Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಕಲಿ‌ ದಾಖಲೆ ಸೃಷ್ಟಿಸಿ ವಂಚನೆ
    ಸುದ್ದಿ

    ನಕಲಿ‌ ದಾಖಲೆ ಸೃಷ್ಟಿಸಿ ವಂಚನೆ

    vartha chakraBy vartha chakraJune 8, 2022Updated:June 8, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಜೂ.8-ನಕಲಿ ದಾಖಲಾತಿ ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ‌ ವಿದ್ಯಾರಣ್ಯಪುರ ಪೊಲೀಸರು
    ಯಶಸ್ವಿಯಾಗಿದ್ದಾರೆ. ರೇಣುಗೋಪಾಲ್(49) ವರ್ಷ, (ನಕಲಿ ಕೆ.ವೇಣುಗೋಪಾಲ್), ಗೌರಮ್ಮ(48) (ನಕಲಿ ಟಿ.ಜಯಲಕ್ಷ್ಮಿ), ಶಂಕರ್( 44) (ನಕಲಿ ಟಿ.ನಾಗರಾಜ), ಎಂ.ಪ್ರಕಾಶ್(50) ಹಾಗು ಶಾಂತರಾಜು(43)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
    ಬಂಧಿತರ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್‍ಗಳ ನಕಲು ಪ್ರತಿಗಳನ್ನು ಹಾಗು ನೊಂದಾಯಿತ ಕಾಗದ ಪತ್ರಗಳ ನಕಲು ಪ್ರತಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
    ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಯಲಹಂಕದ ಚಿಕ್ಕಬೆಟ್ಟಹಳ್ಳಿ ಗ್ರಾಮದ ವಿಂಗಡಿಸಿರುವ ಶ್ರೀ ಸಾಯಿ ಲೇಔಟ್‍ ನ ನಂ.56ನೇ ನಿವೇಶನವನ್ನು 2015ನೇ ಸಾಲಿನಲ್ಲಿ ಡಾ.ಎನ್.ಗಿರಿ ಮತ್ತು ಡಾ. ಶ್ರೀಮತಿ ಗಿರಿ ರವರಿಂದ ಕಾರ್ತಿಕ.ಬಿ.ಎಸ್ ಅವರ ಹೆಸರಿಗೆ ಕ್ರಯ ಪತ್ರವಾಗಿತ್ತು. ಈ ಸ್ವತ್ತಿಗೆ ಸಂಬಂದಿಸಿದಂತೆ ಆರೋಪಿಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮಾರಾಟ ಮಾಡಿರುವ ಬಗ್ಗೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು.
    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೈಗೊಂಡ ತನಿಖೆಯಲ್ಲಿ ನಕಲಿ ಟಿ.ನಾಗರಾಜ್ ಮತ್ತು ನಕಲಿ ಟಿ.ಜಯಲಕ್ಷ್ಮೀ ಅವರು ನಕಲಿ ಕೆ.ವೇಣುಗೋಪಾಲ್ ಗೆ ಕಳೆದ 2016 ಜೂ.6 ರಂದು ದಾನ ಪತ್ರ ಮಾಡಿರುವುದಾಗಿ, ನಕಲಿ ಕೆ.ವೇಣುಗೋಪಾಲ್ 2019ರ ಜೂ.17 ರಂದು ಭಾಸ್ಕರ.ಬಿ ರವರಿಗೆ ಕ್ರಯ ಪತ್ರ ಮಾಡಿಕೊಟ್ಟಿರುತ್ತಾರೆ. ಭಾಸ್ಕರ್.ಬಿ ಅವರು ವಿ.ಮುನಿಲಕ್ಷ್ಮಮ್ಮ ಮತ್ತು ಎನ್.ಕುಶಾಲ್ ಗೆ 2020 ಆಗಸ್ಟ್ 12 ರಂದು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
    ಪ್ರಕರಣದಲ್ಲಿ ನಕಲಿ ಕೆ.ವೇಣುಗೋಪಾಲ್ ನನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ ಈತನ ನಿಜವಾದ ಹೆಸರು ರೇಣುಗೋಪಾಲ್ ಬಸವೇಶ್ವರನಗರ ಮುಖ್ಯರಸ್ತೆಯ ಅಗ್ರಾಹಾರ ದಾಸರಹಳ್ಳಿ ಎನ್ನುವುದಾಗಿತ್ತು. ಈತನನ್ನು ಹೆಚ್ಚಿನ ವಿಚಾರಣೆ ನಡೆಸಿ ಪ್ರಕರಣದ ಮುಖ್ಯ ಸೂತ್ರದಾರ ಈತನ ಸ್ನೇಹಿತನಾದ ರಾಜಾಜಿನಗರದ ಇಂಡಸ್ಟ್ರೀಯಲ್ ಟೌನ್ ನ ಎಂ.ಪ್ರಕಾಶ್ ಬಂಧಿಸಲಾಯಿತು.
    ಬಂಧಿತ ಪ್ರಕಾಶ್ ಆಟೋ ಕನ್ಸಲ್‍ಟೆಂಟ್ ಕೆಲಸ ಮಾಡಿಕೊಂಡಿದ್ದು ಈತ ಸ್ನೇಹಿತನಾದ ವಿದ್ಯಾರಣ್ಯಪುರದ ಎ.ಎಂ.ಎಸ್. ಲೇಔಟ್ ನ ಶಾಂತರಾಜು ಎಂಬಾತ ವರ್ಷಗಳಿಂದ ಖಾಲಿ ಇರುವ ನಿವೇಶನಗಳನ್ನು ಹುಡುಕಿ, ಅಕ್ಕಪಕ್ಕ ವಿಚಾರ ಮಾಡಿ ವಾರಾಸುದಾರರು ಸುಮಾರು ವರ್ಷಗಳಿಂದ ಜಾಗಕ್ಕೆ ಬರುತ್ತಿಲ್ಲವೆಂದು ತಿಳಿದು ಸಬ್ ರಿಜಿಸ್ಟರ್ ಕಛೇರಿಗಳಿಂದ ನೋಂದಾಯಿತ ಪ್ರತಿಗಳನ್ನು ಪಡೆದುಕೊಂಡು ನಿವೇಶನದ ಮಾಲೀಕರ ಹೆಸರುಗಳಲ್ಲಿ ಅಸಲಿ ವ್ಯಕ್ತಿಗಳ ಬದಲಿಗೆ ನಕಲು ವ್ಯಕ್ತಿಗಳನ್ನು ತೋರಿಸಿ ಸಬ್ ರಿಜಿಸ್ಟರ್ ಕಛೇರಿಗಳಲ್ಲಿ ದಾನಪತ್ರ ಮಾಡಿಕೊಂಡು ಸೃಷ್ಟಿಸಿಕೊಂಡು ಸ್ವತ್ತನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿ ಅಕ್ರಮ ಸಂಪಾದನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.
    ಪ್ರಮುಖ ಆರೋಪಿಗಳಾದ ರೇಣುಗೋಪಾಲ್ ಅಲಿಯಾಸ್ ಕೆ.ವೇಣುಗೋಪಾಲ್ ಕೆಂಗೇರಿ ಪೊಲೀಸ್ ಠಾಣಾ ಸರಹದ್ದಿನ ನಿವೇಶನವೊಂದಕ್ಕೆ ನಖಲು ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಅಕ್ರಮವೆಸಗಿದ್ದು ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ. ಆರೋಪಿಗಳ ಬಂಧನದಿಂದ 2 ಪ್ರಕರಣಗಳು ಪತ್ತೆಯಾಗಿದ್ದು ವಿದ್ಯಾರಣ್ಯಪುರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್‍ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

