Archives
    • March 2026
    • February 2026
    • January 2026
    • December 2025
    • November 2025
    • October 2025
    • September 2025
    • August 2025
    • July 2025
    • June 2025
    • May 2025
    • April 2025
    • March 2025
    • February 2025
    • January 2025
    • December 2024
    • November 2024
    • October 2024
    • September 2024
    • August 2024
    • July 2024
    • June 2024
    • May 2024
    • April 2024
    • March 2024
    • February 2024
    • January 2024
    • December 2023
    • November 2023
    • October 2023
    • September 2023
    • August 2023
    • July 2023
    • June 2023
    • May 2023
    • April 2023
    • March 2023
    • February 2023
    • January 2023
    • December 2022
    • November 2022
    • October 2022
    • September 2022
    • August 2022
    • July 2022
    • June 2022
    • May 2022
    • April 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency
    ರಾಜಕೀಯ

    ಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency

    vartha chakraBy vartha chakraMay 6, 2023Updated:May 8, 20231 Comment3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ದಾವಣಗೆರೆ – ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಹೆಚ್ ಪಟೇಲ್ ಅವರ ಸ್ವ ಕ್ಷೇತ್ರ ಚೆನ್ನಗಿರಿ (Channagiri Assembly Constituency) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದೆ ಅದಕ್ಕೆ ಪ್ರಮುಖ ಕಾರಣ ಲಂಚ ಆರೋಪದ ಸುಳಿಯಲ್ಲಿ ಸಿಲುಕಿದ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜೈಲು ಪಾಲಾದರೆ, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ರಂಪ ರಾದ್ದಂತವಾಯಿತು.

    ಇದರ ಪರಿಣಾಮವಾಗಿ ಕ್ಷೇತ್ರದ ಸ್ಪರ್ಧಾ ಕಣವೇ ವಿಚಿತ್ರ ಸ್ವರೂಪ ಪಡೆದುಕೊಂಡಿತು. ಸಾಮಾನ್ಯವಾಗಿ ಯಾವುದೇ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನ ಗಮನಿಸಿದರೆ ಹಾಲಿ ಶಾಸಕರ ವಿರುದ್ಧ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತವರು ಎದುರಾಳಿಯಾಗುತ್ತಾರೆ. ಆದರೆ ಚೆನ್ನಗಿರಿ ವಿಧಾನಸಭಾ ಕ್ಷೇತ್ರದ ಈ ಸಲದ ಕಣದಲ್ಲಿ ಹಾಲಿ, ಮಾಜಿ ಶಾಸಕರಾರೂ ಇಲ್ಲದೇ ಇರುವುದು ವಿಶೇಷ. ಪ್ರತೀ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡುವ ಕ್ಷೇತ್ರದಲ್ಲಿ ಈ ಬಾರಿ ಆಖಾಡದಲ್ಲಿರುವ ಪ್ರಮುಖರೆಲ್ಲ ಮೊದಲ ಬಾರಿಗೆ ಶಾಸಕರಾಗುವ ಹಂಬಲದಲ್ಲಿರುವುದು ಗಮನಾರ್ಹವಾಗಿದೆ. (Channagiri Assembly Constituency)

    ಕಾಂಗ್ರೆಸ್‌ನಿಂದ ಕಿಸಾನ್‌ ಘಟಕದ ಜಿಲ್ಲಾ ಅಧ್ಯಕ್ಷ ಬಸವರಾಜ್‌ ವಿ. ಶಿವಗಂಗಾ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿ ದ್ದಾರೆ. 2013ರಲ್ಲಿ ಸ್ಪರ್ಧಿಸಿ ಸೋತಿದ್ದ ತುಮ್ಕೋಸ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌ ಬಿಜೆಪಿಯಿಂದ ಮತ್ತೂಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ.
    ರಾಜ್ಯ ಕಬ್ಬು ಬೆಳೆ ಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್‌ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಕೊನೆಯ ಗಳಿಗೆಯಲ್ಲಿ ಜೆಡಿಎಸ್‌ ಹುರಿಯಾಳಾಗಿ ಕಣಕ್ಕಿಳಿದಿದ್ದಾರೆ.
    ಇದರ ನಡುವೆ ಬಿಜೆಪಿ ನಾಯಕರ ಸಂಧಾನ ಮತ್ತು ಎಚ್ಚರಿಕೆಯ ನುಡಿಗಳಿಗೆ ಸೊಪ್ಪು ಹಾಕದೆ ಮಾಡಾಳು ಮಲ್ಲಿಕಾರ್ಜುನ್‌ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಹೀಗಾಗಿ ಟಿಕೆಟ್ ವಂಚಿತ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅನಿವಾರ್ಯವಾಗಿ ಪಕ್ಷೇತರರಾಗಿ ನಿಂತಿರುವ ತಮ್ಮ ಮಗನ ಪರವಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. (Channagiri Assembly Constituency)

