Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಯಾಕೆ ಹೀಗೆ ಆಡುತ್ತಾರೆ ವಿಜಯೇಂದ್ರ.
    ರಾಜಕೀಯ

    ಯಾಕೆ ಹೀಗೆ ಆಡುತ್ತಾರೆ ವಿಜಯೇಂದ್ರ.

    vartha chakraBy vartha chakraFebruary 19, 202527 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು:
    ನಾಯಕತ್ವ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ತೀವ್ರಗೊಂಡಿರುವ ನಡುವೆಯೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೈಗೊಂಡಿರುವ ತೀರ್ಮಾನ ಉನ್ನತ ವಲಯದಲ್ಲಿ ಮತ್ತೊಂದು ಸುತ್ತಿನ ಅಸಮಧಾನಕ್ಕೆ ಕಾರಣವಾಗಿದೆ.
    ಪಕ್ಷ ರಾಜಕಾರಣದ ವ್ಯವಸ್ಥೆಯಲ್ಲಿ ಪಕ್ಷದ ಅಧ್ಯಕ್ಷರಿಗೆ ಸಂಘಟನಾತ್ಮಕ ವಿಷಯಗಳ ಕುರಿತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತದೊಂದಿಗೆ ಸಭೆ ಸಮಾಲೋಚನೆ ನಡೆಸಲು ಸಂಪೂರ್ಣ ಅಧಿಕಾರವಿದೆ ಅದೇ ರೀತಿ ಶಾಸನಸಭೆಯ ಕಾರ್ಯಕಲಾಪಗಳು ಚರ್ಚೆಯ ವಿಧಾನಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗೆ ನೀಡಲಾಗಿದೆ.
    ಶಾಸಕಾಂಗ ವಿಚಾರದ ಕುರಿತು ಸಭೆ ಮತ್ತು ಸಮಾಲೋಚನೆ ನಡೆಸಲು ಶಾಸಕಾಂಗ ಪಕ್ಷದ ನಾಯಕರ ಸೂಚನೆಯ ಮೇರೆಗೆ ಶಾಸಕಾಂಗ ಕಾರ್ಯದರ್ಶಿ ಶಾಸಕಾಂಗ ಸಭೆ ಕರೆಯುತ್ತಾರೆ. ಇಲ್ಲಿ ಪಕ್ಷದ ಅಧ್ಯಕ್ಷರು ಶಾಸಕರಲ್ಲದೆ ಹೋದರೂ ಕೂಡ ಆಹ್ವಾನಿಕರಾಗಿ ಶಾಸಕಂಗ ಸಭೆಗೆ ಹಾಜರಾಗಬಹುದು.
    ಒಟ್ಟಾರೆ ಶಾಸಕಾಂಗ ಸಭೆ ಕರೆಯಲು ಪರಮಾಧಿಕಾರ ಶಾಸಕಾಂಗ ಪಕ್ಷದ ನಾಯಕರಿಗೆ ಮೀಸಲು. ಇಂತಹ ಅಧಿಕಾರವನ್ನು ಈಗ ವಿಜಯೇಂದ್ರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
    ಮಾರ್ಚ್ 3ರಿಂದ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ತಂತ್ರಗಾರಿಕೆ ನಡೆಸುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಫೆ. 20, 21ರಂದು ಸಭೆ ಕರೆಯಲಾಗಿದೆ. ಈ ಮೂಲಕ ಶಾಸಕರ ವಲಯದಲ್ಲೂ ತಮ್ಮ ಪ್ರಭಾವ ಬಿಗಿ ಮಾಡಿಕೊಳ್ಳುವುದಕ್ಕೆ ವಿಜಯೇಂದ್ರ ಮುಂದಾಗಿದ್ದಾರೆ.
    ಸಾಮಾನ್ಯವಾಗಿ ಅಧಿವೇಶನದ ಸಿದ್ಧತೆ ಬಗ್ಗೆ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಆದರೆ ಈ ಬಾರಿ ರಾಜ್ಯಾಧ್ಯಕ್ಷರೇ ಮುಂದಡಿ ಇಟ್ಟಿದ್ದು, ವಿಪಕ್ಷ ನಾಯಕರಾದ ಆರ್‌. ಅಶೋಕ್‌ ಹಾಗೂ ಛಲವಾದಿ ನಾರಾಯಣ ಸ್ವಾಮಿಗೂ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
    ವಿಜಯೇಂದ್ರ ಅವರ ಈ ನಡೆಗೆ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಇದನ್ನು ಹೈಕಮಾಂಡ್ ಗಮನಕ್ಕೆ ತರಲು ಕೂಡ ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    Verbattle
    Verbattle
    Verbattle
    ಬಿಜೆಪಿ Bengaluru
    Share. Facebook Twitter Pinterest LinkedIn Tumblr Email WhatsApp
    Previous Articleಯಾರೇ.. ಕೂಗಾಡಲಿ…
    Next Article ಬ್ಯಾಂಕ್ ಲಾಕರ್ ನಲ್ಲಿಟ್ಟ ಹಣಕ್ಕೆ ಹೀಗಾದರೆ ಯಾರು ಹೊಣೆ
    vartha chakra
    • Website

    Related Posts

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಸತ್ತವಳು ಎದ್ದು ಬಂದಾಗ!

    February 15, 2026

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LarryCax on ಜನವರಿ 26ಕ್ಕೆ ಬದಲಾವಣೆ ಮುನ್ಸೂಚನೆ ನೀಡಿದ ಪರಮೇಶ್ವರ್!
    • LinwoodGah on ಬಲೆಗೆ ಬಿದ್ದ ಡ್ರಗ್ ಫೆಡ್ಲರ್ ಗಳು
    • LinwoodGah on ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.