ಬೆಂಗಳೂರು, ಅ. 25-ಹಿಜಾಬ್ ನಿಷೇಧಿಸಿ ತೀರ್ಪು ನೀಡಿದ್ದ ಹೈಕೋರ್ಟ್ ನ ತ್ರಿಸದಸ್ಯ ಪೀಠದಲ್ಲಿದ್ದ ನ್ಯಾಯಾಧೀಶರಿಗೆ ಹತ್ಯೆ ಬೆದರಿಕೆ ಹಾಕಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳಿಗೆ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ರಹಮತುಲ್ಲಾ ಮತ್ತು ಜಮಾಲ್ ಅಹಮದ್ ಉಸ್ಮಾನಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಪೀಠ ಜಾಮೀನು ನೀಡಿತು.
ಇಬ್ಬರು ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂ ಬಾಂಡ್ ಇಬ್ಬರ ಭದ್ರತೆ ನೀಡಬೇಕು. ವಿಚಾರಣೆಯ ಎಲ್ಲ ದಿನಗಳಂದು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು, ಸಾಕ್ಷಿ ನಾಶಮಾಡಬಾರದು ಎಂದು ತಾಕೀತು ಮಾಡಿ, ಶರತ್ತು ವಿಧಿಸಿ ಜಾಮೀನು ನೀಡಿದ್ದಾರೆ.
ಮುಸ್ಲಿಮ್ ವಿದ್ಯಾರ್ಥಿನಿಯರು ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಮಾರ್ಚ್ 15ರಂದು ತೀರ್ಪು ಪ್ರಕಟಿಸಿತ್ತು.
Previous Articleಶಿವಮೊಗ್ಗದಲ್ಲಿಇದೇನು ಹೀಗಾಗುತ್ತಿದೆ?
Next Article ಖಗೋಳ ಕೌತುಕ ಕಣ್ತುಂಬಿಕೊಂಡ ಜನ..!