ಬೆಂಗಳೂರು,ಜು.17-ಮಹಾಲಕ್ಷ್ಮಿ ಲೇಔಟ್ ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಹುಕ್ಕಾಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 60 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಹುಕ್ಕಾ ಬಾರ್ ತೆರೆದು ನಿಯಮಗಳನ್ನು ಉಲ್ಲಂಘಿಸಿ
ಯುವಕರನ್ನು ಮಾದಕ ಭ್ರಮಾ ಲೋಕದಲ್ಲಿ ತೇಲಿಸಿ ಅಕ್ರಮ ಹಣ ಗಳಿಸುತ್ತಿದ್ದ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಹುಕ್ಕಾ ಗೆ ಬಳಸುತ್ತಿದ್ದ ಪರಿಕರಗಳು, ಹುಕ್ಕಾಫ್ಲೇವರ್ ಗಳು ಹಾಗು 11ಸಾವಿರ ನಗರದನ್ನು ವಶಪಡಿಸಿಕೊಂಡು
ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.
ವೇಶ್ಯಾವಾಟಕೆ ದಂಧೆ:
ರಾಮಮೂರ್ತಿನಗರದ ಟಿಸಿ ಪಾಳ್ಯದ ಯೂನಿಸೆಕ್ಸ್ ಸೆಲೂನ್ ನಲ್ಲಿ ವೇಶ್ಯಾವಾಟಕೆ ದಂಧೆ ನಡೆಸುತ್ತಿರುವುದನ್ನು ಪತ್ತೆಹಚ್ಚಿ ದಾಳಿ ನಡೆಸಿದ ಸಿಸಿಬಿ ಪೊಲೀಸರು 6ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
Previous ArticleWard ಮೀಸಲಾತಿ ನಿಗಧಿ ಕಸರತ್ತು
Next Article ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