ತಾ ?
Next Article ರಾಜಿ ಮಾಡಿಕೊಂಡ ಅಶೋಕ್ ಖೇಣಿ