ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಮ್ಮೆ Businessಕ್ಕೆ ಧರ್ಮ ರಾಜಕಾರಣ ಅಂಟಿಕೊಂಡಿದೆ.ಈ ಹಿಂದೆ ಕೆಲ ದಿನಗಳ ಕಾಲ ರಾಜ್ಯದ ಹಲವೆಡೆ ಸದ್ದು ಮಾಡಿ ತಣ್ಣಗಾಗಿದ್ದ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಹಿಂದುಪರ ಸಂಘಟನೆಗಳು ರಾಜ್ಯಾದ್ಯಂತ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಅಭಿಯಾನ ಆರಂಭಿಸಿವೆ.ನರಕ ಚತುರ್ದಶಿಯಂದು ಕೆಲವರು ಮಾಂಸದೂಟದ ಸಂಪ್ರದಾಯ ಆಚರಿಸುತ್ತಿದ್ದು ಇವರನ್ನು ಗುರಿಯಾಗಿಸಿ ಹಲಾಲ್ ಬಹಿಷ್ಕಾರದ ಕರೆ ನೀಡಲಾಗಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಹಿಂದೂಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾರತದಲ್ಲಿ ತಯಾರಿ ಆಗುವ ಎಲ್ಲಾ ವಸ್ತುಗಳಿಗೆ ಹಲಾಲ್ ಸರ್ಟಿಫಿಕೇಟ್ ಹಾಕಲು ಪ್ರಾರಂಭ ಮಾಡಿದ್ದಾರೆ. ಇದು ನಮ್ಮ ಉದ್ಯೋಗವನ್ನು ಕಸಿದು, ಮುಸ್ಲಿಮರಿಗೆ ಉದ್ಯೋಗ ಹಂಚಿಕೆಯಾಗುತ್ತಿದೆ. ಅವರು ಅವರ ದೇವರಿಗೆ ಅರ್ಪಿಸಿದನ್ನು ನಾವು ಯಾಕೆ ನಮ್ಮ ದೇವರಿಗೆ ಕೊಡಬೇಕು. ಹಲಾಲ್ ಪ್ರಾಡಕ್ಟ್ ತೆಗೆದುಕೊಳ್ಳುವುದಿಲ್ಲ ಎಂದು ಎಲ್ಲರೂ ತೀರ್ಮಾನ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಹಲಾಲ್ ಎನ್ನುವುದು ಬರೀ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ತಮಿಳುನಾಡಿನಲ್ಲಿ ಹಪ್ಪಳದ ಮೇಲೆ ಹಲಾಲ್ ಮಾರ್ಕ್ ಇದೆ. ಈ ಬಗ್ಗೆ ವಿಸ್ತಾರವಾದ ಹೋರಾಟ ಆಗಬೇಕು. ಹಲಾಲ್ ಮಾರ್ಕ್ ಕಂಪನಿ ಭಾರತದ ಎಕನಾಮಿಯನ್ನು ನುಂಗಿಹಾಕುತ್ತಿದೆ. ಭಾರತೀಯ ಉದ್ಯೋಗವನ್ನು ಕಸಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಇದರ ಬೆನ್ನಲ್ಲೇ ಹಲವು ಹಿಂದೂ ಪರ ಸಂಘಟನೆಗಳು ಹಲಾಲ್ ಬಹಿಷ್ಕಾರದ ಕರೆ ನೀಡಿದ್ದು,ಇದಕ್ಕೆ ಆಂದೋಲನ ರೂಪ ನೀಡುವಂತೆ ಮನವಿ ಮಾಡಿವೆ.ಜೊತೆಗೆ ಮುಸ್ಲಿಂ ವ್ಯಾಪಾರಿಗಳಿಂದ ಹಣ್ಣು, ಹೂವು,ಸಿಹಿ ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸದಂತೆ ಮನವಿ ಮಾಡಲಾಗುತ್ತಿದೆ.
ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಮಹಾ ಸಭೆ ನಡೆಸಿರುವ ಹಿಂದೂ ಸಂಘಟನೆಗಳು ಪ್ರತಿ ಜಿಲ್ಲೆಗಳಲ್ಲೂ ಅಭಿಯಾನ ನಡೆಸಲು ಮುಂದಾಗಿವೆ.
ರಾಜಧಾನಿ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಹುಬ್ಬಳ್ಳಿ-ಧಾರಾವಾಡ, ಶಿವಮೊಗ್ಗ, ದಾವಣಗೆರೆ, ತುಮಕೂರು, ಮೈಸೂರು, ರಾಮನಗರ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಹಿಂದೂಪರ ಸಂಘಟನೆಗಳು ಸದ್ದಿಲ್ಲದೆ ಈ ಅಭಿಯಾನ ಆರಂಭಿಸಿವೆ.
Previous Articleಈ ಬಾರಿ ಕಡ್ಡಾಯವಾಗಿ ಹಸಿರು ಪಟಾಕಿ ಮಾತ್ರ
Next Article ಅಪಘಾತ ತಡೆಗಟ್ಟಲು Humps ಬೇಕಂತೆ