ಹಾವೇರಿ,ನ. 14-
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪElection ನಡೆದು ಮರುದಿನವೇ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಖಾಲಿ ಸೈಟ್ನ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್ಗಳು ಪತ್ತೆಯಾಗಿದ್ದು, ಅನುಮಾನ ಹುಟ್ಟು ಹಾಕಿದೆ.
ಈ ಅನುಮಾನದ ಬೆನ್ನಲ್ಲೇ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಶಿಗ್ಗಾಂವಿ ಉಪಚುನಾವಣೆಗೂ ಮತ್ತು ಈ ಬ್ಯಾಲೆಟ್ ಬಾಕ್ಸ್ಗಳಿಗೂ ಸಂಬಂಧ ಇಲ್ಲ. ಉಪ ಚುನಾವಣೆಯಲ್ಲಿ ಇವಿಎಂ ಬಳಸಲಾಗಿದೆ. ಈ ಬ್ಯಾಲೆಟ್ ಬಾಕ್ಸಗಳು ನಿರುಪಯಕ್ತವಾಗಿದ್ದವು ಎಂದು ಸ್ಪಷ್ಟಪಡಿಸಿದರು.
ಪತ್ತೆಯಾಗಿರುವ ಬ್ಯಾಲೆಟ್ ಬಾಕ್ಸಗಳು
ಹಲವು ವರ್ಷಗಳಿಂದ ಬಳಕೆಯಾಗಿರಲಿಲ್ಲ. ಹೀಗಾಗಿ, ಎಪಿಎಂಸಿಯಲ್ಲಿರುವ ಒಂದು ಹಳೆ ಗೋದಾಮಿನಲ್ಲಿ ಇಡಲಾಗಿತ್ತು ಎಂದು ತಿಳಿಸಿದರು.
ಹಲವು ವರ್ಷಗಳ ಹಿಂದೆಯೇ ಗೋದಾಮಿನಲ್ಲಿ ತಂದಿಡಲಾಗಿತ್ತು. ಕಿಡಿಗೇಡಿಗಳು ಬಾಕ್ಸ್ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿದ್ದಾರೆ. ಆದರೆ, ಸಾಗಿಸಲು ಸಾಧ್ಯವಾಗದೇ, ಕಾಲುವೆಯಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಹೇಳಿದರು.
ಬಳಕೆಯಲ್ಲಿಲ್ಲದ ಈ ಬ್ಯಾಲೆಟ್ ಬಾಕ್ಸ್ಗಳನ್ನು ಇಟ್ಟಿದ್ದ ಗೋದಾಮಿಗೆ ಭೇಟಿ ನೀಡಿದ ಪೊಲೀಸರು ಮತ್ತು ಹಾವೇರಿ ತಹಶೀಲ್ದಾರ್ ಶರಣಮ್ಮ ಪರಿಶೀಲನೆ ನಡೆಸಿದರು. ಪೊಲೀಸರು ಕಂದಾಯ ಇಲಾಖೆಯವರಿಂದ ದೂರು ಪಡೆದು ತನಿಖೆ ಮುಂದುವರೆಸಿದ್ದಾರೆ.