ನವದೆಹಲಿ.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ನೇತೃತ್ವದ ಸರ್ಕಾರದ ನೀತಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ಭಾರತ ಈ ಸಾಧನೆ ಜಗತ್ತಿನ ಹಲವು ರಾಷ್ಟ್ರಗಳ ಗಮನ ಸೆಳೆಯುತ್ತಿದೆ ಎಂದು ಬಿಂಬಿಸಲಾಗುತ್ತಿದೆ.
ಭಾರತದ ಪ್ರಗತಿಯನ್ನು ನೋಡಿ ಅನೇಕ ಮಂದಿ ಭಾರತದ ಪ್ರಜೆಗಳಾಗಲು ಬಯಸುತ್ತಿದ್ದಾರೆ ಎಂದು ಚಿತ್ರಿಸಲಾಗುತ್ತಿದೆ. ಆದರೆ ವಾಸ್ತವ ಸ್ಥಿತಿ ಬೇರೆಯಾಗಿದೆ.
ಅದನ್ನು ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಬಹಿರಂಗಪಡಿಸಿದೆ. ಭಾರತದಲ್ಲಿನ ಹಲವು ನೀತಿಗಳು ಉದ್ಯೋಗ ಶಿಕ್ಷಣ ಸೇರಿದಂತೆ ಅನೇಕ ಕಾರಣಗಳಿಂದ ಭಾರತದ ಪೌರತ್ವ ಬಿಟ್ಟು ಹೊರದೇಶಗಳಿಗೆ ತೆರಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ.
ಈ ಮೊದಲು ಕೂಡ ಭಾರತದ ಪೌರತ್ವ ತೊರೆದು ವಿದೇಶಗಳಲ್ಲಿ ನೆಲೆಸಲು ಕೆಲವರು ಹೋಗುತ್ತಿದ್ದರು ಆದರೆ ಆ ಸಂಖ್ಯೆ ಅತ್ಯಂತ ಕಡಿಮೆ ಇತ್ತು.ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಪ್ರಮಾಣ ದೊಡ್ಡದಾಗುತ್ತಾ ಸಾಗಿದೆ. ಪ್ರತಿ ವರ್ಷ ಕನಿಷ್ಠ ಎರಡು ಲಕ್ಷ ಜನ ದೇಶದ ಪೌರತ್ವ ತೊರೆಯುತ್ತಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಅವಧಿಯನ್ನು ಹೊರತುಪಡಿಸಿದರೆ ಕಳೆದ 12 ವರ್ಷಗಳಲ್ಲಿ ಪ್ರತಿ ವರ್ಷ ಎರಡು ಲಕ್ಷ ಜನ ಭಾರತೀಯರು ತಮ್ಮ ಪೌರತ್ವ ತೊರೆದು ಕೆನಡಾ, ಅಮೆರಿಕ, ಯುಕೆ ಅಥವಾ ಕೊಲ್ಲಿ ರಾಷ್ಟ್ರಗಳ ಪ್ರಜೆಗಳಾಗುತ್ತಿದ್ದಾರೆ.
2011 ಮತ್ತು 2024 ರ ನಡುವೆ 2.06 ಮಿಲಿಯನ್ ಅಂದರೆ 20 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ಕಳೆದ ಐದು ವರ್ಷಗಳಲ್ಲಿ ನಡೆದಿದೆ
ಹುಟ್ಟಿ ಬೆಳೆದ ಊರು ಬಿಟ್ಟು ಬರುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ ಲಕ್ಷಾಂತರ ಭಾರತೀಯರು ದೇಶವನ್ನೇ ಶಾಶ್ವತವಾಗಿ ಬಿಟ್ಟು ಹೋಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಲಕ್ಷಾಂತರ ಭಾರತೀಯರು ದೇಶವನ್ನು ಬಿಟ್ಟು ಹೋಗಿದ್ದಾರೆ. 2020 ರಿಂದ ಒಂಬತ್ತು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ಬಿಟ್ಟು ಬೇರೆಬೇರೆ ದೇಶಗಳ ಪೌರತ್ವವನ್ನು ಪಡೆದಿದ್ದಾರೆ. 2022ರಿಂದ ಪ್ರತಿ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಭಾರತೀಯ ಭಾರತೀಯ ಪೌರತ್ವವನ್ನು ತ್ಯಜಿಸುತ್ತಿದ್ದಾರೆ ಎಂಬುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕಾಂಗ್ರೆಸ್ ನ ಕೆಸಿ ವೇಣುಗೋಪಾಲ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ವಿದೇಶಾಂಗ ಸಚಿವರು ಕಳೆದ 2021 ರಲ್ಲಿ 85,256 ಭಾರತೀಯರು ಭಾರತದ ಪೌರತ್ವ ತೊರೆದಿದ್ದಾರೆ.
2022 ರಲ್ಲಿ 1, ಲಕ್ಷ 63, ಸಾವಿರ 2023 ರಲ್ಲಿ 2 ಲಕ್ಷದ 25 ಸಾವಿರ, 2024ರಲ್ಲಿ ಎರಡು ಲಕ್ಷದ 16 ಸಾವಿರ ಮತ್ತು 2025 ರಲ್ಲಿ ಇಲ್ಲಿಯವರೆಗೆ 2 ಲಕ್ಷದ 600 ಮಂದಿಗೆ ಭಾರತೀಯರು ತಮ್ಮ ಪೌರತ್ವ ತೊರೆದು ವಿದೇಶಗಳ ಪೌರತ್ವ ಸ್ವೀಕರಿಸಿದ್ದಾರೆ ಎಂದು ವಿವರಿಸಿದ್ದಾರೆ.
Previous Articleಜ಼ೀ ಕನ್ನಡ – ಕಲರ್ಸ್ ಮುಸುಕಿನ ಗುದ್ದಾಟ
Next Article ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ

