ಭುವನೇಶ್ವರ್:
ಸರ್ಕಾರಿ ನೌಕರನೊಬ್ಬ 30,000 ಲಂಚ ಪಡೆದಿದ್ದಾರೆ ಎಂಬ ಮಾಹಿತಿ ಆದರಿಸಿ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ಆತನನ್ನು ಬಂಧಿಸಲು ಅವರ ಮನೆಗೆ ಹೋದಾಗ ಕಂಡ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ.
ಒಡಿಶಾ ರಾಜ್ಯದ ಕಟಕ್ ವಲಯದ ಗಣಿ ಇಲಾಖೆ ಉಪ ನಿರ್ದೇಶಕ ದೇಬಬ್ರತ್ ಮೊಹಾಂತಿ ಎಂಬುವವರು ಕಲ್ಲಿದ್ದಲು ಮಾರಾಟಗಾರರೊೊಬ್ಬರಿಂದ ಮೂವತ್ತು ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದಿದ್ದರು. ಕಲ್ಲಿದ್ದಲು ಡಿಪೋ ಕಾರ್ಯಾಚರಣೆ ಮತ್ತು ಸಾರಿಗೆ ಪರವಾನಗಿ ನೀಡಲು ಅವರು ವ್ಯಾಪಾರಿಗಳಿಗೆ ಈ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಹಣ ಪಡೆಯುತ್ತಿರುವಾಗಲೇ ಅವರನ್ನು ಬಂಧಿಸಿದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಮತ್ತಷ್ಟು ವಿಚಾರಣೆಗಾಗಿ ಅವರ ಭುವನೇಶ್ವರದ ಪಟಿಯಾ ಪ್ರದೇಶದಲ್ಲಿರುವ ಅವರ ಫ್ಲಾಟ್ ಗೆ ಕೊಂಡೊಯ್ದು ಪರಿಶೀಲನೆ ನಡೆಸಿದರು.
ಆ ಫ್ಲಾಟ್ ನಲ್ಲಿ ಕಂಡ ವಸ್ತುಗಳು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳನ್ನು ಬೆಚ್ಚಿ ಬೀಳುವಂತೆ ಮಾಡಿತು.
ಗಣಿ ಅಧಿಕಾರಿ ಮಹಾಂತೀ ಅವರ ಪ್ಲಾಟ್ ನ ಅಲ್ಮೆರಾ,ಕಬರ್ಡ್,ಸೂಟ್ ಕೇಸ್ ಹೀಗೆ ಎಲ್ಲಿ ನೋಡಿದರೆ ಅಲ್ಲಿ ಗರಿಗರಿ ನೋಟುಗಳ ರಾಶಿಯೇ ಸಿಕ್ಕಿದೆ.
ಸಿಕ್ಕಿರುವ ಎಲ್ಲಾ ನಗದನ್ನು ಒಟ್ಟು ಮಾಡಿ ಲೆಕ್ಕ ಮಾಡಿದಾಗ ಅದರ ಒಟ್ಟು ಮೊತ್ತ ನಾಲ್ಕು ಕೋಟಿ ರೂಪಾಯಿಗಳನ್ನು ದಾಟಿದೆ.
ಅಷ್ಟೇ ಅಲ್ಲ ಮಹಂತಿ ಅವರ ಭುವನೇಶ್ವರದ ಪಹಲಾದಲ್ಲಿರುವ ಎರಡು ಅಂತಸ್ತಿನ ಮನೆಯ ಮೇಲೆ ದಾಳಿ ನಡೆಸಿದಾಗ ಇಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ 20 ಲಕ್ಷ ರೂಪಾಯಿ ನಗದು ಮತ್ತು ಚಿರಾಸ್ತಿಯ ಹಲವಾರು ದಾಖಲೆ ಪತ್ರಗಳು ಪತ್ತೆಯಾಗಿವೆ ಒಡಿಶಾದ ಇತಿಹಾಸದಲ್ಲೇ ಅಧಿಕಾರಿಯೊಬ್ಬರಿಂದ ಪತ್ತೆಯಾದ ಅಪಾರ ಪ್ರಮಾಣದ ಮೊತ್ತ ಇದಾಗಿದೆ ಎಂದು ಭ್ರಷ್ಟಾಚಾರ ನಿಗ್ರಹದಳ ತಿಳಿಸಿದೆ.

