ಧಾರವಾಡ: ಇತ್ತಿಚೆಗಷ್ಟೆ ಮಾಜಿ ಸಿಎಂ ಸಿದ್ದರಾಮಯ್ಯ, ಬಸವರಾಜ್ ಹೊರಟ್ಟಿ, ಮೊಮ್ಮಕ್ಕಳನ್ನು ಆಡಿಸುತ್ತಾ, ಮನೆಯಲ್ಲಿ ಇರಲಿ ಎಂದು ನೀಡಿದ ಹೇಳಿಕೆಗೆ ಶುಕ್ರವಾರ ಸ್ವತಃ ಹೊರಟ್ಟಿ ಅವರೇ ಎದುರೇಟು ನೀಡಿದರು.
ಅವನಿಗೆ ಮೂರು ಮೊಮ್ಮಕ್ಕಳು ಇದ್ದಾರೆ. ಮತ್ತು ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಹತ್ತು ತಿಂಗಳು ಹಿರಿಯ ಬೇಕಾದರೆ ಅವನೇ ಮೊಮ್ಮಕ್ಕಳನ್ನು ಆಡಿಸಿಕೊಂಡು ಮನೆಯಲ್ಲಿ ಕೂರಲಿ ಎಂದು ಕಿಡಿಕಾರಿದರು. ಒಬ್ಬರ ಕಣ್ಣಲ್ಲಿ ಬೊಟ್ಟು ಹಾಕಲು ಹೋದರವರು ತಮ್ಮ ಕಣ್ಣು ನೋಡಿಕೊಳ್ಳಬೇಕು ಎಂದರು.
ರಾತ್ರಿ ಕಂಡ ಬಾವಿಗೆ ಹೊರಟ್ಟಿ ಹಗಲು ಬಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಬ್ಬೊಬ್ಬರು ಒಂದೊಂದು ಕಡೆ ಬಿಳ್ತಾರೆ. ರಾಜಕಾರಣದಲ್ಲಿ ವೈರಿ ಹಾಗು ಬೇರೆ ಎಂದು ತಿಳಿಯಬೇಡಿ. ನಾನು 16 ಸಿಎಂಗಳನ್ನು ನೋಡಿದ್ದೆನೆ. 182 ಮಾಜಿ ಮಂತ್ರಿಗಳನ್ನು ನೋಡಿದ್ದೇನೆ. 1200 ಶಾಸಕರನ್ನು ನೋಡಿದ್ದೆನೆ. ನನ್ನಷ್ಟು ಮಾಹಿತಿ ಈ ರಾಜ್ಯದಲ್ಲಿ ಯಾರಿಗೂ ಇಲ್ಲ ಎಂದರು.
ವಿಧಾನ ಸೌಧದಲ್ಲಿ ಎಲ್ಲಿ ಯಾವ ಕಲ್ಲಿದೆ ಎಂದು ನನಗೆ ಗೊತ್ತಿದೆ. ಎಲ್ಲವನ್ನು ಹೇಳಲು, ಸುಧಾರಣೆ ಮಾಡಲು ಆಗಲ್ಲ ಎಂದ ಅವರು ಈ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.