ಮುಂಬೈ: ಭಾರೀ ಪ್ರಮಾಣದಲ್ಲಿ ಷೇರು ಮಾರಾಟದಿಂದ ಸೋಮವಾರ ಷೇರು ಮಾರುಕಟ್ಟೆ 1,456 ಅಂಕ ಕುಸಿದಿದ್ದು, ಹೂಡಿಕೆದಾರರು ಬರೋಬ್ಬರಿ 6 ಲಕ್ಷ ಕೋಟಿ ರೂ.ಗಳಿಗೂ ಅಧಿಕ ನಷ್ಟ ಅನುಭವಿಸಿದ್ದಾರೆ.
ಬಜಾಜ್ ಫಿನ್ಸರ್ವ್ ಶೇಕಡಾ 7 ರಷ್ಟು ಕುಸಿದರೆ, ಬಜಾಜ್ ಫೈನಾನ್ಸ್ ಶೇ.5.44 ರಷ್ಟು ಕುಸಿದಿದೆ.
ಬಿಎಸ್ಇ ಸೆನ್ಸೆಕ್ಸ್ 1456.74 ಪಾಯಿಂಟ್ಸ್(ಶೇ.2.68) ಇಳಿಕೆ ಕಂಡು 52,846.70 ಅಂಕಗಳಿಗೆ ತಲುಪಿ ವಹಿವಾಟು ಮುಗಿಸಿದೆ.
ನಿಫ್ಟಿ ಕೂಡ 427.40 ಪಾಯಿಂಟ್ ಅಥವಾ ಶೇ.2.64 ರಷ್ಟು ಅಂಕ ಕಳೆದುಕೊಂಡು 15,774.40 ಪಾಯಿಂಟ್ಸ್ನೊಂದಿಗೆ ಇಂದಿನ ವಹಿವಾಟು ಅಂತ್ಯಗೊಳಿಸಿದೆ.
Previous Articleಕೋವಿಡ್, ಡೆಂಗಿ ಪ್ರಕರಣ ಹೆಚ್ಚಳದ ಬಗ್ಗೆ ಆತಂಕ ಬೇಡ!!
Next Article ಹತ್ತು ದಿನದಲ್ಲಿ ಕೊರೋನಾ 3 ಪಟ್ಟು ಹೆಚ್ಚಳ!