    ಈ ಹಿನ್ನಲೆಯಲ್ಲಿ ಇಡೀ ಕ್ಷೇತ್ರವನ್ನು ಒಂದು ಸುತ್ತು ಹಾಕಿ ಬಂದರೆ ಚತುಷ್ಕೋನ ಸ್ಪರ್ಧೆ ಇರುವಂತೆ ಕಂಡುಬರುತ್ತದೆ. ಆದರೆ ಹಲವಾರು ಅಂಶಗಳನ್ನು ಲೆಕ್ಕಾಚಾರ ಹಾಕಿ ನೋಡಿದಾಗ ಸದ್ಯಕ್ಕೆಪಕ್ಷೇತರ ಅಭ್ಯರ್ಥಿ ಎಲ್ಲರಿಗಿಂತಲೂ ಮುಂದಿದ್ದಾರೆ ಎನ್ನಬಹುದು. ಆದರೆ ಕೊನೆಯ ಕ್ಷಣದಲ್ಲಿ ಲೆಕ್ಕಾಚಾರಗಳು ಏರುಪೇರಾಗಲಿವೆ.
    ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಿಬ್ಬರೂ ಸಾದರ ಲಿಂಗಾಯತ ಸಮಾಜದವರೇ ಆಗಿದ್ದಾರೆ. ಬಂಡಾಯ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ್‌ ಸಹ ಅದೇ ಸಮುದಾಯದವರು. ಜೆಡಿಎಸ್‌ನ ತೇಜಸ್ವಿ ಪಟೇಲ್‌ ಪಂಚಮಸಾಲಿ ಸಮಾಜದವರು. ಕ್ಷೇತ್ರಾದ್ಯಂತ ವೀರಶೈವ ಸಮುದಾಯದ ಮತದಾರರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಮುಖ್ಯವಾಗಿ ಸಾದರ ಲಿಂಗಾಯತ ಸಮಾಜದವರ ಒಲವು ಗಳಿಸಿದವರು ಗೆಲ್ಲುತ್ತಾರೆ ಎಂಬ ಮಾತಿದೆ. ಕ್ಷೇತ್ರದಲ್ಲಿ ನಾಯಕರು, ಕುರುಬರು, ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾಕರು ಗಣನೀಯ ಸಂಖ್ಯೆಯಲ್ಲಿದ್ದು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. (Channagiri Assembly Constituency)

    Channagiri Assembly constituency

    ಕಾಂಗ್ರೆಸ್‌ನ ಬಸವರಾಜ್‌ ವಿ. ಶಿವಗಂಗಾ ಅವರಿಗೆ ಕೊರೊನಾ ವೇಳೆ ಮಾಡಿದ ಸಮಾಜಸೇವೆ, ಯುವ ಉತ್ಸಾಹಿ ಎನ್ನುವ ಅಂಶ ಸಾಕಷ್ಟು ಲಾಭ ತಂದು ಕೊಡುತ್ತಿದೆಯಾದರೂ ಕ್ಷೇತ್ರಕ್ಕೆ ಸಂಪೂರ್ಣ ಹೊಸಬರು ಹೊಸ ಸಂಪರ್ಕ ಹಾಗೂ ಟಿಕೆಟ್‌ ವಂಚಿತ ಸ್ವಪಕ್ಷೀಯರ ಅಸಮಾಧಾನ ಅದರಲ್ಲೂ ಪ್ರಮುಖವಾಗಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅವರ ಬೆಂಬಲಿಗರು ಅಷ್ಟಾಗಿ ಇವರನ್ನು ಇಷ್ಟಪಡುತ್ತಿಲ್ಲ ಎನ್ನುವುದು ದೊಡ್ಡ ಹಿನ್ನಡೆ ಎಂದು ಹೇಳಬಹುದು
    ಬಿಜೆಪಿಯ ಎಚ್‌.ಎಸ್‌. ಶಿವಕುಮಾರ್‌ 2013ರಲ್ಲಿ ಸೋತ ಅನುಕಂಪದ ಲಾಭದ ಲೆಕ್ಕಾಚಾರದಲ್ಲಿದ್ದಾರೆ ಜೊತೆಗೆ ತಾವು ಸ್ಥಳೀಯರು ಹಾಗೂ ತುಮ್ಕೋಸ್ ಅಧ್ಯಕ್ಷರಾಗಿದ್ದು ರೈತರೊಂದಿಗೆ ಹೊಂದಿದ ಒಡನಾಟ ಅನುಕೂಲಕರ ಎಂದರೂ ಈ ಹಿಂದಿನ ಬಿಜೆಪಿ ಶಾಸಕ ಮಾಡಾಳು ಅವರ ಲಂಚ ಪ್ರಕರಣ ಹಾಗೂ ಅವರ ಕುಟುಂಬ ಸದಸ್ಯರು ಕಣದಲ್ಲಿ ಇರುವುದು ಇವರಿಗೆ ದೊಡ್ಡ ರೀತಿಯಲ್ಲಿ ಹಿನ್ನಡೆ ಆಗಬಹುದು ಎನ್ನಲಾಗಿದೆ. (Channagiri Assembly Constituency)

