Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸುಂದರಿ ಜಾಲಕ್ಕೆ ಬಲಿಯಾದ ಇರಾನ್.
    ಅಂತಾರಾಷ್ಟ್ರೀಯ

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    vartha chakraBy vartha chakraJune 24, 2025No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಈ ಸ್ಟೋರಿ ನೋಡಿ..ಇದು ಯಾವುದೇ ಜೇಮ್ಸ್ ಬಾಂಡ್ ಸಿನಿಮಾದ ಕತೆಯಂತೆ ಅನ್ನಿಸಿದರೂ ಅಚ್ಚರಿಯಲ್ಲ, ಆದರೆ ಇದು ಸತ್ಯ ಕತೆ.
    ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಘಟಿತ ದಾಳಿಯಿಂದ ಇರಾನ್ ತತ್ತರಗೊಂಡಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಡೆದಿರುವ ಈ ದಾಳಿ ತೈಲ ರಾಷ್ಟ್ರವನ್ನು ತತ್ತರಿಸಿರುವಂತೆ ಮಾಡಿದೆ. ಈ ದಾಳಿ ಇಷ್ಟೊಂದು ಸಂಘಟನಾತ್ಮಕವಾಗಿ ನಡೆದು ತೈಲ ರಾಷ್ಟ್ರದ ಬೆನ್ನೆಲುಬು ಮುರಿಯುವಂತೆ ಮಾಡಲು ಸಾಧ್ಯವಾಗಿದ್ದು ಮಹಿಳೆಯೊಬ್ಬಳ ಕಾರಣದಿಂದ ಎಂಬ ಸತ್ಯ ಇದೀಗ ಬೆಳಕಿಗೆ ಬಂದಿದೆ.
    ಆ ಮಹಿಳೆ ನಡೆಸಿದ ಅತ್ಯಂತ ವ್ಯವಸ್ಥಿತ ಗೂಢಚರ್ಯೆ ಮತ್ತು ಮಾಹಿತಿ ಸಂಗ್ರಹದ ಪರಿಣಾಮವಾಗಿ ದೈತ್ಯ ತೈಲ ರಾಷ್ಟ್ರ ಇರಾನ್ ಎಂದು ಅಪಾರ ಪ್ರಮಾಣದ ಸಾವು ನೋವು ಮಾತ್ರವಲ್ಲದೆ ದೊಡ್ಡ ಆರ್ಥಿಕ ನಷ್ಟವನ್ನು ಕೂಡ ಅನುಭವಿಸುವಂತಾಗಿದೆ.
    ಇಂತಹ ಒಂದು ದುರಂತಕ್ಕೆ ಕಾರಣವಾಗಿದ್ದು ಕ್ಯಾಥರಿನ್ ಪೆರೆಜ್ ಶಕ್ದಮ್ ಎಂಬ ಮಹಿಳೆ.
    ಈಕೆ ಮೂಲತಃ ಫ್ರಾನ್ಸ್ ನವಳು. ಈಕೆ ಫ್ರಾನ್ಸ್ ನ ಯಹೂದಿ ಕುಟುಂಬದವಳು. ಲಂಡನ್ ವಿವಿಯಲ್ಲಿ ಆರ್ಥಿಕ ಮತ್ತು ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ವೃತ್ತಿಯಲ್ಲಿ ಪತ್ರಕರ್ತೆ ಹಾಗೂ ರಾಜಕೀಯ ವಿಶ್ಲೇಷಣಕಾರಳಾಗಿ ಕೆಲಸ ಮಾಡುತ್ತಿದ್ದಳು.
    ನೋಡಲು ಅತ್ಯಂತ ಸುಂದರಿಯಿಗಿದ್ದ ಈಕೆ ತನ್ನ ಆಕರ್ಷಕ ಮಾತುಗಾರಿಕೆಯಿಂದ ಎಂತವರ ಗಮನವನ್ನು ಸೆಳೆಯುತ್ತಿದ್ದಳು ಈಕೆಯನ್ನು ಎರಡು ವರ್ಷದ ಹಿಂದೆ ಸಂಪರ್ಕಿಸಿದ ಇಸ್ರೇಲ್ ನ ಪರಿಣಿತರು ಆಕೆಗೆ ಗೂಢಚರ್ಯೆ ಕುರಿತಂತೆ ತರಬೇತಿಯನ್ನು ನೀಡಿದರು ಅರ್ಥ ಇಲ್ಲ ಅಪಾರ ಪ್ರಮಾಣದ ಹಣವನ್ನು ಕೂಡ ಕೊಟ್ಟರು.
    ಮೊಸಾದ್ ನಿಂದ ತರಬೇತಿ ಪಡೆದು ಪತ್ರಕರ್ತೆಯ ಸೋಗಿನಲ್ಲಿ ಇರಾನ್ ಪ್ರವೇಶಿಸಿದ ಈಕೆ ಮೊದಲಿಗೆ ಇಸ್ಲಾಂ ಧರ್ಮದ ಬಗ್ಗೆ ಅತಿಯಾದ ಆಸಕ್ತಿ ತೋರಿಸಿದಳು.
    ಇರಾನ್ ಮಹಿಳೆಯರ ಮೂಲಕ ಇಸ್ಲಾಂ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಲೇ ಶಿಯಾ ಧರ್ಮಕ್ಕೆ ಮತಾಂತರವಾದಳು. ಈ ಮೂಲಕ ಎಲ್ಲರ ವಿಶ್ವಾಸ ಗಳಿಸಿದ ಈಕೆ, ಇರಾನ್ ನ ಕೆಲವು ಪ್ರಭಾವಿ ಕುಟುಂಬಗಳಿಗೆ ಅತ್ಯಂತ ಆಪ್ತರಾದರು ಆ ಬಳಿಕ ಇರಾನ್ ನ ಉನ್ನತಾಧಿಕಾರಿಗಳ ಪರಿಚಯ ಮಾಡಿಕೊಂಡಳು.
