Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬ್ರಹ್ಮರ್ಷಿ ನಾರಾಯಣ ಗುರುಗಳು..
    Trending

    ಬ್ರಹ್ಮರ್ಷಿ ನಾರಾಯಣ ಗುರುಗಳು..

    vartha chakraBy vartha chakraAugust 20, 2024119 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಸಾಮಾಜಿಕ ಸಂತ ಬದಲಾವಣೆಯ ಹರಿಕಾರ ಕಾಯಕಯೋಗಿ ಬಸವಣ್ಣ ಅವರ ತತ್ವ ನಿಷ್ಠೆ ಗಳ ಪ್ರಬಲ ಆರಾಧಕರಂತೆ ಗೋಚರಿಸುವ ಬ್ರಹ್ಮಶ್ರೀ ನಾರಾಯಣ ಗುರುಗಳು ದಕ್ಷಿಣ ಭಾರತದಲ್ಲಿ ದೇವರು ಧರ್ಮದ ಬೆಳಕಿನಿಂದ ವಂಚಿತರಾದ ಜನಕ್ಕೆ ದೇವರನ್ನು ಕೊಟ್ಟ ಮಹಾನ್ ಸಂತ.
    1854ರಲ್ಲಿ ಕೇರಳದ ತಿರುವನಂತಪುರ ಸಮೀಪದ ದ ಚೆಂಬಿಳಂತಿ ಎಂಬ ಗ್ರಾಮದಲ್ಲಿನ ತೀರಾ ಹಿಂದುಳಿದ ಈಳವ ಸಮುದಾಯದ ಮಾದನ್‌ ಆಶಾನ್‌ ಮತ್ತು ಕುಟ್ಟಿ ಅಮ್ಮಾಳ್‌ ದಂಪತಿಗೆ ಜನಿಸಿದ ಈ ಮಹಾನ್ ಸಾಧಕನ ಹೆಸರು ನಾರಾಯಣ. ತಂದೆ ತಾಯಿಯರ ಪಾಲಿಗೆ ಪ್ರೀತಿಯ ನಾಣು.
    ಬಾಲ್ಯದಲ್ಲಿ ಎಲ್ಲ ಮಕ್ಕಳಂತೆ ಸಹಜ ರೀತಿಯ ಚಟುವಟಿಕೆಯಿಂದ ಇರುತ್ತಿದ್ದ ನಾಣು ಕೆಲವೊಂದು ವಿಷಯಗಳ ಕುರಿತು ತತ್ವಜ್ಞಾನಿಯಂತೆ ಮಾತನಾಡುತ್ತಿದ್ದರು ಬಾಲ್ಯದಲ್ಲೇ ಕಂಡ ಈತನ ಗುಣವನ್ನು ಇತರರೊಂದಿಗೆ ಹೇಳಿಕೊಂಡ ತಂದೆ ತಾಯಿ ನಾರಾಯಣನಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಸಂಕಲ್ಪ ಮಾಡಿದರು.
    ನಾರಾಯಣ ವಿದ್ಯಾವಂತನಾದರೆ ಏನೋ ಮಹತ್ತರವಾದದ್ದನ್ನು ಸಾಧಿಸಲಿದ್ದಾನೆ ಎಂದು ನಂಬಿದ ತಂದೆ ತಾಯಿ ಆತನನ್ನು ಬಾಲ್ಯದಲ್ಲಿ ಶಾಲೆಗೆ ಸೇರಿಸಿದರು
    ಬಾಲಕ ನಾರಾಯಣ ಅಂದಿನ ಕಾಲಕ್ಕೆ ತಿರುವನಂತಪುರಂ ಪ್ರಾಂತ್ಯದಲ್ಲಿ ಪ್ರಖ್ಯಾತರಾಗಿದ್ದ ಮೂತ್ತ ಪಿಳ್ಳೆ ಆಶಾನ್‌, ಸುಂದರ ಪಿಳ್ಳೆ ಆಶಾನ್‌, ಇವರಿಂದ ಮಳೆಯಾಳ ಸಂಸ್ಕೃತ ಅಭ್ಯಾಸ ಮಾಡಿದರು.
    ಇಲ್ಲಿಯೇ ಅವರಿಗೆ ಪುರಾಣ ಜ್ಞಾನ, ರಾಮಾಯಣ, ಭಾರತ, ಭಾಗವತವೇ ಮೊದಲಾದ ಧರ್ಮಗ್ರಂಥಗಳ ಜ್ಞಾನ ದೊರೆಯಿತು. ಇದಾದ ಬಳಿಕ ಉನ್ನತವಾದ ಹಿಂಗ ಮಾಡುವ ಆಕಾಂಕ್ಷೆ ಹೊಂದಿದ್ದ ನಾಣುವಿಗೆ ದೂರದ ಕರುನಾಗಪಳ್ಳಿಯ ಚೆರುವನ್ನಾರ್‌ ಮನೆತನದ ಶ್ರೀರಾಮನ್‌ ಆಶಾನ್‌ ಎಂಬ ಗುರುಗಳಲ್ಲಿ ಶಿಕ್ಷ ಣ ದೊರೆಯಿತು. ಇಲ್ಲಿ ಊಟ ನಿದ್ರೆಗಳ ಪರಿವೆಯಿಲ್ಲದೆ ಕಲಿತ ನಾಣು ಅಧ್ಯಾತ್ಮ, ಆಯುರ್ವೇದ ಜ್ಯೋತಿಷ್ಯ ಶಾಸ್ತ್ರ, ವೇದ ಉಪನಿಷತ್ತು, 18 ಪುರಾಣಗಳನ್ನು ಕಲಿತರು .
    ಕಾವ್ಯ, ಮೀಮಾಂಸೆ, ನಾಟಕ, ವ್ಯಾಕರಣ, ಅಲಂಕಾರ, ತರ್ಕಶಾಸ್ತ್ರ, ವಿದ್ಯೆಗಳನ್ನು ಸಿದ್ಧಿಸಿಕೊಳ್ಳುವ ಮೂಲಕ ‘ನಾಣು ಚಟ್ಟಾಂಬಿ’ ಆಗಿ ಆಧ್ಯಾತ್ಮ ಗುರುವಾದರು. ಸಮಾಜದೊಂದಿಗೆ ಬದುಕಿನ ಪಾಠ ಕಲಿತು ಬ್ರಹ್ಮಜ್ಞಾನವನ್ನು ಪಡೆದು, ನಾರಾಯಣ ಗುರುವಾದರು.