    ಜೆಡಿಎಸ್‌ ಅಭ್ಯರ್ಥಿ ತೇಜಸ್ವಿ ಪಟೇಲ್‌ಗೆ ಜೆ.ಎಚ್‌. ಪಟೇಲರ ಕುಟುಂಬದ ಹಿನ್ನೆಲೆ, ರೈತಪರ ಹೋರಾಟ ಸಾಮಾಜಿಕ ಕಳಕಳಿ ಇವರ ಪರವಾಗಿ ಕೆಲಸ ಮಾಡುತ್ತಿದೆಯಾದರೂ ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಸೇರಿದ್ದು ಇವರ ಆಪ್ತರಿಗೆ ಸರಿ ಕಾಣುತ್ತಿಲ್ಲ ಹೀಗಾಗಿ ಅವರೆಲ್ಲ ಇವರ ಪರವಾಗಿ ಮುಕ್ತವಾಗಿ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ.
    ಇನ್ನು ಪಕ್ಷೇತರರಾಗಿ ಕಣಕ್ಕಿಳಿದಿರುವ ಮಾಡಾಳು ಮಲ್ಲಿಕಾರ್ಜುನ್‌ಗೆ ತಂದೆ ಪ್ರಭಾವ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ .ಆದರೆ ಲಂಚ ಪ್ರಕರಣ ದೊಡ್ಡ ರೀತಿಯಲ್ಲಿ ಚರ್ಚೆಯಾಗುತ್ತಿದೆ ಇದಕ್ಕೆ ಅವರು ಬೇರೆ ರೀತಿಯಾದಂತ ಸಮಜಾಯಿಷಿ ಕೊಡುತ್ತಿದ್ದಾರೆ ಲಂಚ ಪ್ರಕರಣ ತಮ್ಮ ವಿರುದ್ಧ ಮಾಡಲಾದ ಪಿತೂರಿ ಇದಕ್ಕಾಗಿ ನಾವು ಬಲಿಪಶು ಗಳಾಗಿದ್ದೇವೆ ಎಂದು ಮತದಾರರ ಮುಂದೆ ಅಳಲು ತೋಡಿಕೊಳ್ಳುತ್ತಾ ಸಾಗುತ್ತಿದ್ದಾರೆ ಹೀಗಾಗಿ ಪ್ರಜ್ಞಾವಂತ ಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.. (Channagiri Assembly Constituency)

    Also read. 

    ಸುರ್ಜೇವಾಲ ಕಿತಾಪತಿ ಕಾಂಗ್ರೆಸ್ಸಿಗೆ ಫಜೀತಿ! Surjewala

    Verbattle
    Verbattle
    Verbattle
    art Congress m Varthachakra ಕಾಂಗ್ರೆಸ್ Election ಲಂಚ
    Share. Facebook Twitter Pinterest LinkedIn Tumblr Email WhatsApp
    Previous Articleಸುರ್ಜೇವಾಲ ಕಿತಾಪತಿ ಕಾಂಗ್ರೆಸ್ಸಿಗೆ ಫಜೀತಿ! Surjewala
    Next Article ಚಿನ್ನದ ವ್ಯಾಪಾರಿಗೆ ಹಾಕಿದರು ಮಕ್ಮಲ್ ಟೋಪಿ
    vartha chakra
    • Website

    Related Posts

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    March 29, 2026

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    March 27, 2026

    ಹೈಕಮಾಂಡ್ ಗೆ ವಿಧಾನಪರಿಷತ್ ಸದಸ್ಯರ ಮೊರೆ.

    March 26, 2026

    1 Comment

    1. Hsvpbp on April 2, 2026 4:16 pm

      The table flips when you walk in – https://gpdifluca.com/betano-casino-review-2026/ , Where small screens birth massive legends .

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    ನೇಪಾಳ ಮಾಜಿ ಪ್ರಧಾನಿ ಬಂಧನ

    ಶಾಲೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ಥಳೀಯರು!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jeffreyessen on ರಾಮೋತ್ಸವಕ್ಕೆ ಸಜ್ಜಾದ ಮುಸ್ಲಿಂ ಶಾಸಕ | Ramotsava
    • Jfrktn on BJP ಸೇರಿದ ರೋಷನ್ ಬೇಗ್! #bjp #karnataka #congressparty #elections
    • JamesMes on ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ
    Latest Kannada News

    ಅರವಿಂದ್ ಬೆಲ್ಲದ್ ಆರೋಪಕ್ಕೆ ಎಂ ಬಿ ಪಾಟೀಲ್ ತಿರುಗೇಟು

    March 29, 2026

    ಅಮೆರಿಕಾ ಡಾಲರ್ ಮೇಲೆ ಟ್ರಂಪ್ ಸಹಿ

    March 29, 2026

    ನೇಪಾಳ ಮಾಜಿ ಪ್ರಧಾನಿ ಬಂಧನ

    March 28, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.