ಬೆಳಗಾವಿ,ಜ. 27-ಜಿಲ್ಲೆಯಲ್ಲಿ ಮತ್ತೊಂದು ಮಗು ಮಾರಾಟ ಜಾಲ ಪತ್ತೆಯಾಗಿದ್ದು, ಹುಕ್ಕೇರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳಾದ ಸಂಗೀತಾ ಗೌಳಿ, ಸಂಗೀತಾ ತಾವಡೆ, ಮೋಹನ್ ತಾವಡೆ ಬಂಧಿತ ಆರೋಪಿಗಳಾಗಿದ್ದಾರೆ.ಉಳಿದ ಆರೋಪಿಗಳಾದ ನಂದಕುಮಾರ ಡೋರಲೇಕರ, ನಂದಿನಿ ಡೋರಲೇಕ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಮಕ್ಕಳ ಮಾರಾಟ ಗ್ಯಾಂಗ್ ವಿದವೆಯರನ್ನೇ ಗುರಿಯಾಗಿಸಿಕೊಂಡು ಮಗು ಇದ್ದು ಪತಿಯಿಲ್ಲದ ಮಹಿಳೆಯರಿಗೆ ಎರಡನೇ ಮದುವೆ ಮಾಡಿಸುವ ನೆಪ ಮಾಡುತ್ತಿತ್ತು. ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಅರ್ಚನಾ ಅವರನ್ನು ರಾಜು ಜೊತೆ ಎರಡನೇ ಮದುವೆ ಮಾಡಿಸಿತ್ತು.
ಅರ್ಚನಾ ಅವರ ಮೊದಲ ದಾಂಪತ್ಯದ ಸಾಕ್ಷಿಯಾಗಿ ಗಂಡು ಮಗು ಜನಿಸಿತ್ತು. ಈ ಗಂಡು ಮಗು ಅರ್ಚನಾ ಅವರ ಬಳಿ ಇದೆ. ಆದರೆ, ಈ ಮಗು ಅನಾರೋಗ್ಯದಿಂದ ಬಳಲುತ್ತಿತ್ತು.
ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಆರೋಪಿಗಳಾದ ತಾವಡೆ ದಂಪತಿ ಮಗುವನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ, ಸಂಗೀತಾ ಗೌಳಿ ಮನೆಯಲ್ಲಿ ನಂದಕುಮಾರ ಡೋರಲೇಕರ ದಂಪತಿಗೆ 3 ಲಕ್ಷ ರೂ.ಗೆ ಮಗು ಮಾರಾಟ ಮಾಡಿದ್ದರು. ಮಗು ಮಾರಾಟದಿಂದ ಬಂದ ಹಣವನ್ನು ಮೂವರು ಆರೋಪಿಗಳು ಹಂಚಿಕೊಂಡಿದ್ದರು.
ಈ ಸಂಬಂಧ ಹುಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು, ಮೂವರನ್ನು ಬಂಧಿಸಿ ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.
ವಾರದ ಹಿಂದೆ ಇದೇ ಊರಲ್ಲಿ ಸಂಗೀತಾ ಎಂಬುವರ ಮಗು ಮಾರಾಟವಾಗಿತ್ತು. ಸಂಗೀತಾ ಅವರಿಗೂ ಕೂಡ ಎರಡನೇ ಮದುವೆ ಮಾಡಿಸಿ, ಅವರ ಮೊದಲ ಮಗುವನ್ನು 4 ಲಕ್ಷ ರೂ.ಗೆ ಮಾರಲಾಗಿತ್ತು. ಈ ಪ್ರಕರಣದಲ್ಲಿ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
Previous Articleಮಂತ್ರಿ ಭೈರತಿ ಸುರೇಶ್ ಗೂ ಇಡಿ ಉರುಳು
Next Article ಮುಂದಿನ ತಿಂಗಳಿನಿಂದ ಶಿವರಾಜ್ ಕುಮಾರ್ ಶೂಟಿಂಗ್ ಗೆ