ಬೆಂಗಳೂರು.
ಸೌತ್ ಇಂಡಿಯನ್ ಸೆನ್ಸೇಷನ್, ನ್ಯಾಷನಲ್ ಕಾಂಗ್ರೆಸ್, ಬಹು ಭಾಷಾ ನಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಾವು ರಿಲೇಶನ್ ಶಿಪ್ ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಯಾರೊಂದಿಗೆ ತಾವು ರಿಲೇಶನ್ ಶಿಪ್ ನಲ್ಲಿ ಇದ್ದೇನೆ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ .
ರಶ್ಮಿಕಾ ಅವರ ಮದುವೆ, ನಿಶ್ಚಿತಾರ್ಥ ಹಾಗೂ ತೆಲುಗು ನಟ ವಿಜಯ ದೇವರಕೊಂಡ ಜೊತೆಗಿನ ಒಡನಾಟ ಎಲ್ಲವೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ನಡುವೆ ನಟಿ ನಿವೃತ್ತಿಯ ಮಾತನಾಡಿದ್ದು ನಟ ವಿಜಯ್ ದೇವರಕೊಂಡ ಜೊತೆ ಮದುವೆಯಾಗುವ ಸೂಚನೆ ಎಂದೆ ಎಲ್ಲರೂ ಭಾವಿಸಿದ್ದರು.
ಇದರ ನಡುವೆ ಹಾಲಿವುಡ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು ತಮ್ಮ ಬದುಕು ಇಚ್ಛೆ ಸಿನಿಮಾ ಮೊದಲಾದ ವಿಷಯಗಳ ಕುರಿತಂತೆ ಮನ ಬಿಚ್ಚಿ ಮಾತನಾಡಿದ್ದಾರೆ ಇದೆ ವೇಳೆ ನಾವು ರಿಲೇಶನ್ ಶಿಪ್ ನಲ್ಲಿ ಇರುವುದಾಗಿ ತಿಳಿಸಿದ್ದಾರೆ
ಮನೆ ನನ್ನ ಸಂತೋಷದ ಸ್ಥಳ. ಯಶಸ್ಸು ಬಂದು ಹೋಗಬಹುದು, ಆದರೆ ಅದು ಶಾಶ್ವತವಲ್ಲ. ಹೊರಗಿನಿಂದ ಸಿಗುವ ಪ್ರೀತಿ ಮತ್ತು ಹೆಸರು ಕಣ್ಣಿಗೆ ಕಾಣಿಸಲಷ್ಟೆ. ಆದರೆ ಮನೆ ಸ್ಥಿರವಾಗಿರುತ್ತದೆ. ನಾನು ನಟಿ ಮಾತ್ರವಲ್ಲದೆ ಮಗಳು, ಸಹೋದರಿ, ಒಬ್ಬ ಸಂಗಾತಿ’ ಎಂದು ಹೇಳಿದ್ದಾರೆ.
ಇದೇ ವೇಳೆ ‘ಸದಾ ನಗುತ್ತಿರುವ ವ್ಯಕ್ತಿ ಮತ್ತು ಯಾರು ಅವರ ಸುತ್ತಲಿರುವ ಜನರನ್ನು ಗೌರವಿಸುತ್ತಾರೋ ಅಂತವರು ಇಷ್ಟವಾಗುತ್ತಾರೆ’ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಯಾರ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಗೊತ್ತಾ ಬೆಂಗಳೂರು.
Previous Articleಫೆಬ್ರವರಿ 1ರಿಂದ ನಂದಿನಿ ಹಾಲು ಸಿಗೋದು ಡೌಟು
Next Article ರೆಡ್ಡಿ- ಶ್ರೀರಾಮುಲು ಗೆ ಬಾಯಿ ಮುಚ್ಚಿ ಅಂದ್ರು