ಮಹಾರಾಷ್ಟ್ರ.
ಮೊಬೈಲ್ ಇದೀಗ ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯ ಅಂಗ ಎಂಬಂತಾಗಿದೆ ಪ್ರತಿಯೊಬ್ಬ ವ್ಯಕ್ತಿಗೂ ಮೊಬೈಲ್ ಬೇಕೇ ಬೇಕು ಎಂದೆನಿಸುವ ವಾತಾವರಣ ನಿರ್ಮಾಣವಾಗಿದೆ. ಇಷ್ಟಕ್ಕೂ ಈ ಮೊಬೈಲ್ ಕೇವಲ ಸಂಪರ್ಕ ಸಾಧನವಾಗಿ ಮಾತ್ರ ಬಳಕೆಯಾಗುತ್ತಿಲ್ಲ ಇದು ಮಾಹಿತಿ ಮನರಂಜನೆಯ ಜೊತೆಗೆ ಬಹುತೇಕ ಎಲ್ಲಾ ಆಗರವಾಗಿದೆ.
ಮಾಹಿತಿ ,ಮನರಂಜನೆ, ಉದ್ಯೋಗ ಶಿಕ್ಷಣ Business ಹೀಗೆ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡಿರುವ ಮೊಬೈಲ್ ಮಕ್ಕಳಿಗಂತೂ ಅತ್ಯಂತ ಅಚ್ಚುಮೆಚ್ಚಿನ ವಸ್ತುವಾಗಿದೆ.
ಮಾರುಕಟ್ಟೆಯಲ್ಲಿರುವ ತರೇವಾರಿ ಮೊಬೈಲ್ ಗಳು ಮಕ್ಕಳ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ತಮಗೆ ಮೊಬೈಲ್ ಬೇಕೇ ಬೇಕು ಎಂದು ಪೋಷಕರ ಬಳಿ ಹಠಮಾಡಿ ಖರೀದಿಸುವ ಉದಾಹರಣೆಗಳು ಸಾಕಷ್ಟಿವೆ.
ತಮ್ಮ ಮಕ್ಕಳು ಕೇಳಿದ ಮೊಬೈಲ್ ಕೊಡಿಸಲು ಆರ್ಥಿಕವಾಗಿ ಸಬಲರಲ್ಲದ ಅನೇಕ ಮಂದಿ ಪೋಷಕರು ಅದಕ್ಕಾಗಿ ಪರಿತಪಿಸುವ ಉದಾಹರಣೆಗಳು ಇವೆ. ಇದಕ್ಕೆ ಪೂರಕವೆಂಬಂತೆ ಇಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ
ತಂದೆ ತನಗೆ ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ’ ಎಂದು ಮನನೊಂದು 16 ವರ್ಷದ ಬಾಲಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾನೆ.
ಇನ್ನೊಂದು ವಿಚಿತ್ರವೆಂದರೆ ಮಗನ ಶವ ನೋಡಿ ಆತನ ತಂದೆ ‘ಮಗನಿಗೆ ಸ್ಮಾರ್ಟ್‌ಫೋನ್ ಕೊಡಿಸಲು ಆಗಲಿಲ್ಲ’ ಎಂದು ತಾನೂ ಸಹ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.
ನಾಂದೇಡ್ ಜಿಲ್ಲೆಯ ಬಿಳೋಳಿ ತಾಲ್ಲೂಕಿನ ಮಿನಾಕಿ
ಗ್ರಾಮದ ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಹಾಸ್ಟೆಲ್ ನಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ.
ಹಬ್ಬಕ್ಕಾಗಿ ಮನೆಗೆ ಬಂದಿದ್ದ ಮಗ ತನ್ನ ತಂದೆಗೆ ಸ್ಮಾರ್ಟ್‌ಫೋನ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಬಡ ರೈತ ಕುಟುಂಬದ ರಾಜು ಮಗನಿಗೆ ಸ್ಮಾರ್ಟ್‌ಫೋನ್ ಕೊಡಿಸಲು ಆಗಿರಲಿಲ್ಲ. ಇದರಿಂದ ಮನನೊಂದ ಬಾಲಕ ಡೆತ್ ನೋಟ್ ಬರೆದಿಟ್ಟು ಹೊಲದಲ್ಲಿನ ಮರಕ್ಕೆ ಬಾಲಕ ನೇಣು ಹಾಕಿಕೊಂಡಿದ್ದ.
ಹೊರಗೆ ಆಟವಾಡಲು ಹೋದ ಮಗ ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ತಿಳಿದ ತಂದೆ ಆತನಿಗಾಗಿ ಊರಲ್ಲ ಹುಡುಕಾಡಿದ್ದಾರೆ. ಕೊನೆಗೆ ರಾತ್ರಿ ವೇಳೆ ಹೊಲದಲ್ಲಿನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಗನ ಮೃತ ದೇಹ ಸಿಕ್ಕಿದೆ. ಜೊತೆಗೆ ಡೆತ್ ನೋಟ್ ಕೂಡ ಸಿಕ್ಕಿದೆ.
ಇದನ್ನು ನೋಡಿದ ತಂದೆ ತಮ್ಮ ಮಗನಿಗೆ ಮೊಬೈಲ್ ಕೊಡಿಸಲು ಸಾಧ್ಯವಾಗಲಿಲ್ಲ ಎಂದು ಮನನೊಂದು ಅದೇ ಪಕ್ಕದಲ್ಲಿ ತಾನೂ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಎಂದು ನಾಂದೇಡ್ ಎಸ್‌ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.