ನೆರೆಯ ರಾಷ್ಟ್ರ ನೇಪಾಳ ರಾಜಕೀಯದಲ್ಲಿ ಹೊಸ ಶಕೆ ಆರಂಭಗೊಂಡಿದೆ.ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ನಾಯಕ ಬಾಲೇಂದ್ರ ಶಾ ಅವರು ನೇಪಾಳದ 47ನೇ ಪ್ರಧಾನ ಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ .
ಇದರ ಬೆನ್ನಲ್ಲೇ ಜೆನ್ ಝೀ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ಆದೇಶ ಹೊರ ಬಿದ್ದ ಕೆಲವೇ ಕ್ಷಣಗಳಲ್ಲಿ, ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಮಾಜಿ ಗೃಹ ಮಂತ್ರಿ ರಮೇಶ್ ಲೇಖಕ್ ಅವರನ್ನು ಬಂಧಿಸಲಾಗಿದೆ.
ನೇಪಾಳದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಜೆನ್ ಝೀ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಹಾಗೂ ಜನರ ಸಾವು ತಡೆಯುವಲ್ಲಿ ಶರ್ಮಾ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.
2025ರ ಸೆಪ್ಟೆಂಬರ್ 8ರಂದು ನಡೆದ ಹೋರಾಟದಲ್ಲಿ 19 ಮಂದಿ ಜೆನ್ ಝೀ ಪ್ರತಿಭಟನಾಕಾರರು ಮೃತಪಟ್ಟಿದ್ದರು. ಹಲವು ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯನ್ನು ನಿಲ್ಲಿಸಲು ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕಾಗಿ ಓಲಿ ಅವರನ್ನು ತನಿಖಾ ಆಯೋಗವು ಹೊಣೆಗಾರರನ್ನಾಗಿ ಮಾಡಿದೆ.
ಜೆನ್ ಝೀ ಪ್ರತಿಭಟನೆ ಸಂದರ್ಭದಲ್ಲಾದ ಹಿಂಸಾಚಾರದಲ್ಲಿ 76 ಮಂದಿ ಸಾವಿಗೀಡಾಗಿದ್ದರು. ಪ್ರಧಾನಿ ಓಲಿ ಅವರ ಸರ್ಕಾರ ಅಧಿಕಾರ ತ್ಯಜಿಸಿತ್ತು
Previous Articleಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!
Next Article ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

