ಬೆಂಗಳೂರು,ಆ.24- ಸರ್ಕಾರದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರ ಪುತ್ರನಿಂದ 25 ಲಕ್ಷ ರೂ. ಸುಲಿಗೆ ಮಾಡಿರುವ ಘಟನೆ ಬ್ಯಾಟರಾಯನಪುರದಲ್ಲಿ ನಡೆದಿದೆ.
ಉದ್ಯಮಿ ರವಿ ಅವರ ಪುತ್ರ ಸೂರಜ್ ಗೆ ಪಿಸ್ತೂಲ್ ತೋರಿಸಿ ಬೆದರಿಸಿ ಹಲ್ಲೆ ನಡೆಸಿ ಸುಲಿಗೆ ಮಾಡಿದ ಮಹಿಳೆ ಪುಷ್ಪಾ ಮತ್ತಾಕೆಯ ಗ್ಯಾಂಗ್ ನಲ್ಲಿದ್ದ ಅಯ್ಯಪ್ಪ ಅಲಿಯಾಸ್ ಅರ್ಜುನ್, ರಾಕೇಶ್ ಹಾಗು ಸಂತೋಷ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಸರ್ಕಾರದ ಟೆಂಡರ್ ಕೊಡಿಸುವುದಾಗಿ ಕರೆಸಿಕೊಂಡು ಆರೋಪಿ ಪುಷ್ಪಾ, ಬಂಧಿತ ಮೂವರ ಜೊತೆ ಸೇರಿ ಉದ್ಯಮಿ ಪುತ್ರನನ್ನು ಟ್ರಾಪ್ ಮಾಡಿದ್ದಾಳೆ.
ಮಹಿಳೆ ಸೇರಿ ನಾಲ್ವರಿಂದ ಪಿಸ್ತೂಲ್ ತೋರಿಸಿ ಉದ್ಯಮಿ ಪುತ್ರ ಸೂರಜ್ ನಿಗೆ ಬ್ಲಾಕ್ ಮೇಲ್ ಮಾಡಿ ಅಪಹರಿಸಲಾಗಿದೆ.
4 ಕೋಟಿಗೆ ಡಿಮ್ಯಾಂಡ್:
ಸರ್ಕಾರದ ಟೆಂಡರ್ ಕೊಡಿಸುವೆ ಎಂದು ನಾಲ್ಕೈದು ಬಾರಿ ಸೂರಜ್ ನನ್ನು ಆರೋಪಿ ಪುಷ್ಪಾ ಭೇಟಿಯಾಗಿದ್ದು ಮಾತುಕತೆ ವೇಳೆ ಆಕೆ ಮತ್ತೊಬ್ಬ ಆರೋಪಿ ಸಂತೋಷ್ ನನ್ನು ಭೇಟಿ ಮಾಡಿಸಿದ್ದಳು. ಸಂತೋಷ್ ಐಎಎಸ್ ಅಧಿಕಾರಿಯ ಅಪ್ತಸಹಾಯಕ ಎಂದಿದ್ದಳು. ಬಳಿಕ ಟೆಂಡರ್ ಕೊಡಿಸಲಿದ್ದೇವೆ ಎಂದು ಹೇಳಿ ಮಾತನಾಡುವ ವೇಳೆ ಬಂಧಿತ ಇನ್ನಿಬ್ಬರೂ ನುಗ್ಗಿದ್ದು, 4 ಕೋಟಿ ಹಣ ಕೊಡದಿದ್ದರೆ ಬಿಡೊದಿಲ್ಲ ಎಂದು ಡಿಮ್ಯಾಂಡ್ ಮಾಡಿದ್ದಾರೆ.
ನನ್ನ ಬಳಿ ಅಷ್ಟು ಹಣವಿಲ್ಲ, ಮನೆ ಮಾರಿದರೂ ಅಷ್ಟು ಹಣ ಸಿಗಲ್ಲ, ಬಿಟ್ಟು ಬಿಡಿ ಎಂದು ಸೂರಜ್ ಕೇಳಿಕೊಂಡಿದ್ದಾನೆ. ನಂತರ ಸೂರಜ್ ತನ್ನ ಸ್ನೇಹಿತ ಗುರುಮೂರ್ತಿಗೆ ಹೇಳಿ ಐದು ಗಂಟೆಯ ವೇಳೆ 25 ಲಕ್ಷ ತರುವಂತೆ ಹೇಳಿದ್ದಾನೆ. ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಬಳಿ 25 ಲಕ್ಷ ಹಣ ತಂದಿದ್ದ ಗುರುಮೂರ್ತಿ, ಸೂರಜ್ ಇಲ್ಲದ ಕಾರಣ ಪುಷ್ಪಾಳ ಕಡೆಯವರಿಗೆ ಹಣ ನೀಡದೆ ವಾಪಾಸಾಗಿದ್ದಾನೆ.
ರೇಪ್ ಬೆದರಿಕೆ:
ಆದರೆ ಈ ವೇಳೆ ಸೂರಜ್ ನನ್ನು ತನ್ನ ಮನೆಗೆ ಕರೆದೊಯ್ದಿದ್ದ ಪುಷ್ಟ, ಹಣ ಕೊಡಬೇಕು ಇಲ್ಲದಿದ್ದರೆ ನನ್ನ ಮೇಲೆ ಅತ್ಯಾಚಾರ ನಡೆಸಿದ್ದೀಯಾ ಎಂದು ಹೇಳಿ ಪ್ರಕರಣ ದಾಖಲಿಸುವೆ ಎಂದು ಬೆದರಿಕೆ ಹಾಕಲಾಗಿದೆ. ಈ ವೇಳೆ ಮತ್ತೆ ಗುರುಮೂರ್ತಿಯನ್ನು ಆಕೆಯ ಮನೆಗೆ ಕರೆಸಿಕೊಂಡು ಹಣ ನೀಡಲಾಗಿತ್ತು. 25 ಲಕ್ಷ ಹಣ ಪುಷ್ಪಳಿಗೆ ನೀಡಿದ ಗುರುಮೂರ್ತಿ ಹೊರಟು ಹೊಗಿದ್ದ. ನಂತರ ರಾತ್ರಿ 9 ಗಂಟೆಗೆ ಸೂರಜ್ ಬಿಟ್ಟು ಕಳುಹಿಸಲಾಗಿತ್ತು. ಹೊರಗೆ ಹೇಳಿದರೆ ಅತ್ಯಾಚಾರ ಪ್ರಕರಣ ದಾಖಲಿಸಿ ನಿಮ್ಮ ಇಡೀ ಕುಟುಂಬವನ್ನ ಹತ್ಯೆ ಮಾಡುತ್ತೆನೆಂದು ಮಹಿಳೆ ಬೆದರಿಕೆ ಹಾಕಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
Previous Articleಮಾನಸಿಕ ಅಸ್ವಸ್ಥನ ಮೇಲೆ ಹಲ್ಲೆ
Next Article ಗುತ್ತಿಗೆ ಬಿಲ್ ಪಾವತಿಗೆ ಶೇ.40 ಕಮೀಷನ್ ಕಡ್ಡಾಯ