    ಪತ್ರಕರ್ತೆ, ಬರಹಗಾರ್ತಿಯಾಗಿ ಇರಾನ್ ಪರಮೋಚ್ಛ ನಾಯಕ ಖಮೈನಿ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವಂತೆ ಅನೇಕ ಲೇಖನ ಮತ್ತು ವರದಿಗಳನ್ನು ಬರೆದು ಎಲ್ಲರನ್ನೂ ನಂಬಿಸಿದ್ದಳು.
    ಇದೇ ಕಾರಣಕ್ಕೆ ಈಕೆ ಸೇನೆಯ ಉನ್ನತ ಕಮಾಂಡರ್ ಗಳನ್ನು, ಅಧಿಕಾರಿಗಳನ್ನು ಸುಲಭವಾಗಿ ಭೇಟಿ ಮಾಡಲು ಸಾಧ್ಯವಾಯಿತು. ಸಾಮಾನ್ಯರು ಪ್ರವೇಶಿಸದ ಸ್ಥಳಗಳಿಗೂ ಈಕೆಗೆ ಹೋಗಲು ಸಾಧ್ಯವಾಗುತ್ತಿತ್ತು.
    ಈ ರೀತಿ ಅತ್ಯಂತ ಪ್ರಮುಖ ಸ್ಥಳಗಳಿಗೆ ತೆರಳುತ್ತಿದ್ದ ಈಕೆ ಅಲ್ಲಿ ನೆಲೆಸಿದ್ದವರು ಅಲ್ಲಿನ ಭದ್ರತೆ ಇತ್ಯಾದಿ ಹಲವಾರು ವಿಷಯಗಳ ಬಗ್ಗೆ ಯಾರಿಗೂ ತಿಳಿಯದಂತೆ ಫೋಟೋ ಮತ್ತು ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಇಸ್ರೇಲ್ ಗೆ ರವಾನಿಸುತ್ತಿದ್ದಳು. ಈ ಮೂಲಕ ಇರಾನ್ ಸೇನೆಯ ಹಲವಾರು ಮಾಹಿತಿಗಳು ಇಸ್ರೇಲ್ ನ ಪಾಲಾದವು.
    ಇದರಿಂದಾಗಿ ಸೇನೆಯ ಉನ್ನತ ಕಮಾಂಡರ್ ಗಳನ್ನು ಇಸ್ರೇಲ್ ಸುಲಭವಾಗಿ ಹೊಡೆದು ಹಾಕಲು ಸಾಧ್ಯವಾಯಿತು. ಇಸ್ರೇಲ್ ಇಷ್ಟು ನಿಖರವಾಗಿ ತಮ್ಮ ಸೇನಾಧಿಕಾರಿಗಳು, ನೆಲೆಗಳನ್ನು ಪತ್ತೆ ಮಾಡಿ ದಾಳಿ ನಡೆಸುತ್ತಿದ್ದರಿಂದ ಅನುಮಾನಗೊಂಡು ಇರಾನ್ ಗುಪ್ತಚರ ಸಂಸ್ಥೆ ತನಿಖೆ ನಡೆಸಿತು. ಆಗ ಈ ಮಹಿಳೆ ಬಗ್ಗೆ ಅವರಿಗೆ ತಿಳಿದುಬಂದಿದೆ. ಆದರೆ ಆಕೆಯನ್ನು ಬಂಧಿಸಬೇಕು ಎನ್ನುವಷ್ಟರಲ್ಲಿ ಕಣ್ಮರೆಯಾಗಿದ್ದಾಳೆ. ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿ ಈಗ ಯಾರಿಗೂ ಇಲ್ಲ.

    Verbattle
    Verbattle
    Verbattle
    ಧರ್ಮ ಮೈ ರಾಜಕೀಯ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.
    Next Article ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !
    vartha chakra
    • Website

    Related Posts

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    February 14, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Tracymix on ಜ.29ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
    • LinwoodGah on ವಿದ್ಯುತ್ ಇಂಜಿನಿಯರ್ ಗಳಿಗೆ ಗೌರವ್ ಗುಪ್ತಾ ಕರೆ
    • Tracymix on ವಿದ್ಯುತ್ ಇಂಜಿನಿಯರ್ ಗಳಿಗೆ ಗೌರವ್ ಗುಪ್ತಾ ಕರೆ
    Latest Kannada News

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.