ಬೆಂಗಳೂರು,ಆ.14-
ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಂಚಾರಿ ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಹ ಆದರೆ ಅವುಗಳಾವುವೂ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ.
ಅದರಲ್ಲೂ ವಾರಾಂತ್ಯದ ದಿನಗಳು, ಸಾಲು ಸಾಲು ರಜೆಗಳು ಬರುವ ಸಮಯದಲ್ಲಂತೂ ಬೆಂಗಳೂರಿನಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ ಇದರಲ್ಲಿ ಮಳೆ ಬಂದರಂತೂ ಹೇಳುವುದೇ ಬೇಡ ಎಷ್ಟೇ ಪೊಲೀಸರನ್ನು ನಿಯೋಜಿಸಿ ಪರ್ಯಾಯ ಮಾರ್ಗಗಳನ್ನು ಹುಡುಕಿದರೂ ಕೂಡ ವಾಹನ ದಟ್ಟಣೆ ಕಡಿಮೆ ಮಾಡಲು ಹರಸಾಹಸ ಪಡಬೇಕಾಗಿದೆ.
ಹೀಗಾಗಿ ಇದೀಗ ಇಂತಹ ಸಮಸ್ಯೆಯನ್ನು ಪರಿಹರಿಸುವುದು ದೃಷ್ಟಿಯಿಂದ ಹೊಸದೊಂದು ಆಲೋಚನೆಗೆ ನಗರ ಪೊಲೀಸರು ಮುಂದಾಗಿದ್ದಾರೆ
ದೀರ್ಘ ವಾರಾಂತ್ಯ ಹಾಗೂ ಭಾರೀ ಮಳೆ ಮುನ್ಸೂಚನೆಯಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ತಮ್ಮ ಉದ್ಯೋಗಿಗಳಿಗೆ ಮನೆಯಲ್ಲಿಯೇ ಕೆಲಸ( ವರ್ಕ್ ಫ್ರಮ್ ಹೋಮ್) ನೀಡುವಂತೆ ಕೋರಿ ಔಟರ್ ರಿಂಗ್ ರೋಡ್ ಕಂಪನಿಗಳ ಒಕ್ಕೂಟಕ್ಕೆ ಜಂಟಿ ಪೊಲೀಸ್ ಆಯುಕ್ತ(ಸಂಚಾರ)ಎಂ.ಎನ್.ಅನುಚೇತ್ ಪತ್ರ ಬರೆದಿದ್ದಾರೆ.
ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ, 16ರಂದು ವರಮಹಾಲಕ್ಷ್ಮಿ ಹಬ್ಬ, 17 ಹಾಗೂ 18ರಂದು ವಾರಾಂತ್ಯ ಸೇರಿದಂತೆ ಸುದೀರ್ಘ ರಜೆ ಇರುವುದರಿಂದ ತಮ್ಮ ತಮ್ಮ ಊರುಗಳಿಗೆ ಹೋಗುವವರು ಇಂದಿನಿಂದಲೇ ಪ್ರಯಾಣ ಆರಂಭಿಸುವ ಸಾಧ್ಯತೆ ಇದೆ.
ಆದ್ದರಿಂದ ವರ್ಕ್ ಫ್ರಮ್ ಹೋಮ್ ನೀಡಿದರೆ, ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದಲ್ಲದೆ, ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.
ಜಂಟಿ ಆಯುಕ್ತರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಬಹುತೇಕ ಕಂಪನಿಗಳು ಇಂದು ತಮ್ಮ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಅವಕಾಶ ನೀಡಿವೆ ಎಂದು ತಿಳಿದು ಬಂದಿದೆ.
Previous Articleಮೋದಿ ಟೀಕಿಸಿದ್ದಕ್ಕೆ ಧರ್ಮದೇಟು.
Next Article ಕಾಂಗ್ರೆಸ್ ಸರ್ಕಾರದ ಬಗ್ಗೆ ಅಶೋಕ್ ಹೇಳಿದ್ದೇನು ಗೊತ್ತೆ..