ಬೆಂಗಳೂರು,ಜೂ.29-ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಶ್ರೀನಿವಾಸ್ ಬಂಧಿತ ಆರೋಪಿಯಾಗಿದ್ದು, ನಕಲಿ ಅಕೌಂಟ್‌ಗಳನ್ನು ಸೃಷ್ಟಿಸಿ ವಹಿವಾಟುಗಳನ್ನು ಮಾಡಿದ ಆರೋಪದ ಈತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಕೋಟಿ ಕೋಟಿ ಹಣ ವಹಿವಾಟು ನಡೆಸಲು ಆರೋಪಿ ಶ್ರೀನಿವಾಸ್ ಸಹಾಯ ಮಾಡಿರುವುದನ್ನು ಹಗರಣದಲ್ಲಿ ಬಂಧಿತ ಆರೋಪಿಗಳು ಬಾಯ್ಬಿಟ್ಟ ತಕ್ಷಣವೇ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. ವಾಲ್ಮೀಕಿ ನಿಗಮದ ಕೋಟ್ಯಂತರ ಹಣವನ್ನು ವಹಿವಾಟಿಗೆ 193 ಅಕೌಂಟ್‌ಗಳನ್ನು ಬಳಸಿಕೊಂಡಿದ್ದರು ಎನ್ನುವುದು ಬಯಲಾಗಿದೆ. ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮ ಈ ಎಲ್ಲಾ ಯೋಜನೆಗೆ ಮಾಸ್ಟರ್ ಮೈಂಡ್ ಆಗಿದ್ದ.
ಖಾತೆಯಿಂದ ಹೊರಗೆ ಬಂದಿದ್ದ ಹಣವನ್ನು 193 ನಕಲಿ ಖಾತೆಗಳಿಗೆ ವಹಿವಾಟು ಮಾಡಿದ್ದಾರೆ. ಬಾರ್‌ನ ಮಾಲೀಕರ ಅಕೌಂಟ್‌ಗಳಿಗೆ ಹಣ ಕಳುಹಿಸಿ ಪರ್ಸಂಟೇಜ್ ಲೆಕ್ಕದಲ್ಲಿ ಕೋಟಿ ಕೋಟಿ ಹಣವನ್ನು ಡ್ರಾ ಮಾಡಿ ಕೊಟ್ಟಿರುವುದು ತನಿಖೆಯಲ್ಲಿ ಬಯಲಾಗಿದೆ.
ಯಾರದ್ದೋ ಕಂಪನಿ ಹೆಸರಿನಲ್ಲಿ ಇನ್ಯಾರೋ ಖಾತೆ ತೆರೆದು ಕೋಟಿಗಟ್ಟಲೇ ಹಣ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಅಸಲಿ ಕಂಪನಿಗಳ ಮಾಲೀಕರ ಗಮನಕ್ಕೆ ಬಾರದ ರೀತಿಯಲ್ಲಿ ವಂಚನೆ ಮಾಡಲಾಗಿದೆ. ಅದೇ ಕಂಪನಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕೋಟಿ ಕೋಟಿ ಹಣ ವಹಿವಾಟು ಮಾಡಲಾಗಿದೆ. ನಕಲಿ ಅಕೌಂಟ್‌ನ ಅಸಲಿ ಮಾಲೀಕರನ್ನು ಪೊಲೀಸರು ಪತ್ತೆ ಮಾಡಿ
ಅಸಲಿ ಮಾಲೀಕರನ್ನ ಕರೆಸಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಅಸಲಿ ಮಾಲೀಕರಿಗೆ ತಮ್ಮ ಕಂಪನಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದು ಗೊತ್ತಿಲ್ಲ. ಅದರಲ್ಲೂ ಆ ಖಾತೆಯಲ್ಲಿ ಕೋಟಿ ಕೋಟಿ ಹಣ ಇತ್ತೆ ಎಂದು ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಸಲಿ ಕಂಪನಿ ಮಾಲೀಕರಿಂದ ನಾಲ್ಕು ಎಫ್‌ಐಆರ್ ದಾಖಲಾಗಿದೆ.
ವಿಜಯ್ ಕೃಷ್ಣ ಹಾಗೂ ನವೀನ್‌ರಿಂದ ಕೆಪಿ ಅಗ್ರಹಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಜೊತೆಗೆ ವಿಜಯನಗರ ಠಾಣೆಯಲ್ಲಿ ರಾಘವೆಂದ್ರ ಹಾಗೂ ರೇಖಾ ಎಂಬವರು ದೂರು ದಾಖಲಿಸಿದ್ದಾರೆ.
ಒಂದೊಂದು ಅಕೌಂಟ್‌ನಲ್ಲಿ ಸುಮಾರು 5 ಕೋಟಿಯಂತೆ 20 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿದೆ.ಹಣ ವರ್ಗಾವಣೆ ಮತ್ತೆ ಆ ಖಾತೆಗಳಿಂದ ಹಣ ಡ್ರಾ ಮಾಡಿಕೊಳ್ಳಲಾಗಿದೆ.
ಈ ಖಾತೆಗಳಿಗೆ ವಾಲ್ಮೀಕಿ ನಿಗಮದ ಅಧಿಕೃತ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಸದ್ಯ ಈ ನಾಲ್ಕು ಎಫ್‌ಐಆರ್‌ಗಳ ಮೂಲ ಕಂಪನಿ ಮಾಲೀಕರು ಮಾಡಿಸಿದ್ದು, ಈ ಎಫ್‌ಐಆರ್‌ಗಳು ಎಸ್‌ಐಟಿಗೆ ವರ್ಗಾವಣೆಯಾಗಿದೆ.
Previous Articleಸ್ವಾಮೀಜಿಗಳಿಗೆ ಶಿವಕುಮಾರ್ ಕಿವಿಮಾತು.
Next Article ಪಂಚಾಯಿತಿಗಳಲ್ಲಿ ಜನನ- ಮರಣ ಪ್ರಮಾಣ ಪತ್ರ.