    ನಾರಾಯಣ ಗುರುಗಳು ಯಾವುದೋ ಒಂದು ಧರ್ಮದ, ಒಂದು ಜಾತಿಯ ಗುರುವಾಗದೆ ಅಂದಿನ
    ಬ್ರಿಟೀಷ್‌ ಅರಸೊತ್ತಿಗೆಯ ಆಡಂಬರದ ಕಾಲದಲ್ಲಿ. ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಮೊದಲಾದ ಅನಿಷ್ಟ ಅಮಾನುಷ ಆಚರಣೆಗಳ ವಿರುದ್ಧ ಸಿಡಿದೆದ್ದರು.
    ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿ ಹೇಳುವ ಮೂಲಕ ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿದರು.ಬ್ರಾಹ್ಮಣರಿಗೆ ಮಾತ್ರ ದೇವಾಲಯ ವಿಗ್ರಹಗಳನ್ನು ಸ್ಥಾಪಿಸಲು ಅವಕಾಶ ಎಂದು ಬಲವಾಗಿ ನಂಬಿದ್ದ ಕಾಲದಲ್ಲಿ ದೀನ ದಲಿತರೂ ದೇವರನ್ನು ಮುಟ್ಟಿ ಪೂಜಿಸುವ ಅವಕಾಶ ಕಲ್ಪಿಸಿದ ಕ್ರಾಂತಿಕಾರಿ.
    ಮಂಗಳೂರಿನ ಕುಧ್ರೋಳಿ ಗೋಕರ್ಣನಾತೇಶ್ವರ ದೇವಾಲಯ ಸೇರಿದಂತೆ ದಕ್ಷಿಣ ಭಾರತದಲ್ಲಿ ನೂರಾರು ದೇವಾಲಯಗಳನ್ನು ಸ್ಥಾಪಿಸಿ ಅಸ್ಪೃಶ್ಯರು ಹಿಂದುಳಿದವರು ಮುಕ್ತವಾಗಿ ದೇವರನ್ನು ಪೂಜಿಸುವ ವ್ಯವಸ್ಥೆ ಕಲ್ಪಿಸಿದರು ಎಲ್ಲರಿಗೂ ಸಂಸ್ಕೃತ ಮತ್ತು ವೇದ ಅಧ್ಯಯನ ಮಾಡುವ ಅವಕಾಶವಿದೆ ಎಂದು ಪ್ರತಿಪಾದಿಸಿ ಅದನ್ನು ಬೋಧಿಸಿದ ನಾರಾಯಣ ಗುರುಗಳು ಆಧುನಿಕ ಶಿಕ್ಷಣಕ್ಕೂ ಒತ್ತು ನೀಡಿದರು.
    ಶಿಕ್ಷಣದಿಂದ ಮಾತ್ರ ಮನುಕುಲದ ಉದ್ಧಾರ ಮೂಢನಂಬಿಕೆಗಳ ನಿವಾರಣೆ ಎಂದು ಬಲವಾಗಿ ನಂಬಿದ್ದ ಅವರು ಎಲ್ಲರನ್ನು ಇಂಗ್ಲಿಷ್ ಕಲಿಯುವಂತೆ ಪ್ರೇರೇಪಿಸಿದರು.
    ಸಮಾನತೆ ಆಧ್ಯಾತ್ಮಿಕ ಚಿಂತನೆಗಳ ನೂರಾರು ಕೃತಿಗಳನ್ನು ಬರೆದಿರುವ ನಾರಾಯಣ ಗುರುಗಳು ಎಂದಿಗೂ ಎಲ್ಲರಿಗೂ ಆದರ್ಶಪ್ರಾಯರು.

    Bangalore Karnataka mangalore News Varthachakra ಧರ್ಮ ವಿದ್ಯಾ ಶಾಲೆ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous Articleನವರಂಗಿ ಸ್ವಾಮಿ ವಿರುದ್ಧ ಕ್ರಮ ಯಾಕಿಲ್ಲ..?
    Next Article ದಲಿತ ವಿರೋಧಿ ಕಾಂಗ್ರೆಸ್.
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • overseas pharmacies on ಗಾಯಾಳು ಡಿಸಿಪಿ ಸೈದುಲ್ ಮಾಡಿದ ಕೆಲಸ ಗೊತ್ತಾ ?
    • 1xbet on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • online drugstore on ಅನ್ನಭಾಗ್ಯ ಯೋಜನೆಯ ಸ್ವರೂಪ ಬದಲು.
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    CSK ವಿರುದ್ಧ ಸಿಡಿದೆದ್ದ ಜಡೇಜಾ #varthachakra #csk #jadeja #dhoni #sanjusamson #viralvideo #facts #ipl
    Subscribe