    Verbattle
    Verbattle
    Verbattle
    Bangalore
    Share. Facebook Twitter Pinterest LinkedIn Tumblr Email WhatsApp
    Previous Articleಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ; ಇದೊಂದು ಸ್ತ್ರೀ ವಿರೋಧಿ ಪಠ್ಯಪುಸ್ತಕ – ದಿವ್ಯಪ್ರಭಾ ಚಿಲ್ತಡ್ಕ
    Next Article ನಿಖಿಲ್ ಪುತ್ರನ ನಾಮಕರಣ
    vartha chakra
    • Website

    Related Posts

    ಸತ್ತವಳು ಎದ್ದು ಬಂದಾಗ!

    February 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    February 15, 2026

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    February 14, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    ಸತ್ತವಳು ಎದ್ದು ಬಂದಾಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LarryCax on ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ!
    • Aepxlk on ಚುನಾವಣೆಯಲ್ಲಿ ಮಗ ಸೋಲಬೇಕೆಂದು ಶಾಪ ಹಾಕಿದ ತಂದೆ | AK Antony
    • LinwoodGah on ಎದೆ ನಡುಗಿಸಿದ ಭೀಕರ ಹತ್ಯೆ.
    Latest Kannada News

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    February 16, 2026

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    February 16, 2026

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.