ಬೆಂಗಳೂರು,ಜು.26- ಮಾದಕ ವಸ್ತುಗಳ ವಿರುದ್ಧ ಸಮರಸಾರಿಸುವ ಸಿಸಿಬಿ ಪೊಲೀಸರು ಡ್ರಗ್ಸ್ ನ್ನು ಸಾಬೂನುಗಳ ಪ್ಯಾಕ್ ನಲ್ಲಿಟ್ಟು ಮಾರಾಟ ಮಾಡುತ್ತಿದ್ದ ವಿದೇಶಿ ಡಗ್ ಪೆಡ್ಲರ್ ನನ್ನು ಬಂಧಿಸಿ 6 ಕೋಟಿ ಮೌಲ್ಯದ 4 ಕೆ.ಜಿ ಎಂಡಿಎಂಎ ಕಿಸ್ಟೆಲ್ ನ್ನು ಜಪ್ತಿ ಮಾಡಿದ್ದಾರೆ.
ಬಿಜಿನೆಸ್ ವೀಸಾದಡಿ ನೈಜೀರಿಯಾದಿಂದ ಭಾರತಕ್ಕೆ ಬಂದು ನಗರದಲ್ಲಿ ನೆಲೆಸಿ ಹಲವು ದಿನಗಳಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಸ್ಟಿಸ್ ನೋಪರ್(41)ನಿಂದ ಆರು ಕೋಟಿ ಮೌಲ್ಯದ 4 ಕೆಜಿ ಎಂಡಿಎಂಎ ಕಿಸ್ಟೆಲ್, ಎರಡು ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್ ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೈಜೀರಿಯಾದ ಪ್ರಜೆಯೊಬ್ಬ ನಿಷೇಧಿತ ಎಂಡಿಎಂಎ ಕಿಸ್ಟೆಲ್ ಮಾರಾಟ ಮಾಡುತ್ತಿದ್ದು,ಖಚಿತವಾದ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿಯ ಬಳಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಆರೋಪಿಯು ವಿದೇಶಿ ಪ್ರಜೆಯಾಗಿದ್ದು, ಬಿಜಿನೆಸ್ ವೀಸಾದಡಿ ದೇಶಕ್ಕೆ ಬಂದು, ತಮಿಳುನಾಡಿನ ಕೊಯಮತ್ತೂರಿನಲ್ಲಿ ವಾಸವಾಗಿ ಬಟ್ಟೆ Business ಮಾಡಿಕೊಂಡು. ವ್ಯಾಪಾರದಲ್ಲಿ ನಷ್ಟ ಉಂಟಾದ ಕಾರಣ ಬೆಂಗಳೂರಿಗೆ ಬಂದು, ಇಲ್ಲಿ ನೆಲೆಸಿರುವ ವಿದೇಶಿ ಮೂಲದ ಆತನ ಸ್ನೇಹಿತರುಗಳಿಂದ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದನು.
ಮೋಜಿನ ಜೀವನ ನಡೆಸಲು ಮತ್ತು ಸುಲಭವಾಗಿ ಹಣಗಳಿಸಲು ಮುಂಬೈನಲ್ಲಿ ವಾಸವಾಗಿರುವ ಆತನ ಸ್ನೇಹಿತರುಗಳಿಂದ ಮಾದಕ ವಸ್ತುವಾದ ಎಂಡಿಎಂಎ ಕಡಿಮೆ ಬೆಲೆಗೆ ಖರೀದಿಸಿ ನಗರದ ಗ್ರಾಹಕರುಗಳಿಗೆ 1 ಗ್ರಾಂಗೆ 12ರಿಂದ 15 ಸಾವಿರದ ವರೆಗೂ ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಈತನು ಮಾದಕ ವಸ್ತುಗಳನ್ನು ಮುಂಬೈನಿಂದ ಬೆಂಗಳೂರಿಗೆ ಕೆಲಾಕ್ಸ್ , ನೆಸ್ಲೇ ಹಾಗೂ ಸೋಪುಗಳ ಲೇಬಲ್ ಇರುವ ಪ್ಯಾಕಿಂಗ್ ಬಾಕ್‌ಗಳಲ್ಲಿ ಯಾರಿಗೂ ಅನುಮಾನ ಬಾರದಂತೆ ತಂದು ಕೊಡುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದರು.
ಬಂಧಿತ ಆರೋಪಿಯ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಯ ಸಹಚರನೊಬ್ಬ ಭಾರತದಲ್ಲಿ ಅನಧಿಕೃತವಾಗಿ ವಾಸವಾಗಿದ್ದು,ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.
Previous Articleಬಿಜೆಪಿ ಪಾದಯಾತ್ರೆ ಸಮಯದಲ್ಲಿ ಅವರ ಅಕ್ರಮ ಬಯಲಾಗುತ್ತವಂತೆ.!
Next Article ಸಂಸತ್ ಭವನದ ಮುಂದೆ ರಾಜ್ಯ ಬಿಜೆಪಿ ಸಂಸದರ ಧರಣಿ.