Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸುತ್ತಿಕೊಳ್ಳುತ್ತಾ ಕಮೀಷನ್ ಉರುಳು | Lakshmi Hebbalkar
    ಸುದ್ದಿ

    ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸುತ್ತಿಕೊಳ್ಳುತ್ತಾ ಕಮೀಷನ್ ಉರುಳು | Lakshmi Hebbalkar

    vartha chakraBy vartha chakraNovember 18, 20231 Comment2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು – ರಾಜ್ಯ ಸರ್ಕಾರದ ಪ್ರಭಾವಿ ಮಹಿಳಾ ಮಂತ್ರಿ ಲಕ್ಷ್ಮಿ ‌ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಭ್ರಷ್ಟಾಚಾರ ಆರೋಪದ ದೂರೊಂದು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದೆ.
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ಪೂರೈಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರಿಗೆ 600 ಕೋಟಿ ರೂ.ಗಿಂತಲೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರೋಪಿಸಿ ವಕೀಲ ನಟರಾಜ್ ಶರ್ಮಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ಸರಬರಾಜಿನಲ್ಲಿ ಅವ್ಯವಹಾರ ನಡೆದಿದೆ. ಅನರ್ಹಗೊಂಡಿರೋ ಸಹಕಾರ ಸಂಸ್ಥೆಗಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡುವ ಟೆಂಡರ್ ನೀಡಿದ್ದಾರೆ. ಬ್ಲಾಕ್ ಲೀಸ್ಟ್ ನಲ್ಲಿರುವ ಕ್ರಿಸ್ಟಿ ಫ್ರೈಡ್ ಗ್ರಾಮ್ ಕಂಪನಿ ಜೊತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇಲಾಖೆ ಅಧಿಕಾರಿಗಳು ಶಾಮೀಲಾಗಿ ಈ ಟೆಂಡರ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
    ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರದ ಗುಣಮಟ್ಟದ ಕುರಿತು ಹೈಕೋರ್ಟ್ ನೀಡಿದ್ದ ಆದೇಶ ಉಲ್ಲಂಘನೆ ಮಾಡಲಾಗಿದೆ. ಬ್ಲಾಕ್‌ ಲಿಸ್ಟ್‌ನಲ್ಲಿರುವ ಕಂಪನಿಗೆ ಆಹಾರ ಪೂರೈಕೆ ಮಾಡಲು ಟೆಂಡರ್ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

    ಇಲಾಖೆಯ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ.ಸಿ ಪ್ರಕಾಶ್ ಹಾಗೂ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಕ್ರಮವಾಗಿ ಟೆಂಡರ್ ನೀಡುವ ಮೂಲಕ ಕಂಪನಿಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಶೇ.10 ರಷ್ಟು ಕಮಿಷನ್ ಸಹ ಪಡೆದಿದ್ದಾರೆ ಎಂಬುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ.

    ಪೌಷ್ಟಿಕ ಆಹಾರ ಪೂರೈಸುವ ಸಂಸ್ಥೆ ಟೆಂಡರ್ ಪಡೆಯಲು ನೀಡಿರುವ ವಿಳಾಸದ ಕಂಪನಿಯೇ ಬೆಂಗಳೂರಿನಲ್ಲಿ ಇಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ವಿಚಾರವಾಗಿ ಸ್ಥಳಿಯ ಸಂಸ್ಥೆಗಳಿಗೆ ಟೆಂಡರ್ ನೀಡಬೇಕು ಎಂದು ಕೋರ್ಟ್ ಹೇಳಿದೆ. ಈ ನಿಯಮ ಕೂಡ ಉಲ್ಲಂಘನೆಯಾಗಿದೆ. 2011ರಲ್ಲಿ ಕ್ರಿಸ್ಟಿಫ್ರೈಡ್ ಕಂಪನಿಯಿಂದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿತ್ತು. ಆದ್ರೆ ಗುಣಮಟ್ಟ ಕಡಿಮೆಯಿದ್ದ ಕಾರಣ ಈ ಕಂಪನಿಯನ್ನು ಬ್ಲಾಕ್ ಲಿಸ್ಸ್‌ಗೆ ಸೇರಿಸಲಾಯಿತು. ಆದರೆ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕ್ರಿಸ್ಟಿ ಪ್ರೈಡ್ ಕಂಪನಿಗಳ ಅಧೀನದಲ್ಲಿ ಬರುವ ಮೂರು ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    Verbattle
    Verbattle
    Verbattle
    Lakshmi Hebbalkar m mi ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleಪೊಲೀಸ್ ‌ಸಬ್ ಇನ್ಸ್ ಪೆಕ್ಟರ್ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ | PSI Exam
    Next Article ರಾಜ್ಯದಲ್ಲಿರುವುದು ಶೇ.60‌ ಪರ್ಸೆಂಟ್ ಸರ್ಕಾರವಂತೆ | R Ashok
    vartha chakra
    • Website

    Related Posts

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    February 11, 2026

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    February 11, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Glennhof on ಜೈಲಿಗಾದರೂ ಹಾಕಿ, ಹೆಂಡತಿ ಮಾತ್ರ ಬೇಡ.
    • JeremyMit on ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • Glennhof on ರೆಸಾರ್ಟ್ ಮತ್ತು ಹೋಂ ಸ್ಟೇ ಗಳ ಭದ್ರತೆ ಹೆಚ್ಚಳ
    Latest Kannada News

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    February 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.