ಬಾಲಿವುಡ್ ನಟಿ ಕುಬ್ರಾ ಸೇಠ್ ಬರೆದ ಓಪನ್ ಬುಕ್ ಎಂಬ ಪುಸ್ತಕ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ತಮ್ಮ ಜೀವನದ ಕತೆಗಳನ್ನು ಕುಬ್ರಾ ಸೇಠ್ ಇದರಲ್ಲಿ ಬರೆದಿದ್ದು ತಾವು 17ನೇ ವಯಸ್ಸಿನಲ್ಲಿದ್ದಾಗ ತಮಗೆ ಬೆಂಗಳೂರಿನಲ್ಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ.
ಮನೆಯಲ್ಲಿ ಆರ್ಥಿಕ ಸಂಕಷ್ಟವಿದ್ದ ಸಂದರ್ಭದಲ್ಲಿ ಬೆಂಗಳೂರಿನ ಹೋಟೆಲ್ ಮಾಲೀಕನೊಬ್ಬ ನಮಗೆ ಸಹಾಯ ಮಾಡುತ್ತಿದ್ದ. ನನಗೆ ಆಗ 17 ವರ್ಷ ಪ್ರಾಯವಾದ್ದರಿಂದ ನಾನು ಆತನಿಗೆ ಅಂಕಲ್ ಎನ್ನುತ್ತಿದ್ದೆ.ಆದರೆ ಆತ ಕಾರಿನಲ್ಲಿ ಹೋಗುವಾಗ ನನ್ನ ಬಟ್ಟೆ ಸರಿಸಿ ತೊಡೆ ಮುಟ್ಟುತ್ತಿದ್ದ. ನಮ್ಮ ಮನೆಗೆ ಬಂದು ತಾಯಿಯ ಎದುರೇ ನನ್ನನ್ನು ಚುಂಬಿಸುತ್ತಿದ್ದ ಎಂದು ಬರೆದಿದ್ದಾರೆ.
ಹೋಟೆಲ್ಗೆ ಕರೆದೊಯ್ದು ನನ್ನ ಎದುರು ಪ್ಯಾಂಟ್ ಬಿಚ್ಚಿದ್ದ.ನನ್ನ ಕನ್ಯತ್ವ ಕಳೆದು ಹೋಗುತ್ತಿದೆ ಎಂದು ನನಗೆ ಎನಿಸುತ್ತಿತ್ತು. ನನಗೆ ಅಲ್ಲಿಂದ ಓಡಬೇಕು ಎಂದರೂ ನನಗೆ ಆಗಲಿಲ್ಲ ಎಂದು ಕರಾಳ ನೆನಪನ್ನು ಮೆಲುಕು ಹಾಕಿದ್ದಾರೆ.
ಅಮ್ಮನೆದುರೇ ಆತ ನನ್ನ ತುಟಿಗೆ ಮುತ್ತಿಕ್ಕಿದ್ದ… ನಟಿ ಕುಬ್ರಾ ಸೇಠ್ ನೋವು ಬಹಿರಂಗ
Previous Articleಎನ್ಕೌಂಟರ್ನಲ್ಲಿ ಪಾಕ್ ಉಗ್ರ ಸೇರಿ ಇಬ್ಬರು ಭಯೋತ್ಪಾದಕರ ಹತ್ಯೆ
Next Article ಉಗ್ರರ ದಾಳಿ ಬೆದರಿಕೆ..