ಬೆಂಗಳೂರು,ಜು.28 – ನಗರ ಸೇರಿದಂತೆ ರಾಜ್ಯಾದ್ಯಂತ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರ ಬಂಧನ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಅಧಿಕಾರಿಗಳು ಶಂಕಿತ ಉಗ್ರರರಿಗೆ ಗನ್ ಸರಬರಾಜು ಮಾಡಿದ ಖದೀಮನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಶಂಕಿತ ಉಗ್ರ ಜುನೈದ್ ಅಣತಿಯಂತೆ ರಬ್ಬಾನಿಗೆ ಅಪರಿಚಿತನೊಬ್ಬ ಗನ್ ನೀಡಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಸಲ್ಮಾನ್ ಎನ್ನುವ ಶಂಕಿತನಿಂದ ಗನ್ ಸರಬರಾಜು ಮಾಡಲಾಗಿದ್ದು ಹಿಂದೆ ಸಲ್ಮಾನ್ ಫೋಕ್ಸೊ ಕೇಸಲ್ಲಿ ಜೈಲು ಸೇರಿದ್ದನು. ನೇಪಾಳ ಮೂಲಕ ಈತ ಕೂಡ ದೇಶ ಬಿಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸಲ್ಮಾನ್ ಪಾಸ್‌ಪೋರ್ಟ್, ಫೋನ್ ಕರೆಗಳ ವಿವರ ಪಡೆದ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.ನಾಸಿರ್ ಜೈಲಿನಲ್ಲಿ ಫೋನ್ ಬಳಕೆ ಮಾಡಿದ ಬಗ್ಗೆ ಸುಳಿವು ಜೈಲಿನಲ್ಲಿ ನಾಸೀರ್ ಫೋನ್ ಬಳಕೆ ಮಾಡಿದ ಬಗ್ಗೆ ಸುಳಿವು ಸಿಕ್ಕಿದೆ.
ಆರೋಪಿ ನಾಸೀರ್‌ನನ್ನ ವಶಕ್ಕೆ ಪಡೆದು ಐಎಸ್ ಡಿಯಿಂದ ವಿಚಾರಣೆ ನಡೆಯುತ್ತಿದೆ. ನಿನ್ನೆ 3 ಗಂಟೆಗಳ ಕಾಲ ಜೈಲಿನಲ್ಲಿ ಉಗ್ರ ನಾಸೀರ್‌ನನ್ನು ವಿಚಾರಣೆ ಮಾಡಲಾಗಿದೆ. ಐಎಸ್ ಡಿ ತಂಡದಿಂದ ನಾಸೀರ್ ಬಳಸಿದ್ದ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ನಾಸೀರ್ ಜೈಲಿನಲ್ಲಿ ನಿತ್ಯ ಸಂಭಾಷಣೆ ನಡೆಸುತ್ತಿದ್ದು ಆತ ಅಕ್ರಮವಾಗಿ ಜೈಲಿನಲ್ಲಿದ್ದುಕೊಂಡು ಫೋನ್ ಬಳಸಿರುವುದು ಪತ್ತೆಯಾಗಿದೆ. ಈತನ ಅಕ್ರಮಕ್ಕೆ ಹಣ ಪಡೆದುಕೊಂಡು ಜೈಲಿನ ಹಿರಿಯ ಅಧಿಕಾರಿಗಳು ಸಾಥ್ ನೀಡಿರುವುದು ಕಂಡುಬಂದಿದ್ದು ಇದರಿಂದ ನಾಸೀರ್‌ಗೆ ಸಹಾಯ ಮಾಡಿರುವ ಅಧಿಕಾರಿಗಳಿಗೆ ಇದೀಗ ಸಂಕಷ್ಟ ಎದುರಾಗಿದೆ.
ಐಎಸ್ ಡಿಯಿಂದ ಎಲ್ಲ ಅಧಿಕಾರಿಗಳ ಹೆಸರು ಲಿಸ್ಟ್ ರೆಡಿಯಾಗಿದೆ. ಸದ್ಯದಲ್ಲೇ ಅಷ್ಟೂ ಮಂದಿಗೆ ನೊಟೀಸ್ ನೀಡಿ ವಿಚಾರಣೆಯನ್ನ ಆರಂಭಿಸಲಿದೆ. ಹಿರಿಯ ಅಧಿಕಾರಿಗಳು, ಜೈಲರ್ಸ್ ಮತ್ತು ಸಿಬ್ಬಂದಿಗಳ ಪಟ್ಟಿ ರೆಡಿಯಾಗಿದ್ದು ಅಷ್ಟೂ ಮಂದಿ ಸೇರಿ ನಾಸೀರ್ ನಿಂದ ಲಕ್ಷ ಲಕ್ಷ ಹಣ ಪೀಕಿದ್ದಾರೆ. ಈಗ ಹಣ ಪಡೆದಕೊಂಡ ಅಧಿಕಾರಿಗಳ ಬಂಡವಾಳ ಬಯಲಾಗಿದೆ